ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐನಲ್ಲಿ ಮಾಜಿ ಕ್ರಿಕೆಟಿಗ, ಕನ್ನಡಿಗ ಸುನಿಲ್ ಜೋಶಿಗೆ ಜ್ಯಾಕ್ ಪಾಟ್

ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐಯ ಆಯ್ಕೆ ಸಮಿತಿಗೆ ಅಧ್ಯಕ್ಷರ ನೇಮಕ ಆಯ್ಕೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ ಎನ್ನುವ ಮಾಹಿತಿಯಿದೆ. ಇಂದು (ಮಾ 4) ಈ ಸಂಬಂಧ, ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಅವಧಿ ಕಳೆದ ನವೆಂಬರ್‌ ನಲ್ಲಿ ಅಂತ್ಯವಾಗಿತ್ತು. ಆದರೆ, ಹೊಸ ಆಯ್ಕೆ ಸಮಿತಿ ರಚನೆಯಾಗದ ಹಿನ್ನೆಲೆಯಲ್ಲಿ ಪ್ರಸಾದ್ ಮತ್ತು ರಾಜಸ್ಥಾನದ ಬ್ಯಾಟ್ಸ್ ಮ್ಯಾನ್ ಗಗನ್ ಖೋಡಾ ಸಮಿತಿಯಲ್ಲಿ ಮುಂದುವರಿದಿದ್ದರು.

ಬಿಸಿಸಿಐ ಆಯ್ಕೆ ಸಮಿತಿ ಕೊನೆ ಸುತ್ತಿನಲ್ಲಿ ಉಳಿದ ಅಭ್ಯರ್ಥಿಗಳ್ಯಾರು? ಬಿಸಿಸಿಐ ಆಯ್ಕೆ ಸಮಿತಿ ಕೊನೆ ಸುತ್ತಿನಲ್ಲಿ ಉಳಿದ ಅಭ್ಯರ್ಥಿಗಳ್ಯಾರು?

ಈಗ ಮುಕ್ತಾಯಗೊಂಡಿರುವ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾವನ್ನು ಪ್ರಸಾದ್ - ಗಗನ್ ಖೋಡಾ ಸಮಿತಿ ಆಯ್ಕೆ ಮಾಡಿತ್ತು. ಕಿವೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದ ಕಳಪೆ ಸಾಧನೆಯಿಂದಾಗಿ, ಆಯ್ಕೆ ಸಮಿತಿಯ ಮೇಲೆ ಕೆಲವು ಹಿರಿಯ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದರು.

ಮುಂಬರುವ, ಸ್ವದೇಶದಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಬೇಕಾಗಿರುವುದರಿಂದ, ಇಂದೇ ಆಯ್ಕೆ ಸಮಿತಿಯ ಅಧ್ಯಕ್ಷರ ಹೆಸರು ಹೊರಬೀಳಲಿದೆ. ಕನ್ನಡಿಗ ಜೋಶಿಗೆ ಜ್ಯಾಕ್ ಪಾಟ್ ಸಾಧ್ಯತೆ?

ಟೆಸ್ಟ್ ರ‍್ಯಾಂಕಿಂಗ್‌: ಭಾರತದ ಸ್ಥಾನ ಭದ್ರ, 2ನೇ ಸ್ಥಾನದಲ್ಲಿ ಭಾರೀ ಬದಲಾವಣೆಟೆಸ್ಟ್ ರ‍್ಯಾಂಕಿಂಗ್‌: ಭಾರತದ ಸ್ಥಾನ ಭದ್ರ, 2ನೇ ಸ್ಥಾನದಲ್ಲಿ ಭಾರೀ ಬದಲಾವಣೆ

