ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗುಜರಾತ್ ಟೈಟನ್ಸ್‌ ನಾಯಕ ಹಾರ್ದಿಕ್ ಪಾಂಡ್ಯಗೆ ದುಬಾರಿ ಗಿಫ್ಟಿ ನೀಡಿದ ಉದ್ಯಮಿ: ವಿವಾದ ಸೃಷ್ಟಿ

Hardik pandya Gift

ಗುಜರಾತ್ ಟೈಟನ್ಸ್‌ ತಂಡ ಐಪಿಎಲ್ 2022ರ ಪ್ರಶಸ್ತಿಯನ್ನ ಗೆದ್ದು ಬೀಗುವ ಮೂಲಕ ಚೊಚ್ಚಲ ಸೀಸನ್‌ನಲ್ಲೇ ಟ್ರೋಫಿ ಮುಡಿಗೇರಿಸಿಕೊಂಡ ಎರಡನೇ ತಂಡವಾಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಗೆದ್ದ ಬಳಿಕ ಹೊಗಳಿಕೆಯ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಫಿಕ್ಸಿಂಗ್ ಎಂಬ ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಟೀಕೆಗಳು ಸಹ ಎದುರಾದವು.

ಆದ್ರೆ ಐಪಿಎಲ್ ಕಿರೀಟ ಗೆದ್ದ ನಂತರ ಗುಜರಾತ್ ಟೈಟನ್ಸ್‌ ವಿವಾದ ಇನ್ನೂ ಕಡಿಮೆಯಾಗಿಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಗುಜರಾತ್‌ನವರು ಎಂಬ ಕಾರಣಕ್ಕೆ ಗುಜರಾತ್ ತಂಡವನ್ನು ಗೆಲ್ಲಿಸಲಾಗಿದೆ ಎಂದೆಲ್ಲಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ.

ಅದೇ ರೀತಿ ಐಪಿಎಲ್ ಫೈನಲ್‌ನಲ್ಲಿ ಜೂಜಾಟ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ಪ್ರಮುಖ ನಾಯಕ ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ. ತನಿಖೆಯಾಗಬೇಕು ಎಂದು ಸಂದರ್ಶನ ನೀಡುವ ಮೂಲಕ ಸಂಚಲನ ಮೂಡಿಸಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಅವರು ಬಿಡುಗಡೆ ಮಾಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್‌ ಹೊಸ ವಿವಾದ ಹುಟ್ಟು ಹಾಕಿದೆ. ಕೈಗಾರಿಕೋದ್ಯಮಿ ವೀರ ಪಹರಿಯಾ ಉಡುಗೊರೆಯಾಗಿ ನೀಡಿರುವ ಗುಜರಾತ್ ಟೈಟನ್ಸ್ ತಂಡದ ಲೋಗೋ ಇರುವ ಚೈನ್ ಅನ್ನು ಹಾರ್ದಿಕ್ ಪಾಂಡ್ಯ ಕೊರಳಲ್ಲಿ ಧರಿಸಿದ್ದಾರೆ.

ಬಿಸಿಸಿಐ ಅನುಮತಿಯಿಲ್ಲದೆ ದುಬಾರಿ ಗಿಫ್ಟ್‌ ಪಡೆಯುವಂತಿಲ್ಲ

ಬಿಸಿಸಿಐ ಅನುಮತಿಯಿಲ್ಲದೆ ದುಬಾರಿ ಗಿಫ್ಟ್‌ ಪಡೆಯುವಂತಿಲ್ಲ

ಹಾರ್ದಿಕ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಫೋಟೊವನ್ನ ಹರಿಬಿಡುತ್ತಿದ್ದಂತೆ ಇದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ನಿಯಮಗಳ ಪ್ರಕಾರ, ಬಿಸಿಸಿಐ ಅನುಮತಿಯಿಲ್ಲದೆ ಸರಣಿಯ ಸಮಯದಲ್ಲಿ ಅಥವಾ ನಂತರ ಯಾರಿಂದಲೂ ಉಡುಗೊರೆಗಳನ್ನು ಪಡೆಯಬಾರದು. ಹಾಗೆ ಪಡೆದರೆ, ಅದನ್ನು ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಉಡುಗೊರೆಯಾಗಿ ಪರಿಗಣಿಸಲಾಗುತ್ತದೆ. ಯಾರಾದರೂ ಅಂತಹ ಉಡುಗೊರೆಯನ್ನು ಸಂಪರ್ಕಿಸಿದರೆ, ಅವರು ಮೊದಲು ಬಿಸಿಸಿಐಗೆ ತಿಳಿಸಬೇಕು.

