ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತದ ಆಯ್ಕೆ ಸಮಿತಿಯವರು ವಿಶ್ವಕಪ್‌ ವೇಳೆ ಅನುಷ್ಕಾಗೆ ಟೀ ತರುತ್ತಿದ್ದರು'

Former India wicket-keeper Farokh Engineer tears into selection committee

ನವದೆಹಲಿ, ಅಕ್ಟೋಬರ್ 31: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಫಾರೂಖ್ ಇಂಜಿನಿಯರ್, ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ವಿರುದ್ಧ ಗುಡುಗುವುದನ್ನು ನಿಲ್ಲಿಸಿಲ್ಲ. ಭಾರತದ ಮಾಜಿ ಕೀಪರ್, ಬ್ಯಾಟ್ಸ್‌ಮನ್ ಎಂಎಸ್‌ಕೆ ಪ್ರಸಾದ್ ಮುಂದಾಳತ್ವದ ಆಯ್ಕೆ ಸಮಿತಿಯನ್ನು ಫಾರೂಖ್ ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

 ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಗೆಲ್ಲುತ್ತಾ?! ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಗೆಲ್ಲುತ್ತಾ?!

ಐಸಿಸಿ ಕ್ರಿಕೆಟ್ ವಿಶ್ವಕಪ್ ವೇಳೆಯ ಸಂದರ್ಭವೊಂದನ್ನೂ ನೆನಪಿಸಿಕೊಂಡಿರುವ ಫಾರೂಖ್, ಎಂಎಸ್‌ಕೆ ಪ್ರಸಾದ್ ಬಗ್ಗೆ ಸಿಡುಕಾಡಿದ್ದಾರೆ. ಅಷ್ಟೇ ಅಲ್ಲ, ಪ್ರಸಾದ್ ಮತ್ತವರ ಆಯ್ಕೆ ಸಮಿತಿಯನ್ನು 'ಮಿಕ್ಕೀ ಮೌಸ್ ಆಯ್ಕೆ ಸಮಿತಿ' ಎಂದು ವ್ಯಂಗ್ಯವಾಡಿದ್ದಾರೆ.

ಮೂವರು ಪ್ರಮುಖ ಅಧಿಕಾರಿಗಳ ಅಮಾನತು ಮಾಡಿದ ಕ್ರಿಕೆಟ್ ಸೌತ್‌ ಆಫ್ರಿಕಾಮೂವರು ಪ್ರಮುಖ ಅಧಿಕಾರಿಗಳ ಅಮಾನತು ಮಾಡಿದ ಕ್ರಿಕೆಟ್ ಸೌತ್‌ ಆಫ್ರಿಕಾ

ಎಂಎಸ್‌ಕೆ ಪ್ರಸಾದ್ ಸೇರಿದಂತೆ ಆಯ್ಕೆ ಸಮಿತಿಯ ಹೆಚ್ಚಿನವರಿಗೆ ಹೆಚ್ಚು ಪಂದ್ಯಗಳನ್ನಾಡಿದ ಅನುಭವ ಇಲ್ಲ. ಈ ವಿಚಾರವನ್ನೂ ಮುಂದಿಟ್ಟು ಫಾರೂಖ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಿಕ್ಕೀ ಮೌಸ್ ಆಯ್ಕೆ ಸಮಿತಿ

ಮಿಕ್ಕೀ ಮೌಸ್ ಆಯ್ಕೆ ಸಮಿತಿ

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ಫಾರೂಖ್, 'ನಾವು ಮಿಕ್ಕೀ ಮೌಸ್ ಆಯ್ಕೆ ಸಮಿತಿಯನ್ನು ಹೊಂದಿದ್ದೇವೆ,' ಎಂದಿದ್ದಾರೆ. ಪುಣಿಯಲ್ಲಿ ಮಾಜಿ ಆಟಗಾರ ದಿಲೀಪ್ ವೆಂಗ್ ಸರ್ಕಾರ್ ಕ್ರಿಕೆಟ್ ಅಕಾಡೆಮಿಗೆ ಭೇಟಿ ಕೊಟ್ಟಿದ್ದ ಇಂಜಿನಿಯರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಅರ್ಹರಾಗಲು ಹೇಗೆ ಸಾಧ್ಯ?

ಅರ್ಹರಾಗಲು ಹೇಗೆ ಸಾಧ್ಯ?

'ಬರೀ 10-12 ಟೆಸ್ಟ್ ಪಂದ್ಯಗಳನ್ನು ಆಡಿರುವವರು ಆಯ್ಕೆ ಸಮಿತಿಗೆ ಅರ್ಹರಾಗಲು ಹೇಗೆ ಸಾಧ್ಯ? ಎಂದು ಫಾರೂಖ್ ಪ್ರಶ್ನಿಸಿದ್ದಾರೆ. 1961ರಿಂದ 1976ರ ವರೆಗೆ ಭಾರತ ಪರ ಆಡಿದ್ದ ಇಂಜಿನಿಯರ್, 46 ಟೆಸ್ಟ್, 5 ಏಕದಿನ ಪಂದ್ಯಗಳನ್ನು ಆಡಿದ್ದರು.

ಅನುಷ್ಕಾ ಶರ್ಮಾಗೆ ಟೀ

ಅನುಷ್ಕಾ ಶರ್ಮಾಗೆ ಟೀ

ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧಿಕಾರಿಗಳು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಈ ಬಾರಿ ನಡೆದಿದ್ದ ವಿಶ್ವಕಪ್ ವೇಳೆ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಟೀ ಕೊಟ್ಟಿದ್ದನ್ನು ನೋಡಿದ್ದಾಗಿಯೂ ಫಾರೂಖ್ ಹೇಳಿಕೊಂಡಿದ್ದಾರೆ. 'ಅವರೆಲ್ಲರೂ ಅನುಷ್ಕಾಗೆ ಚಹಾದ ಕಪ್ ತೆಗೆದುಕೊಂಡು ಹೋಗುತ್ತಿದ್ದರು,' ಎಂದು ಇಂಜಿನಿಯರ್ ಅಣಕವಾಡಿದ್ದಾರೆ.

ಆಟದ ಅನುಭವದ ಕೊರತೆ

ಆಟದ ಅನುಭವದ ಕೊರತೆ

ಸದ್ಯ ಆಯ್ಕೆ ಸಮಿತಿಯಲ್ಲಿರುವ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ 6 ಟೆಸ್ಟ್, 17 ಏಕದಿನ ಪಂದ್ಯಗಳು, ದೇವಾಂಗ್ ಗಾಂಧಿ 4 ಟೆಸ್ಟ್, 3 ಏಕದಿನ ಪಂದ್ಯಗಳು, ಸಂದೀಪ್ ಸಿಂಗ್ 3 ಟೆಸ್ಟ್, 5 ಏಕದಿನ ಪಂದ್ಯಗಳು, ಜತಿನ್ ಪರಂಜ್‌ಪೆ 4 ಏಕದಿನ ಪಂದ್ಯಗಳು, ಗಗನ್ ಖೋಡಾ 2 ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ.

Story first published: Thursday, October 31, 2019, 17:40 [IST]
Other articles published on Oct 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X