ದಕ್ಷಿಣ ಆಫ್ರಿಕಾ ವಿರುದ್ಧ ಮುಂದಿನ ಸರಣಿ

ದಕ್ಷಿಣ ಆಫ್ರಿಕಾ ವಿರುದ್ಧ ಮುಂದಿನ ಸರಣಿ

"ಭಾರತ ತನ್ನ ಮುಂದಿನ ಸರಣಿಯನ್ನು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ಆಡಲಿದೆ. ಈ ಸರಣಿಗೆ ಹೊಸ ಆಯ್ಕೆ ಸಮಿತಿ ತಂಡವನ್ನು ಪ್ರಕಟಗೊಳಿಸಲಿದೆ" ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಆಯ್ಕೆ ಸಮಿತಿಗೆ ಯಾರ ಹೆಸರನ್ನು ಅಂತಿಮಗೊಳಿಸಬೇಕು ಎನ್ನುವ ವಿಚಾರದಲ್ಲಿ ಬಿಸಿಸಿಐ, ಮಂಗಳವಾರ (ಮಾ 3) ಸಭೆ ನಡೆಸಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಆಲ್ರೌಂಡರ್ ಮದನ್ ಲಾಲ್ ಮತ್ತು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್ ಶಾ ನೇತೃತ್ವದಲ್ಲಿ ಸಭೆ ನಡೆದಿದೆ. ಒಟ್ಟು, ನಾಲ್ವರ ಹೆಸರು ಪ್ರತಿಷ್ಟಿತ ಹುದ್ದೆಗೆ ಕೇಳಿಬರುತ್ತಿದ್ದು, ಅದರಲ್ಲಿ ಇಬ್ಬರು ಕರ್ನಾಟಕದ ಮೂಲದವರು ಎನ್ನುವುದು ಗಮನಿಸಬೇಕಾದ ವಿಚಾರ.

ಸುನಿಲ್ ಜೋಶಿ ಹೆಸರು ಮಂಚೂಣಿಯಲ್ಲಿ

ಸುನಿಲ್ ಜೋಶಿ ಹೆಸರು ಮಂಚೂಣಿಯಲ್ಲಿ

ಲಭ್ಯ ಮಾಹಿತಿಯ ಪ್ರಕಾರ, ಕನ್ನಡಿಗ, ವೃತ್ತಿ ಜೀವನದಲ್ಲಿ ಆಲ್ರೌಂಡರ್ ಆಗಿದ್ದ ಸುನಿಲ್ ಜೋಶಿ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ. ಬಹುತೇಕ ಇವರ ಹೆಸರೇ ಅಂತಿಮಗೊಳ್ಳುವ ಸಾಧ್ಯತೆಯಿದೆ. ಹದಿನೈದು ಟೆಸ್ಟ್ ಪಂದ್ಯವನ್ನು ಆಡಿರುವ ಜೋಶಿ, ಆಯ್ಕೆ ಸಮಿತಿಯ ಅಧ್ಯಕ್ಷರಾಗಿ, ಎಂ.ಎಸ್.ಕೆ.ಪ್ರಸಾದ್ ಜಾಗಕ್ಕೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ವೆಂಕಟೇಶ್ ಪ್ರಸಾದ್ ಹೆಸರೂ ಕೇಳಿಬರುತ್ತಿದೆ

ವೆಂಕಟೇಶ್ ಪ್ರಸಾದ್ ಹೆಸರೂ ಕೇಳಿಬರುತ್ತಿದೆ

ಜೋಶಿ ಜೊತೆ ಇನ್ನೊಂದು ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಹರ್ವೀಂದರ್ ಸಿಂಗ್. ಇದರ ಜೊತೆಗೆ, ಇನ್ನೊಬ್ಬ ಕನ್ನಡಿಗ ವೆಂಕಟೇಶ್ ಪ್ರಸಾದ್, ರಾಜೇಶ್ ಚೌಹಾಣ್ ಮತ್ತು ಲಕ್ಷ್ಮಣ್ ಶಿವರಾಮಕೃಷ್ಣನ್. ಈ ಪೈಕಿ ಸುನಿಲ್ ಜೋಷಿ ಅಥವಾ ಹರ್ವೀಂದರ್ ಸಿಂಗ್ ಇಬ್ಬರಲ್ಲಿ ಒಬ್ಬರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನುತ್ತವೆ ಬಿಸಿಸಿಐ ಮೂಲಗಳು.

Story first published: Wednesday, March 4, 2020, 9:45 [IST]
Other articles published on Mar 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X