ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ಸನಿಹದಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಆಘಾತ

Grant Bradburn steps down as Pakistans Head of High Performance Coaching

ಕರಾಚಿ: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಗ್ರ್ಯಾಂಡ್‌ ಬ್ರಾಡ್‌ಬರ್ನ್ ಪಾಕಿಸ್ತಾನ್ ಕ್ರಿಕೆಟ್ ತಂಡದ ಕೋಚಿಂಗ್ ವಿಭಾಗದಿಂದ ಕೆಳಗಿಳಿದಿದ್ದಾರೆ. ಬ್ರಾಡ್‌ಬನ್ ಅವರು ಪಾಕಿಸ್ತಾನ ಕ್ರಿಕೆಟ್‌ನ ಹೈ ಪರ್ಫಾರ್ಮೆನ್ಸ್ ಕೋಚಿಂಗ್‌ನ ಮುಖ್ಯಸ್ಥರಾಗಿದ್ದರು. ಮೂರು ವರ್ಷಗಳ ಕಾಲ ಹೈ ಪರ್ಫಾರ್ಮೆನ್ಸ್ ಕೋಚಿಂಗ್‌ನ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸಿರುವ ಬ್ರಾಡ್‌ಬನ್ ಶುಕ್ರವಾರ (ಅಕ್ಟೋಬರ್‌ 15) ಸ್ಥಾನದಿಂದ ಕೆಳಗಿಳಿದಿದ್ದಾರೆ.

ಟಿ20 ವಿಶ್ವಕಪ್‌: ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಆ್ಯರನ್ ಫಿಂಚ್ ಲಭ್ಯಟಿ20 ವಿಶ್ವಕಪ್‌: ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಆ್ಯರನ್ ಫಿಂಚ್ ಲಭ್ಯ

ಬೇರೆ ಅವಕಾಶಕ್ಕಾಗಿ ಎದುರು ನೋಡುತ್ತಿರುವುದರಿಂದ ಗ್ರ್ಯಾಂಡ್‌ ಬ್ರಾಡ್‌ಬರ್ನ್ ಅವರು ಪಾಕ್‌ ಕ್ರಿಕೆಟ್‌ನ ಹೈ ಪರ್ಫಾರ್ಮೆನ್ಸ್ ಕೋಚಿಂಗ್‌ನ ಮುಖ್ಯಸ್ಥ ಸ್ಥಾನ ತೊರೆಯುತ್ತಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಟಿ20 ವಿಶ್ವಕಪ್‌ ಸನಿಹವಿರುವಾಗಲೇ ಪಾಕ್‌ ಕೋಚಿಂಗ್‌ ವಿಭಾಗದಲ್ಲಿ ಬದಲಾವಣೆಯಾಗಲಿದೆ.

ಪಾಕಿಸ್ತಾನ ಕ್ರಿಕೆಟ್‌ನ ಹೈ ಪರ್ಫಾರ್ಮೆನ್ಸ್ ಕೋಚಿಂಗ್‌ನ ಮುಖ್ಯಸ್ಥ ಜವಾಬ್ದಾರಿ ಹೊರುವ ಮುನ್ನ ಬ್ರಾಡ್‌ಬರ್ನ್ ಅವರು ಪಾಕ್ ರಾಷ್ಟ್ರೀಯ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ನ್ಯೂಜಿಲೆಂಡ್ ಮಾಜಿ ಟೆಸ್ಟ್‌ ಸ್ಪಿನ್ನರ್ ಬ್ರಾಡ್‌ಬರ್ನ್ 2018-2020ರ ವರೆಗೆ ಪಾಕ್ ಫೀಲ್ಡಿಂಗ್ ಕೋಚ್ ಆಗಿದ್ದರು.

ಟಿ20 ವಿಶ್ವಕಪ್‌ನಲ್ಲಿ ಅಫ್ಘಾನ್ ಮುನ್ನಡೆಸುವ ಬಗ್ಗೆ ಮೊಹಮ್ಮದ್ ನಬಿ ಪ್ರತಿಕ್ರಿಯೆಟಿ20 ವಿಶ್ವಕಪ್‌ನಲ್ಲಿ ಅಫ್ಘಾನ್ ಮುನ್ನಡೆಸುವ ಬಗ್ಗೆ ಮೊಹಮ್ಮದ್ ನಬಿ ಪ್ರತಿಕ್ರಿಯೆ

IPL ಚಾಂಪಿಯನ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು? RCBಗೆ ಎಷ್ಟು ಸಿಕ್ತು? | Oneindia Kannada

"ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸುವ ಅವಕಾಶ ಒದಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಪಿಸಿಬಿಯಲ್ಲಿದ್ದು ಸಿಕ್ಕ ಈ ಅದ್ಭುತ ಅನುಭವಗಳಿಗಾಗಿ ನಾನು ಪಿಸಿಬಿಗೆ ಚಿರಋಣಿಯಾಗಿದ್ದೇನೆ," ಎಂದು ಬ್ರಾಡ್‌ಬರ್ನ್ ಹೇಳಿದ್ದಾರೆ. ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ರಮೀಝ್ ರಾಜ ಪಿಸಿಬಿ ಮುಖ್ಯಸ್ಥರಾಗಿ ಆಯ್ಕೆಯಾದ ಬಳಿಕ ಪಿಸಿಬಿಯಿಂದ ಹೊರ ನಡೆಯುತ್ತಿರುವ 5ನೇ ವ್ಯಕ್ತಿ ಬ್ರಾಡ್‌ಬರ್ನ್.

Story first published: Friday, October 15, 2021, 16:33 [IST]
Other articles published on Oct 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X