ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ಪಾತ್ರವನ್ನು ಮೆಚ್ಚಿದ ಪೀಟರ್‌ಸನ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ

Glad to see your affection towards India: PM Modi responds to Kevin Pietersen

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್‌ಸನ್‌ಗೆ ಟ್ವಿಟ್ಟರ್‌ನಲ್ಲಿ ಧನ್ಯವಾದವನ್ನು ಸಲ್ಲಿಸಿದ್ದಾರೆ. ಕೆವಿನ್ ಪೀಟರ್‌ಸನ್ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತೆಗೆದುಕೊಳ್ಳುತ್ತಿರುವ ನಡೆಗೆ ಟ್ವೀಟ್ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಭಾರತದ ಬಗೆಗಿನ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು.

ಭಾರತ ದಕ್ಷಿಣ ಆಫ್ರಿಕಾಗೆ ಕಳುಹಿಸಿಕೊಟ್ಟಿರುವ ಕೊರೊನಾ ವ್ಯಾಕ್ಸಿನ್ ತಲುಪಿರುವ ಚಿತ್ರವನ್ನು ಭಾರತದ ವಿದೇಶಾಂಗ ಇಲಾಖೆಯ ಸಚಿವ ಡಾ.ಎಸ್ ಜೈಶಂಕರ್ ಹಂಚಿಕೊಂಡಿದ್ದರು. ಇದನ್ನು ರಿಟ್ವೀಟ್ ಮಾಡಿದ್ದ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್‌ಸನ್ "ಭಾರತದ ಔದಾರ್ಯ ಹಾಗೂ ದಯೆ ಕೃಪೆ ನಿತ್ಯವೂ ಹೆಚ್ಚಾಗುತ್ತಿದೆ. ಅಚ್ಚುಮೆಚ್ಚಿನ ದೇಶ" ಎಂದು ಪೀಟರ್‌ಸನ್ ಟ್ವೀಟ್ ಮಾಡಿದ್ದರು.

'ಹಿಂದಿನ ಸೀಟಿನಲ್ಲಿ ಕೂತು ಕೊಹ್ಲಿಗೆ ಸಹಾಯ ಮಾಡೋದು ನನ್ನ ಕೆಲಸ''ಹಿಂದಿನ ಸೀಟಿನಲ್ಲಿ ಕೂತು ಕೊಹ್ಲಿಗೆ ಸಹಾಯ ಮಾಡೋದು ನನ್ನ ಕೆಲಸ'

ಈ ಟ್ವೀಟ್‌ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರತಿಕ್ರಿಯಿಸಿದ್ದಾರೆ. "ಭಾರತದ ಬಗೆಗೆ ನಿಮಗಿರುವ ಪ್ರೀತಿಯನ್ನು ನೋಡಲು ಸಂತಸವಾಗುತ್ತದೆ. ಇಡೀ ವಿಶ್ವವೇ ಒಂದು ಕುಟುಂಬ ಎಂದು ನಾವು ಭಾವುಸುತ್ತೇವೆ ಮತ್ತು ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಬಲಗೊಳಿಸಲು ನಮ್ಮ ಪಾತ್ರವನ್ನು ನಿರ್ವಹಿಸಲು ಬಯಸುತ್ತೇವೆ" ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ವಿರ್ಶವದಲ್ಲಿ ಅತಿ ಹೆಚ್ಚು ಲಸಿಕೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಭಾರತದಲ್ಲಿ ಉತ್ಪಾದನೆಯಾಗುವ ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳಿಗೆ ವಿಶ್ವಾದ್ಯಂತ ಬೇಡಿಕೆಗಳು ಬರುತ್ತಿದ್ದು ಭಾರತ ದೇಶದಲ್ಲಿ ಮೊದಲ ಹಂತದ ಲಸಿಕೆಯನ್ನು ಕೊರೊನಾ ವಾರಿಯರ್ಸ್‌ಗೆ ನೀಡುತ್ತಿರುವ ಸಂದರ್ಭದಲ್ಲಿಯೇ ವಿದೇಶಗಳಿಗೂ ಲಸಿಕೆಯನ್ನು ಪೂರೈಕೆ ಮಾಡುತ್ತಿದೆ.

ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಬೌಲಿಂಗ್‌ನಲ್ಲಿ ಬೆಸ್ಟ್ ಯಾರು ಗೊತ್ತಾ?!ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಬೌಲಿಂಗ್‌ನಲ್ಲಿ ಬೆಸ್ಟ್ ಯಾರು ಗೊತ್ತಾ?!

ಇನ್ನು ಕೆವಿನ್ ಪೀಟರ್‌ಸನ್ ದಕ್ಷಿಣ ಆಫ್ರಿಕ ಮೂಲದವರಾಗಿದ್ದು ಇಂಗ್ಲೆಂಡ್‌ನಲ್ಲಿ ವಾಸವಾಗಿದ್ದು ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಕ್ರಿಕೆಟ್ ಹಿನ್ನಲೆಯಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.

Story first published: Thursday, February 4, 2021, 13:36 [IST]
Other articles published on Feb 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X