ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾವುಕರಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕನ್ನಡಿಗ ಸ್ಟುವರ್ಟ್ ಬಿನ್ನಿ

Former Indian all-rounder Stuart Binny retires from all forms of cricket

ಟೀಮ್ ಇಂಡಿಯಾ ತಂಡದ ಆಲ್ ರೌಂಡರ್ ಆಟಗಾರನಾಗಿದ್ದ ಸ್ಟುವರ್ಟ್ ಬಿನ್ನಿ ಆಗಸ್ಟ್ 29ರ ಭಾನುವಾರದಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸುವುದರ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಇನ್ನು ಭಾರತದ ಪರ 6 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳು, 14 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು 3 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದಿದ್ದ ಸ್ಟುವರ್ಟ್ ಬಿನ್ನಿ ಟೆಸ್ಟ್ ಕ್ರಿಕೆಟ್‍ನಲ್ಲಿ ಒಟ್ಟು 194 ರನ್‌ಗಳು, ಏಕದಿನ ಕ್ರಿಕೆಟ್‍ನಲ್ಲಿ 230 ರನ್‌ಗಳು ಮತ್ತು ಟಿ ಟ್ವೆಂಟಿ ಪಂದ್ಯಗಳಲ್ಲಿ 35 ರನ್‌ಗಳು ಭಾರತ ತಂಡದ ಪರ ಕಲೆಹಾಕಿದ್ದಾರೆ.

ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಬಲಗೈ ವೇಗಿ ಕೂಡ ಆಗಿದ್ದ ಸ್ಟುವರ್ಟ್ ಬಿನ್ನಿ ಟೀಮ್ ಇಂಡಿಯಾ ಪರ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 3 ವಿಕೆಟ್, ಏಕದಿನ ಪಂದ್ಯಗಳಲ್ಲಿ 20 ವಿಕೆಟ್ ಮತ್ತು ಟಿ ಟ್ವೆಂಟಿ ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್‌ನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಸ್ಟುವರ್ಟ್ ಬಿನ್ನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಒಂದು ಬಾರಿ 5 ವಿಕೆಟ್‍ಗಳ ಗೊಂಚಲನ್ನೂ ಸಹ ಪಡೆದುಕೊಂಡಿದ್ದಾರೆ.

ಪೂಜಾರ ಕಳಪೆ ಬ್ಯಾಟಿಂಗ್ ಬಗ್ಗೆ ಡ್ರೆಸಿಂಗ್ ರೂಮ್‌ನಲ್ಲಿ ಆಗುತ್ತಿದ್ದ ಚರ್ಚೆಯನ್ನು ಬಹಿರಂಗಪಡಿಸಿದ ರೋಹಿತ್ ಶರ್ಮಾಪೂಜಾರ ಕಳಪೆ ಬ್ಯಾಟಿಂಗ್ ಬಗ್ಗೆ ಡ್ರೆಸಿಂಗ್ ರೂಮ್‌ನಲ್ಲಿ ಆಗುತ್ತಿದ್ದ ಚರ್ಚೆಯನ್ನು ಬಹಿರಂಗಪಡಿಸಿದ ರೋಹಿತ್ ಶರ್ಮಾ

ಇನ್ನು ಅಂತಾರಾಷ್ಟ್ರೀಯ ಪಂದ್ಯಗಳನ್ನು ಹೊರತುಪಡಿಸಿದರೆ ಕನ್ನಡಿಗ ಸ್ಟುವರ್ಟ್ ಬಿನ್ನಿ ಒಟ್ಟು 95 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಹೀಗೆ 95 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಭಾಗವಹಿಸಿದ್ದ ಸ್ಟುವರ್ಟ್ ಬಿನ್ನಿ 130ರ ಸರಾಸರಿಯಲ್ಲಿ 880 ರನ್ ಬಾರಿಸಿದ್ದರೆ, 22 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

ಐಪಿಎಲ್ ಆಡುತ್ತೇನೆ ಆದರೆ ಟಿ ಟ್ವೆಂಟಿ ವಿಶ್ವಕಪ್ ಅನುಮಾನ ಎಂದು ಶಾಕ್ ನೀಡಿದ ಇಂಗ್ಲೆಂಡ್‌ನ ಸ್ಟಾರ್ ಆಟಗಾರಐಪಿಎಲ್ ಆಡುತ್ತೇನೆ ಆದರೆ ಟಿ ಟ್ವೆಂಟಿ ವಿಶ್ವಕಪ್ ಅನುಮಾನ ಎಂದು ಶಾಕ್ ನೀಡಿದ ಇಂಗ್ಲೆಂಡ್‌ನ ಸ್ಟಾರ್ ಆಟಗಾರ

