ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಚ್ ಫಿಕ್ಸರ್ ಅಜರುದ್ದೀನ್‌ಗೆ ಗೌರವ ಏಕೆ?: ಬಿಸಿಸಿಐ ವಿರುದ್ಧ ಗಂಭೀರ್ ಕಿಡಿ

ನವದೆಹಲಿ, ನವೆಂಬರ್ 5: ಕೆಲವು ಕ್ರೀಡಾಂಗಣಗಳಲ್ಲಿ ಪಂದ್ಯದ ಆರಂಭಕ್ಕೂ ಮುನ್ನ ಹಿರಿಯ ಮತ್ತು ಖ್ಯಾತ ಕ್ರಿಕೆಟಿಗರು ಗಂಟೆ ಬಾರಿಸುವ ಸಂಪ್ರದಾಯವಿದೆ. ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಈ ರೀತಿಯ ಆಚರಣೆ ಇದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿಯೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

ಇತ್ತೀಚೆಗೆ ಭಾರತದ ಇತರೆ ಕೆಲವು ಮೈದಾನಗಳಲ್ಲಿಯೂ ಈ ಆಚರಣೆ ಆರಂಭವಾಗಿದೆ.

ರಣಜಿ ತಂಡದ ನಾಯಕತ್ವ ತೊರೆದ ಗೌತಮ್ ಗಂಭೀರ್ ರಣಜಿ ತಂಡದ ನಾಯಕತ್ವ ತೊರೆದ ಗೌತಮ್ ಗಂಭೀರ್

ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ ಹಿರಿಯ ಆಟಗಾರರಿಗೆ ಪಂದ್ಯ ಆರಂಭಕ್ಕೂ ಮುನ್ನ ಗಂಟೆ ಬಾರಿಸುವ ಗೌರವ ನೀಡಲಾಗುತ್ತದೆ. ಆದರೆ, ಭಾನುವಾರ ನಡೆದ ಪಂದ್ಯಕ್ಕೆ ಗಂಟೆ ಬಾರಿಸುವ ಮೂಲಕ ಚಾಲನೆ ನೀಡಿದ್ದು, ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್.

ಈ ಬಗ್ಗೆ ಹಿರಿಯ ಆಟಗಾರ ಗೌತಮ್ ಗಂಭೀರ್ ಬಿಸಿಸಿಐ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಕ್ರಿಕೆಟ್ ಮಂಡಳಿ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯ ನಡೆಯ ಬಗ್ಗೆ ಟ್ವಿಟ್ಟರ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್‌' ಎಂದ ಅನುಷ್ಕಾ ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್‌' ಎಂದ ಅನುಷ್ಕಾ

ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿ ದೇಶವೇ ತಲೆತಗ್ಗಿಸುವಂತೆ ಮಾಡಿದ್ದ, ಆ ಪ್ರಕರಣದಲ್ಲಿ ಬಿಸಿಸಿಐನಿಂದ ನಿಷೇಧಕ್ಕೆ ಒಳಗಾಗಿದ್ದ ವ್ಯಕ್ತಿಗೆ ಈ ರೀತಿಯ ಗೌರವ ನೀಡುವುದು ಎಷ್ಟು ಸರಿ ಎಂದು ಗಂಭೀರ್ ಪ್ರಶ್ನಿಸಿದ್ದಾರೆ.

ಬಿಸಿಸಿಐ ಸೋತಿದೆ

ಬಿಸಿಸಿಐ ಸೋತಿದೆ

'ಭಾರತವು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯಗಳಿಸಿದೆ. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಕ್ರಿಕೆಟ್ ಆಡಳಿತ ಸಮಿತಿ ಮತ್ತು ಕೋಲ್ಕತಾ ಕ್ರಿಕೆಟ್ ಸಂಸ್ಥೆಗಳು ಸೋಲು ಕಂಡಿವೆ' ಎಂದು ಗಂಭೀರ್ ಹೇಳಿದ್ದಾರೆ.

ವೈರಲ್ ವಿಡಿಯೋ: ಧೋನಿಯ ಹೆಲಿಕಾಪ್ಟರ್ ಶಾಟ್ ಕದ್ದ ಆಸೀಸ್‌ನ ಸ್ಮಿತ್!

