ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Flashback 2022: 1000 ದಿನಗಳ ನಂತರ ಶತಕದ ಬರ ಕೊನೆಗೊಳಿಸಿದ ವಿರಾಟ್ ಕೊಹ್ಲಿ

Flashback 2022: Virat Kohli Ends Century Drought After 1000 Days

ಕೋವಿಡ್-19 ನಂತರ ಕ್ರಿಕೆಟ್ ಪುನರಾರಂಭವಾದ ನಂತರ ವಿರಾಟ್ ಕೊಹ್ಲಿ ಆ ರೀತಿಯ ಕಳಪೆ ಫಾರ್ಮ್‌ಗೆ ಹೋಗುತ್ತಾರೆಂದು ಯಾರೂ ಅಂದುಕೊಂಡಿರಲಿಲ್ಲ. ಏಕೆಂದರೆ ಅದಕ್ಕೂ ಮುನ್ನ ಅವರು ಅದ್ಭುತ ಫಾರ್ಮ್‌ನಲ್ಲಿದ್ದರು. ಸ್ಪಿನ್ನರ್‌ಗಳು ಮತ್ತು ಹೊಸ ಬೌಲರ್‌ಗಳ ವಿರುದ್ಧ ಬ್ಯಾಟ್‌ನಿಂದ ರನ್ ಗಳಿಸುವ ಕಲೆ ಕರಗತ ಮಾಡಿಕೊಂಡಿದ್ದರು.

ಆದರೆ, 2020 ಮತ್ತು 2021ರಲ್ಲಿ ವಿರಾಟ್ ಕೊಹ್ಲಿ ತಮ್ಮ ಹೆಚ್ಚು ನಿರೀಕ್ಷಿತ 71ನೇ ಶತಕವನ್ನು ಗಳಿಸಲು ಸಾಧ್ಯವಾಗಲೇ ಇಲ್ಲ. ಈ ಸಂದರ್ಭದಲ್ಲಿ ಕೊಹ್ಲಿಯ ಅಂಕಿಅಂಶಗಳು ತುಂಬಾ ನಿರಾಶಾದಾಯಕವಾಗಿಲ್ಲದಿದ್ದರೂ, ಅವರು 30ರ ಸರಾಸರಿಯಲ್ಲಿ ಅರ್ಧಶತಕ ಬಾರಿಸಿದರು. ಇದು ಕೊಹ್ಲಿಯ ಅತ್ಯದ್ಭುತ ಬ್ಯಾಟಿಂಗ್ ದಾಖಲೆಗೆ ಸಾಕಾಗುತ್ತಿರಲಿಲ್ಲ.

IND vs SL: ಭಾರತ ವಿರುದ್ಧದ ಸರಣಿಗೆ ಶ್ರೀಲಂಕಾದ 20 ಸದಸ್ಯರ ಬಲಿಷ್ಠ ತಂಡ ಪ್ರಕಟIND vs SL: ಭಾರತ ವಿರುದ್ಧದ ಸರಣಿಗೆ ಶ್ರೀಲಂಕಾದ 20 ಸದಸ್ಯರ ಬಲಿಷ್ಠ ತಂಡ ಪ್ರಕಟ

ವಿರಾಟ್ ಕೊಹ್ಲಿ 2022ಕ್ಕೆ ಪ್ರವೇಶಿಸಿದರು, ಆರಂಭದಲ್ಲಿ ಬಹುಶಃ ಅವರ ವೃತ್ತಿಜೀವನದ ಅತ್ಯಂತ ಕಳಪೆ ಕ್ರಿಕೆಟ್ ಆಡಿದರು ಮತ್ತು ಹೋರಾಡಿದರು. ಇದು ಬಹಳಷ್ಟು ಪಂದ್ಯಗಳಲ್ಲಿ ಅರ್ಧಶತಕ ಸಹ ಹೊಡೆಯಲು ಹೆಣಗಾಡುತ್ತಿರುವುದನ್ನು ಕಂಡುಬಂತು. ಜುಲೈ ವೇಳೆಗೆ ಅವರು 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ರನ್‌ಗಳ ಗಡಿಯನ್ನು ದಾಟಿರಲಿಲ್ಲ.

ಸತತ ಕ್ರಿಕೆಟ್ ವೇಳಾಪಟ್ಟಿಯು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ

ಸತತ ಕ್ರಿಕೆಟ್ ವೇಳಾಪಟ್ಟಿಯು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ

ವಿರಾಟ್ ಕೊಹ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮಾನಸಿಕ ಆರೋಗ್ಯದೊಂದಿಗಿನ ಹೋರಾಟಗಳ ಬಗ್ಗೆ ಆಗಾಗ ಬಹಿರಂಗವಾಗಿ ಮಾತನಾಡಿದರು. ಅವರ ಸತತ ಕ್ರಿಕೆಟ್ ವೇಳಾಪಟ್ಟಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವುದನ್ನು ತಿಳಿಸಿದ್ದರು.

ಸ್ಟಾರ್ ಬ್ಯಾಟರ್‌ನ ಹೋರಾಟವು ಕ್ರೀಡೆಯಲ್ಲಿ ಮಾನಸಿಕ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳುವಲ್ಲಿ ಕ್ರೀಡಾಪಟುಗಳಿಗೆ ಸಹಾಯ ಮಾಡಿತು.