ಹೀಗೆ ಸಿಕ್ಕ ಅವಕಾಶಗಳಲ್ಲಿ ಜವಾಬ್ದಾರಿಯುತ ಆಟವನ್ನು ಆಡಲು ಪ್ರಯತ್ನಿಸಿದ್ದ ಸ್ಟುವರ್ಟ್ ಬಿನ್ನಿ ಟೀಮ್ ಇಂಡಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸ್ಟಾರ್ ಆಟಗಾರನಾಗಿ ಹೆಚ್ಚಿನ ಸಮಯದವರೆಗೆ ಮಿಂಚಲು ಸಾಧ್ಯವಾಗಲೇ ಇಲ್ಲ. ತಂಡದಲ್ಲಿ ಖಾಯಂ ಸದಸ್ಯನಾಗಿ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲರಾದ ಸ್ಟುವರ್ಟ್ ಬಿನ್ನಿ ದಿನಕಳೆದಂತೆ ಸಿಗುತ್ತಿದ್ದ ಕೊಂಚ ಅವಕಾಶಗಳೂ ಸಿಗದೇ ರಣಜಿ ಮತ್ತು ಐಪಿಎಲ್ ಟೂರ್ನಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇದೀಗ ದಿಢೀರ್ ನಿರ್ಧಾರ ಕೈಗೊಂಡಿರುವ ಸ್ಟುವರ್ಟ್ ಬಿನ್ನಿ "ನಾನು ಪ್ರಥಮ ದರ್ಜೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದೇನೆ" ಎಂದು ಪತ್ರವೊಂದರ ಮೂಲಕ ತಮ್ಮ ವಿದಾಯದ ವಿಷಯವನ್ನು ಕ್ರೀಡಾಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.

ಸ್ಟುವರ್ಟ್ ಬಿನ್ನಿ ಮೂಲತಃ ಬೆಂಗಳೂರಿನವರು

ಸ್ಟುವರ್ಟ್ ಬಿನ್ನಿ ಮೂಲತಃ ಬೆಂಗಳೂರಿನವರು

ಸ್ಟುವರ್ಟ್ ಬಿನ್ನಿ ಸಂಪೂರ್ಣ ಹೆಸರು ಲಾರ್ಡ್ ಸ್ಟುವರ್ಟ್ ಟೆರೆನ್ಸ್ ರೋಜರ್ ಬಿನ್ನಿ ಎಂದು. ಜೂನ್ 3, 1984 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸ್ಟುವರ್ಟ್ ಬಿನ್ನಿ ಅಪ್ಪಟ ಕನ್ನಡಿಗ. 2010 ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಟವಾಡಿದ್ದ ಸ್ಟುವರ್ಟ್ ಬಿನ್ನಿ 2011 ರಿಂದ 2015 ಮತ್ತು 2018 ರಿಂದ 2019 ರವರೆಗೆ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದರು. 2016 ರಿಂದ 2017 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೂಡ ಸ್ಟುವರ್ಟ್ ಬಿನ್ನಿ ಕಾಣಿಸಿಕೊಂಡಿದ್ದರು. ಇನ್ನು ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ 2017ರ ಆವೃತ್ತಿಯಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಪರ ಸ್ಟುವರ್ಟ್ ಬಿನ್ನಿ ಕಣಕ್ಕಿಳಿದಿದ್ದರು. ಇನ್ನು ರಣಜಿ ಕ್ರಿಕೆಟ್‍ನಲ್ಲಿ 2003ರಿಂದ 2019ರವರೆಗೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಸ್ಟುವರ್ಟ್ ಬಿನ್ನಿ 2019ರಿಂದೀಚೆಗೆ ನಾಗಾಲ್ಯಾಂಡ್ ತಂಡದ ಆಟಗಾರನಾಗಿದ್ದರು.

