ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬ್ ವಿಲ್ಲೀಸ್ ನಿಧನ

Former England captain Bob Willis dies aged 70

ಲಂಡನ್, ಡಿಸೆಂಬರ್ 4: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬ್ ವಿಲ್ಲೀಸ್ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ವೇಗದ ಬೌಲರ್ ಆಗಿದ್ದ ವಿಲ್ಲೀಸ್ 1971ರಿಂದ 1984ರ ವರೆಗೆ 90 ಟೆಸ್ಟ್ ಪಂದ್ಯಗಳಲ್ಲಿ 325 ವಿಕೆಟ್‌ ದಾಖಲೆ ಹೊಂದಿದ್ದರು.

ರಣಜಿ ಟ್ರೋಫಿ 2019-20: 15 ಆಟಗಾರರ ಕರ್ನಾಟಕ ತಂಡ ಪ್ರಕಟರಣಜಿ ಟ್ರೋಫಿ 2019-20: 15 ಆಟಗಾರರ ಕರ್ನಾಟಕ ತಂಡ ಪ್ರಕಟ

1981ರಲ್ಲಿ ಇಂಗ್ಲೆಂಡ್‌ನ ಹೆಡಿಂಗ್ಲಿಯಲ್ಲಿ ನಡೆದಿದ್ದ ಆ್ಯಷಸ್ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ 43 ರನ್ ನೀಡಿ 8 ವಿಕೆಟ್ ಉರುಳಿಸಿ ಇಂಗ್ಲೆಂಡ್‌ ಗೆಲುವಿಗೆ ವಿಲ್ಲೀಸ್ ಕಾರಣರಾಗಿದ್ದರು. ಇದು ವಿಲ್ಲೀಸ್‌ ಅವರ ವೃತ್ತಿ ಜೀವನದ ಶ್ರೇಷ್ಠ ಸಾಧನೆಯಾಗಿ ಗಮನ ಸೆಳೆದಿತ್ತು.

ಬಾಬ್ ವಿಲ್ಲೀಸ್ 1984ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದಕ್ಕೂ ಮೊದಲು 18 ಟೆಸ್ಟ್ ಪಂದ್ಯಗಳಲ್ಲಿ, 29 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. 1991ರಲ್ಲಿ ಸ್ಕೈ ಸ್ಪೋರ್ಟ್ಸ್‌ಗೆ ಸೇರುವ ಮುನ್ನ ವಿಲ್ಲೀಸ್, ಬಿಬಿಸಿ ಟಿವಿಗೆ ಸಾರಾಂಶ ಒದಗಿಸುವ ಕಾರ್ಯ ನಡೆಸಿದ್ದರು.

ಐಪಿಎಲ್‌ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಜಮೈಕಾ ಸ್ಪ್ರಿಂಟರ್‌ ಯೋಹಾನ್ ಬ್ಲೇಕ್!?ಐಪಿಎಲ್‌ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಜಮೈಕಾ ಸ್ಪ್ರಿಂಟರ್‌ ಯೋಹಾನ್ ಬ್ಲೇಕ್!?

ವಿಲ್ಲೀಸ್ ತನ್ನ ವೃತ್ತಿ ಜೀವನದ ಆರಂಭದ ಎರಡು ವರ್ಷ ಸರ್ರೆ ತಂಡಕ್ಕಾಗಿ ಆಡಿದ್ದರು. ಅನಂತರ ಸುಮಾರು 12 ವರ್ಷಗಳ ಕಾಲ ವಾರ್ವಿಕ್‌ಷೈರ್ ಪರ ಆಡಿದ್ದ ಬಾಬ್, 308 ಪ್ರಥಮದರ್ಜೆ ಪಂದ್ಯಗಳಲ್ಲಿ 24.99ರ ಸರಾಸರಿಯಂತೆ ಒಟ್ಟು 899 ವಿಕೆಟ್‌ಗಳ ದಾಖಲೆ ಹೊಂದಿದ್ದಾರೆ.

Story first published: Wednesday, December 4, 2019, 23:24 [IST]
Other articles published on Dec 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X