ಆಘಾತಕಾರಿ ಬೆಳವಣಿಗೆ

ಭ್ರಷ್ಟಾಚಾರಿಯ ವಿರುದ್ಧದ ಅಸಹಿಷ್ಣುತೆಯ ನೀತಿಯು ಭಾನುವಾರ ರಜೆ ತೆಗೆದುಕೊಂಡಂತಿದೆ. ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ (ಎಚ್‌ಸಿಎ) ಚುನಾವಣೆಯಲ್ಲಿ ಅವರಿಗೆ ಅವಕಾಶ ನೀಡಿದ್ದು ತಿಳಿದಿದೆ. ಆದರೆ, ಇದು ಆಘಾತಕಾರಿ ಬೆಳವಣಿಗೆ. ಗಂಟೆ ಸದ್ದು ಮೊಳಗುತ್ತಿದೆ, ಅಧಿಕಾರದಲ್ಲಿರುವವರು ಕೇಳಿಸಿಕೊಳ್ಳುತ್ತಿದ್ದಾರೆ ಎಂಬ ಭರವಸೆ ಇದೆ ಎಂದು ಗಂಭೀರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಆಗ ಭಾರತದ ಕ್ರಿಕೆಟಿಗ, ಇಂಜಿನಿಯರ್: ಈಗ ಯುಎಸ್ ಕ್ರಿಕೆಟ್ ತಂಡದ ನಾಯಕ!

ಗಂಭೀರ್ ಕೋಲ್ಕತಾ ನಂಟು

ಗಂಭೀರ್ ಕೋಲ್ಕತಾ ನಂಟು

ಗೌತಮ್ ಗಂಭೀರ್ ಈಡನ್ ಗಾರ್ಡನ್ಸ್ ಮೈದಾನದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ದೆಹಲಿಯವರಾದರೂ ಗಂಭೀರ್, ಐಪಿಎಲ್‌ನ ಮೂರು ಆವೃತ್ತಿಗಳಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದಲ್ಲದೆ, ಟ್ರೋಫಿಯನ್ನು ಸಹ ಗೆದ್ದುಕೊಟ್ಟಿದ್ದರು.

ಮ್ಯಾಚ್ ಫಿಕ್ಸಿಂಗ್ ಆರೋಪ

ಮ್ಯಾಚ್ ಫಿಕ್ಸಿಂಗ್ ಆರೋಪ

ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಹಲವು ಟ್ರೋಫಿಗಳನ್ನು ಗೆದ್ದು ತಂದ ಯಶಸ್ವಿ ಆಟಗಾರರಲ್ಲಿ ಅಜರುದ್ದೀನ್ ಒಬ್ಬರಾಗಿದ್ದರು. ಆದರೆ, ಮ್ಯಾಚ್ ಫಿಕ್ಸಿಂಗ್ ಹಗರಣವು 2000ರಲ್ಲಿ ಬೆಳಕಿಗೆ ಬಂದ ಬಳಿಕ ಅಜರುದ್ದೀನ್ ಬಿಸಿಸಿಐನಿಂದ ಜೀವಿತಾವಧಿ ನಿಷೇಧಕ್ಕೆ ಒಳಗಾದರು.

ಅಜರ್ ಪರ ತೀರ್ಪು

ಅಜರ್ ಪರ ತೀರ್ಪು

ಇದರ ವಿರುದ್ಧ ಅಜರುದ್ದೀನ್ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಕಾನೂನು ಸಮರ ನಡೆಸಿದ್ದರು. 2012ರಲ್ಲಿ ಅಜರ್ ಪರವಾಗಿ ತೀರ್ಪು ಬಂದಿತ್ತು. ಕೋರ್ಟ್ ಆದೇಶವನ್ನು ಬಿಸಿಸಿಐ ಪ್ರಶ್ನಿಸಿರಲಿಲ್ಲ. ಅವರು ಐಸಿಸಿ, ಬಿಸಿಸಿಐ ಅಥವಾ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಯಾವುದೇ ಸ್ಥಾನ ಪಡೆದುಕೊಳ್ಳುವುದಕ್ಕೆ ಇನ್ನು ಮುಂದೆ ನಿರ್ಬಂಧ ಇರುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು.

ಅಜರ್ ಸಾಧನೆ

ಅಜರ್ ಸಾಧನೆ

ಭಾರತದ ಪರ 47 ಟೆಸ್ಟ್‌ಗಳನ್ನು ಮುನ್ನಡೆಸಿರುವ ಅಜರ್, 99 ಟೆಸ್ಟ್‌ಗಳನ್ನು ಆಡಿದ್ದಾರೆ. 45.03ರ ಸರಾಸರಿಯಲ್ಲಿ 6,215 ರನ್ ಗಳಿಸಿದ್ದರು. 334 ಏಕದಿನ ಪಂದ್ಯಗಳಲ್ಲಿ 36.92ರ ಸರಾಸರಿಯಲ್ಲಿ 9,378 ರನ್ ಕಲೆಹಾಕಿದ್ದರು.

Story first published: Monday, November 5, 2018, 15:42 [IST]
Other articles published on Nov 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X