ಕ್ರಿಕೆಟ್ ನನ್ನ ರಕ್ತದಲ್ಲಿದೆ ಎಂದು ಭಾವುಕರಾದ ಸ್ಟುವರ್ಟ್ ಬಿನ್ನಿ

ಕ್ರಿಕೆಟ್ ನನ್ನ ರಕ್ತದಲ್ಲಿದೆ ಎಂದು ಭಾವುಕರಾದ ಸ್ಟುವರ್ಟ್ ಬಿನ್ನಿ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿರುವ ಸ್ಟುವರ್ಟ್ ಬಿನ್ನಿ ನಿವೃತ್ತಿ ವೇಳೆ ತಮಗೆ ಕ್ರಿಕೆಟ್ ಜೀವನದಲ್ಲಿ ಬೆಂಬಲ ಸೂಚಿಸಿದ ಹಲವಾರು ಫ್ರಾಂಚೈಸಿಗಳು, ಬಿಸಿಸಿಐ ಮತ್ತು ಕುಟುಂಬಸ್ಥರಿಗೆ ಭಾವನಾತ್ಮಕವಾಗಿ ಕೃತಜ್ಞತೆಯನ್ನು ಸಲ್ಲಿಸುವುದರ ಮೂಲಕ ತಮ್ಮ ಕ್ರಿಕೆಟ್ ಪ್ರಯಾಣವನ್ನು ನೆನಪಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದ ಸ್ಟುವರ್ಟ್ ಬಿನ್ನಿ ಈ ಅವಕಾಶವನ್ನು ಕೊಟ್ಟ ಬಿಸಿಸಿಐಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಬೋರ್ಡ್‌ಗೂ ತಮ್ಮ ಧನ್ಯವಾದಗಳನ್ನು ಅರ್ಪಿಸಿರುವ ಸ್ಟುವರ್ಟ್ ಬಿನ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್, ರಾಜಸ್ತಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೂ ತಮ್ಮ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ. ಕೊನೆಯದಾಗಿ ತಮ್ಮ ಬೆಂಬಲಕ್ಕೆ ನಿಂತ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಕೃತಜ್ಞತೆಯನ್ನು ಅರ್ಪಿಸಿರುವ ಸ್ಟುವರ್ಟ್ ಬಿನ್ನಿ ಕ್ರಿಕೆಟ್ ತನ್ನ ರಕ್ತದಲ್ಲಿ ಸದಾ ಹರಿಯುತ್ತದೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ RCB ಗೆ ಸಿಹಿ ಸುದ್ದಿ!! | Oneindia Kannada
ಸ್ಟುವರ್ಟ್ ಬಿನ್ನಿ ತಂದೆ ಕೂಡ ವಿಶ್ವಕಪ್ ಗೆದ್ದ ತಂಡದ ಆಟಗಾರ

ಸ್ಟುವರ್ಟ್ ಬಿನ್ನಿ ತಂದೆ ಕೂಡ ವಿಶ್ವಕಪ್ ಗೆದ್ದ ತಂಡದ ಆಟಗಾರ

ಸ್ಟುವರ್ಟ್ ಬಿನ್ನಿ ಅವರ ತಂದೆ ರೋಜರ್ ಬಿನ್ನಿ ತಮ್ಮ ಅತ್ಯದ್ಭುತ ಬೌಲಿಂಗ್ ಪ್ರದರ್ಶನದಿಂದ ಖ್ಯಾತಿಯನ್ನು ಪಡೆದಿದ್ದರು. ರೋಜರ್ ಬಿನ್ನಿ ಭಾರತ ಅಂತರರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡು ಬೌಲಿಂಗ್ ವಿಭಾಗದಲ್ಲಿ ಮಿಂಚಿ ಖ್ಯಾತಿಯನ್ನು ಪಡೆದಿದ್ದರು. 1983 ರಲ್ಲಿ ಅಂತರರಾಷ್ಟ್ರೀಯ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿದ್ದ ಟೀಮ್ ಇಂಡಿಯಾ ತಂಡದಲ್ಲಿ ರೋಜರ್ ಬಿನ್ನಿ ಕೂಡ ಸ್ಥಾನ ಪಡೆದುಕೊಂಡಿದ್ದರು. 1983ರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ರೋಜರ್ ಬಿನ್ನಿ 18 ವಿಕೆಟ್ ಪಡೆದುಕೊಳ್ಳುವುದರ ಮೂಲಕ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಾಗೂ 1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವರ್ಲ್ಡ್ ಸೀರೀಸ್ ಕ್ರಿಕೆಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿಯೂ 17 ವಿಕೆಟ್ ಪಡೆದಿದ್ದ ರೋಜರ್ ಬಿನ್ನಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

Story first published: Monday, August 30, 2021, 12:36 [IST]
Other articles published on Aug 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X