ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಾಜಿ ಆರ್‌ಸಿಬಿ ಆಲ್‌ರೌಂಡರ್

Former RCB Player Daniel Christian Announces His Retirement From All Forms Of Cricket

ಮಾಜಿ ಆರ್‌ಸಿಬಿ ಆಲ್‌ರೌಂಡರ್, ಆಸ್ಟ್ರೇಲಿಯಾದ ಕ್ರಿಕೆಟರ್ ಡೇನಿಯಲ್ ಕ್ರಿಶ್ಚಿಯನ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಣೆ ಮಾಡಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ಪರವಾಗಿ ಆಡುತ್ತಿದ್ದು, ಟೂರ್ನಿ ಮುಗಿದ ನಂತರ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.

ತಮ್ಮ ನಿವೃತ್ತಿಗೆ ಮುನ್ನ ಸಿಡ್ನಿ ಸಿಕ್ಸರ್ಸ್ ತಂಡಕ್ಕಾ ಬಿಬಿಎಲ್ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. 39 ವರ್ಷದ ಡೇನಿಯಲ್ ಕ್ರಿಶ್ಚಿಯನ್ ವಿಶ್ವದ ಹಲವು ಲೀಗ್‌ಗಳಲ್ಲಿ ಆಡಿದ್ದಾರೆ. ಐಪಿಎಲ್‌ನಲ್ಲಿ ಆರ್ ಸಿಬಿ ಪರವಾಗಿ ಕೂಡ ಆಡಿದ್ದಾರೆ.

ಡೇನಿಯಲ್ ಕ್ರಿಶ್ಚಿಯನ್ 2006ರಲ್ಲಿ ಮೊದಲ ಟಿ20 ಪಂದ್ಯವನ್ನು ಆಡಿದರು. ವಿಶ್ವದ ಬಹುತೇಕ ಲೀಗ್‌ಗಳಲ್ಲಿ ಆಡಿರುವ ಅವರು, ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ಪರವಾಗಿ ಆಡಿದ್ದಾರೆ. 2020ರಿಂದ ಸಿಡ್ನಿ ಸಿಕ್ಸರ್ಸ್‌ ಪರವಾಗಿ ಆಡಿರುವ ಅವರು 45 ಪಂದ್ಯಗಳಲ್ಲಿ 26 ವಿಕೆಟ್ ಪಡೆದಿದ್ದಾರೆ.

IND Vs NZ 2nd ODI: ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಹಸಿರು ಪಿಚ್ ಸಿದ್ಧಪಡಿಸಿದ ರಾಯ್ಪುರ ಕ್ರೀಡಾಂಗಣIND Vs NZ 2nd ODI: ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಹಸಿರು ಪಿಚ್ ಸಿದ್ಧಪಡಿಸಿದ ರಾಯ್ಪುರ ಕ್ರೀಡಾಂಗಣ

ಡೇನಿಯಲ್ ಕ್ರಿಶ್ಚಿಯನ್ ಆಸ್ಟ್ರೇಲಿಯಾ ಪರವಾಗಿ 23 ಟಿ20 ಮತ್ತು 20 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾಕ್ಕಾಗಿ ಆಡಿರುವ 14 ಟಿ20 ಇನ್ನಿಂಗ್ಸ್‌ಗಳಲ್ಲಿ 118 ರನ್ ಗಳಿಸಿದ್ದಾರೆ. 23 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.

18 ಅಂತಾರಾಷ್ಟ್ರೀಯ ಏಕದಿನ ಇನ್ನಿಂಗ್ಸ್ ಆಡಿರುವ ಡೇನಿಯಲ್, 21 ರನ್‌ಗಳ ಸರಾಸರಿಯಲ್ಲಿ 273 ರನ್ ಗಳಿಸಿದ್ದಾರೆ. 19 ಇನ್ನಿಂಗ್ಸ್‌ಗಳಲ್ಲಿ 20 ವಿಕೆಟ್ ಪಡೆದಿದ್ದಾರೆ. 31 ರನ್ ನೀಡಿ 5 ವಿಕೆಟ್ ಪಡೆದಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ.

ಐಪಿಎಲ್‌ನಲ್ಲಿ ತಿರಸ್ಕರಿಸಲ್ಪಟ್ಟು ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಐವರು ಕ್ರಿಕೆಟಿಗರುಐಪಿಎಲ್‌ನಲ್ಲಿ ತಿರಸ್ಕರಿಸಲ್ಪಟ್ಟು ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಐವರು ಕ್ರಿಕೆಟಿಗರು