ಏಷ್ಯಾ ಕಪ್‌ನಲ್ಲಿ ಬಹು ನಿರೀಕ್ಷಿತ 71ನೇ ಅಂತಾರಾಷ್ಟ್ರೀಯ ಶತಕ

ಏಷ್ಯಾ ಕಪ್‌ನಲ್ಲಿ ಬಹು ನಿರೀಕ್ಷಿತ 71ನೇ ಅಂತಾರಾಷ್ಟ್ರೀಯ ಶತಕ

ಏಷ್ಯಾ ಕಪ್ 2022ರ ಆಗಸ್ಟ್-ಸೆಪ್ಟೆಂಬರ್‌ ವೇಳೆ ವಿರಾಟ್ ಕೊಹ್ಲಿ ಒಂದು ತಿಂಗಳ ವಿಶ್ರಾಂತಿಯ ನಂತರ ಗಮನಾರ್ಹವಾದ ಪುನರಾಗಮನವನ್ನು ಮಾಡಿದರು. ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು ಮತ್ತು ಅಫ್ಘಾನಿಸ್ತಾನದ ವಿರುದ್ಧ ಅವರ ಬಹು ನಿರೀಕ್ಷಿತ 71ನೇ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿದರು.

ಆ ಕ್ಷಣ ಇಡೀ ಕ್ರಿಕೆಟ್ ಜಗತ್ತು ಭಾವನಾತ್ಮಕ ಸಂದೇಶಗಳನ್ನು ಹಂಚಿಕೊಂಡಿತು. ವಿರಾಟ್ ಕೊಹ್ಲಿ ತನ್ನ ಮಾನಸಿಕ ಹೋರಾಟಗಳ ಬಗ್ಗೆ ತೆರೆದಿಟ್ಟ ರೀತಿ, ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗಿನ ಸಂಬಂಧವು ಅನೇಕರನ್ನು ಸ್ಫೂರ್ತಿ ನೀಡಿತು. ಶತಕದ ನಂತರ ಘರ್ಜಿಸುವ ಯುವ ವಿರಾಟ್ ಕೊಹ್ಲಿ ಮೈದಾನದ ಸುತ್ತ ಓಡುವ ದಿನಗಳು ಮುಗಿದು ಹೋಗಿವೆ.

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಫಾರ್ಮ್

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಫಾರ್ಮ್

ಇನ್ನು ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರಲ್ಲಿ ಪಾಕಿಸ್ತಾನದ ವಿರುದ್ಧ ಜೀವಮಾನದ ಇನ್ನಿಂಗ್ಸ್ ಅಜೇಯ 82 ರನ್‌ಗಳನ್ನು ಒಳಗೊಂಡಿತ್ತು. ಇದು 160 ರನ್‌ಗಳ ಚೇಸ್‌ನಲ್ಲಿ ಭಾರತವನ್ನು ಗೆಲ್ಲಿಸುವಲ್ಲಿ ಸಹಾಯವಾಯಿತು.

ಟಿ20 ವಿಶ್ವಕಪ್ ಗೆಲುವು ವಿರಾಟ್ ಕೊಹ್ಲಿಯ ಅಂತಿಮ ಗುರಿಯಾಗಿರಬಹುದು, ಆದರೆ 2023ರ ಏಕದಿನ ವಿಶ್ವಕಪ್ ಸಹ ಅವರ ಮುಂದಿನ ಗುರಿಯಲ್ಲೊಂದಾಗಿದೆ.

42 ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳೊಂದಿಗೆ 1,348 ರನ್

42 ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳೊಂದಿಗೆ 1,348 ರನ್

ಒಟ್ಟಾರೆ 2022ರಲ್ಲಿ ವಿರಾಟ್ ಕೊಹ್ಲಿ ಈ ವರ್ಷ 42 ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು 11 ಅರ್ಧ ಶತಕಗಳೊಂದಿಗೆ 38.51 ಸರಾಸರಿಯಲ್ಲಿ 1,348 ರನ್ ಗಳಿಸಿದರು. ಇದರಲ್ಲಿ ಅತ್ಯುತ್ತಮ ಸ್ಕೋರ್ ಅಜೇಯ 122 ರನ್ ಆಗಿದೆ.

ಅವರ ಟಿ20 ಅಂಕಿಅಂಶಗಳು ಹೆಚ್ಚು ಎದ್ದು ಕಾಣುತ್ತವೆ. ಈ ವರ್ಷದ ಚುಟುಕು ಕ್ರಿಕೆಟ್ ಸ್ವರೂಪದಲ್ಲಿ 20 ಪಂದ್ಯಗಳಲ್ಲಿ ಒಂದು ಶತಕ ಮತ್ತು ಎಂಟು ಅರ್ಧ ಶತಕಗಳೊಂದಿಗೆ 55.78 ಸರಾಸರಿಯಲ್ಲಿ 781 ರನ್ ಗಳಿಸಿದರು.

Story first published: Wednesday, December 28, 2022, 21:29 [IST]
Other articles published on Dec 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X