ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾನ್ ಹಾರ್ಕೋರ್ಟ್ ಡು ಪ್ರೀಜ್ ನಿಧನ

ಕೇಪ್‌ಟೌನ್, ಏಪ್ರಿಲ್ 10: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಮತ್ತು ಜಿಂಬಾಬ್ವೆ ಮಾಜಿ ಆಯ್ಕೆದಾರ ಜಾನ್ ಹಾರ್ಕೋರ್ಟ್ ಡು ಪ್ರೀಜ್ ನಿಧನರಾಗಿದ್ದಾರೆ. ದೀರ್ಘ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಡು ಪ್ರೀಜ್ ಬುಧವಾರ (ಏಪ್ರಿಲ್ 8) ಕೊನೆಯುಸಿರೆಳೆದಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಕ್ರಿಕೆಟ್‌ಗೂ ಮುನ್ನ ಬೇರೆ ಕ್ರೀಡೆಗಳನ್ನಾಡುತ್ತಿದ್ದ 5 ಜನಪ್ರಿಯ ಕ್ರಿಕೆಟಿಗರುಕ್ರಿಕೆಟ್‌ಗೂ ಮುನ್ನ ಬೇರೆ ಕ್ರೀಡೆಗಳನ್ನಾಡುತ್ತಿದ್ದ 5 ಜನಪ್ರಿಯ ಕ್ರಿಕೆಟಿಗರು

ಜಿಂಬಾಬ್ವೆಯ ಹರಾರೆಯಲ್ಲಿ ಜಾನ್ ಹಾರ್ಕೋರ್ಟ್ ಡು ಪ್ರೀಜ್ ಬುಧವಾರ ಸಾವನ್ನಪ್ಪಿರುವುದನ್ನು ಸೌತ್ ಆಫ್ರಿಕಾ ಕ್ರಿಕೆಟ್ (ಸಿಎಸ್‌ಎ) ಮಾಧ್ಯಮ ಪ್ರಕಟನೆಯ ಮೂಲಕ ತಿಳಿಸಿದೆ. ಕೆಲ ದಿನಗಳಿಂದ ಡು ಪ್ರೀಜ್ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ಸಿಎಸ್‌ಎ ಪ್ರಕಟನೆಯಲ್ಲಿ ಹೇಳಿದೆ.

ಬ್ಯಾಟಿಂಗ್ ಮಾಡುವಾಗ ನಾನು ಸತ್ತಿದ್ದರೂ ಪರವಾಗಿರಲಿಲ್ಲ: ವಿವಿಯನ್ ರಿಚರ್ಡ್ಸ್ಬ್ಯಾಟಿಂಗ್ ಮಾಡುವಾಗ ನಾನು ಸತ್ತಿದ್ದರೂ ಪರವಾಗಿರಲಿಲ್ಲ: ವಿವಿಯನ್ ರಿಚರ್ಡ್ಸ್

ಜಿಂಬಾಬ್ವೆಯ ಸ್ವಾತಂತ್ರ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ದಕ್ಷಿಣ ಆಫ್ರಿಕಾ ಪರ ಆಡಿದ ಜಿಂಬಾಬ್ವೆಯ ಅನೇಕ ಮಂದಿಯಲ್ಲಿ ಸಿನ್ನರ್ ಜಾನ್ ಹಾರ್ಕೋರ್ಟ್ ಡು ಪ್ರೀಜ್ ಕೂಡ ಒಬ್ಬರಾಗಿದ್ದರು. ಸುಮಾರು 20 ವರ್ಷಗಳ ಕಾಲ ಪ್ರಥಮದರ್ಜೆ ಕ್ರಿಕೆಟ್‌ ಆಡಿದ್ದ ಡು ಪ್ರೀಜ್ 4,000ಕ್ಕೂ ಹೆಚ್ಚು ರನ್ ಮತ್ತು 296 ವಿಕೆಟ್‌ಗಳನ್ನು ಪಡೆದಿದ್ದರು. 80 ಕ್ಯಾಚ್‌ಗಳ ದಾಖಲೆಯೂ ಡು ಪ್ರೀಜ್ ಹೆಸರಿನಲ್ಲಿದೆ.

10 ಸಾವಿರ ಜೀವರಕ್ಷಕ, ಇಂಡೋ-ಪಾಕ್ ಸರಣಿ : ಭಾರತದ ಬಳಿ ಅಖ್ತರ್ ಮನವಿ10 ಸಾವಿರ ಜೀವರಕ್ಷಕ, ಇಂಡೋ-ಪಾಕ್ ಸರಣಿ : ಭಾರತದ ಬಳಿ ಅಖ್ತರ್ ಮನವಿ

1960ರ ಇಸವಿಯಲ್ಲಿ ದಕ್ಷಿಣ ಆಫ್ರಿಕಾ ದೇಸಿ ಕ್ರಿಕೆಟ್‌ನಲ್ಲಿ ಡು ಪ್ರೀಜ್ ಆಡಿದ್ದರು. ಆ ದಿನಗಳಲ್ಲಿ ಅಪರೂಪದ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದ ಡು ಪ್ರೀಜ್, ಬ್ಯಾಟಿಂಗ್‌ ಕೂಡ ಮಾಡುತ್ತಿದ್ದರು. ಹೀಗಾಗಿ ಡು ಪ್ರೀಜ್ ಆಲ್‌ ರೌಂಡರ್‌ ಆಗಿಯೂ ಗುರುತಿಸಲ್ಪಟ್ಟಿದ್ದರು. 1966-67ರ ಸೀಸನ್‌ನಲ್ಲಿ ಡು ಪ್ರೀಜ್ ಆಸ್ಟ್ರೇಲಿಯಾ ವಿರುದ್ಧ 2 ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಪ್ರತಿನಿಧಿಸಿದ್ದರು.

For Quick Alerts
ALLOW NOTIFICATIONS
For Daily Alerts
Story first published: Friday, April 10, 2020, 13:14 [IST]
Other articles published on Apr 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X