 ಬಿಬಿಎಲ್‌ ನಂತರ ಕ್ರಿಕೆಟ್‌ನಿಂದ ದೂರ

ಬಿಬಿಎಲ್‌ ನಂತರ ಕ್ರಿಕೆಟ್‌ನಿಂದ ದೂರ

"ನಿನ್ನೆ ತರಬೇತಿಯ ಸಂದರ್ಭದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಸಹ ಆಟಗಾರರಿಗೆ ನಾನು ಬಿಬಿಎಲ್ ಮುಕ್ತಾಯವಾದ ನಂತರ ನಿವೃತ್ತಿ ಹೊಂದುವ ಬಗ್ಗೆ ಹೇಳಿದೆ. ನಾವು ಈ ಬಾರಿ ಫೈನಲ್ ತಲುಪುವ ವಿಶ್ವಾಸವಿದೆ. ಬಾಲ್ಯದಲ್ಲಿ ನಾನು ಕಂಡ ಕೆಲವು ಕನಸುಗಳನ್ನು ನನಸು ಮಾಡಿಕೊಂಡಿದ್ದೇನೆ. ಗುರಿಗಳನ್ನು ನಾನು ಸಾಧಿಸಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

"ಬಾಲ್ಯದಲ್ಲಿ ಕ್ರಿಕೆಟ್ ಆಡುವುವನ್ನು ನಿರೀಕ್ಷಿಸಿರಲಿಲ್ಲವಾದರೂ, ನಾನು ನಾನು ಎಷ್ಟು ಜನರೊಂದಿಗೆ ಸಂಪರ್ಕಕ್ಕೆ ಬರಲಿದ್ದೇನೆ ಎಂಬುದು ನನ್ನ ವೃತ್ತಿಜೀವನದ ಮೇಲೆ ಪ್ರಭಾವ ಬೀರಿದೆ ಮತ್ತು ಆಜೀವ ಸ್ನೇಹಿತರಾಗಿದ್ದೇನೆ. ಎಲ್ಲರನ್ನೂ ಸಂಪರ್ಕಿಸಲು ನನಗೆ ಸಮಯ ಸಿಗುತ್ತಿದೆ. ಕೊನೆಯ ಬಾರಿಗೆ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ" ಎಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

 ಐಪಿಎಲ್‌ನಲ್ಲಿ ಡೇನಿಯಲ್ ಕ್ರಿಶ್ಚಿಯನ್

ಐಪಿಎಲ್‌ನಲ್ಲಿ ಡೇನಿಯಲ್ ಕ್ರಿಶ್ಚಿಯನ್

ಆಸ್ಟ್ರೇಲಿಯಾ ಆಲ್‌ರೌಂಡರ್ ಐಪಿಎಲ್‌ನಲ್ಲಿ ಕೂಡ 49 ಪಂದ್ಯಗಳನ್ನು ಆಡಿದ್ದಾರೆ. ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಈತ ಅಸ್ಥಿತ್ವದಲ್ಲಿ ಇಲ್ಲದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ ತಂಡದ ಪರವಾಗಿ ಆಡಿದ್ದಾರೆ.

2021ರ ಐಪಿಎಲ್‌ನಲ್ಲಿ ಡೇನಿಯಲ್ ಕ್ರಿಶ್ಚಿಯನ್ 4.8 ಕೋಟಿ ರುಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿದ್ದರು. ಆದರೂ ಆರ್ ಸಿಬಿ ಪರವಾಗಿ ಅವರು ಉತ್ತಮ ಪ್ರದರ್ಶನ ನೀಡದ ಕಾರಣ ಮುಂದಿನ ಆವೃತ್ತಿಯಲ್ಲಿ ಅವರನ್ನು ತಂಡದಿಂದ ಕೈಬಿಡಲಾಯಿತು.

49 ಐಪಿಎಲ್ ಪಂದ್ಯಗಳಲ್ಲಿ 41 ಇನ್ನಿಂಗ್ಸ್‌ಗಳಿಂದ 14.38 ಸರಾಸರಿಯಲ್ಲಿ ಒಟ್ಟು 460 ರನ್ ಗಳಿಸಿದ್ದಾರೆ. 49 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ್ದು, 49 ವಿಕೆಟ್ ಪಡೆದುಕೊಂಡಿದ್ದಾರೆ.

 ಬಿಬಿಎಲ್‌ ಪ್ರಶಸ್ತಿ ಗೆಲ್ಲುವ ವಿಶ್ವಾಸ

ಬಿಬಿಎಲ್‌ ಪ್ರಶಸ್ತಿ ಗೆಲ್ಲುವ ವಿಶ್ವಾಸ

ಈ ಬಾರಿಯ ಬಿಬಿಎಲ್‌ ಮುಗಿದ ನಂತರ ಅವರು ಕ್ರಿಕೆಟ್‌ನಿಂದ ದೂರವಾಗಲಿದ್ದು, ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ನಿವೃತ್ತಿಯನ್ನು ಸ್ಮರಣೀಯವಾಗಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ನಡೆಯುತ್ತಿರುವ ಬಿಬಿಎಲ್‌ನಲ್ಲಿ ಸಿಡ್ನಿ ಸಿಕ್ಸರ್ಸ್ 12 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಇಂದು (ಶನಿವಾರ, ಜನವರಿ 21) ಸಿಡ್ನಿ ಸಿಕ್ಸರ್ಸ್ ಸಿಡ್ನಿ ಥಂಡರ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅವರು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ.

Story first published: Saturday, January 21, 2023, 13:04 [IST]
Other articles published on Jan 21, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X