ಇದೀಗ ಪಾಂಡ್ಯ ಈ ಉಡುಗೊರೆ ಸ್ವೀಕಾರದ ಬಳಿಕ ಬಿಸಿಸಿಐಗೆ ತಿಳಿಸಿದ್ದಾರ ಇಲ್ಲವೇ ಎಂಬುದು ಗೊತ್ತಿಲ್ಲ. ಆದ್ರೆ ಈಗಾಗಲೇ ಪಂದ್ಯ ಫಿಕ್ಸ್ ಆಗಿದೆ ಎಂಬ ವರದಿಗಳು ಬಂದಿವೆ. ಇಂತಹ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಈ ಉಡುಗೊರೆ ಸ್ವೀಕರಿಸಿದ್ದು ಎಷ್ಟು ಸರಿ? ಎಂಬ ಚರ್ಚೆಗಳು ಶುರುವಾಗಿವೆ.

3000ಕ್ಕಿಂತ ಹೆಚ್ಚು ಐಪಿಎಲ್ ರನ್ ಬಾರಿಸಿದ್ದರೂ ಒಮ್ಮೆಯೂ ಟ್ರೋಫಿ ಗೆಲ್ಲದ 6 ನತದೃಷ್ಟ ಆಟಗಾರರಿವರು!

ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳೆದುರು ಜಪ್ತಿ ಆಗಿದ್ದ ಪಾಂಡ್ಯ

ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳೆದುರು ಜಪ್ತಿ ಆಗಿದ್ದ ಪಾಂಡ್ಯ

ದುಬಾರಿ ಬೆಲೆಯ ವಾಚ್‌ಗಳನ್ನು ಮತ್ತು ಐಷಾರಾಮಿ ವಸ್ತುಗಳನ್ನು ಹೊಂದಿರುವ ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಪ್ರವಾಸ ಮುಗಿಸಿ ವಾಪಸ್ ಹಿಂದಿರುವಾಗ ಏರ್​ಪೋರ್ಟ್​ನಲ್ಲೇ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ದುಬಾರಿ ವಾಚ್‌ಗಳನ್ನು ಜಪ್ತಿ ಮಾಡಿದ್ದರು ಎಂದು ವರದಿಯಾಗಿತ್ತು. ಹಾರ್ದಿಕ್ ವಿಶ್ವದ ಅತ್ಯಂತ ದುಬಾರಿ ವಾಚ್‌ಗಳನ್ನು ಹೊಂದಿದ್ದಾರೆ ಮತ್ತು ಅವರ ವಾಚ್ ಸಂಗ್ರಹವು ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ಅನ್ನು ಸಹ ಒಳಗೊಂಡಿದೆ . ಇದರ ಬೆಲೆ ಬರೋಬ್ಬರಿ 5 ಕೋಟಿ ರೂ. ಆಗಿದೆ.

IPL 2022: ಡೆತ್ ಓವರ್‌ಗಳಲ್ಲಿ ಮೇಡನ್ ವಿಕೆಟ್ ಪಡೆದದ್ದು ಕೇವಲ ಐವರು; ಆರ್‌ಸಿಬಿ ಆಟಗಾರನ ದಾಖಲೆ!

ಹಾರ್ದಿಕ್ ಬಳಿ ಇದೆ 30 ಲಕ್ಷದಿಂದ 5 ಕೋಟಿ ರೂಪಾಯಿ ವಾಚ್

ಹಾರ್ದಿಕ್ ಬಳಿ ಇದೆ 30 ಲಕ್ಷದಿಂದ 5 ಕೋಟಿ ರೂಪಾಯಿ ವಾಚ್

ಹೌದು ಹಾರ್ದಿಕ್ ಪಾಂಡ್ಯ ಬಳಿ 30 ಲಕ್ಷದಿಂದ 5 ಕೋಟಿ ರೂಪಾಯಿ ವಾಚ್‌ಗಳ ಸಂಗ್ರಹವಿದೆ. ವಿಶ್ವದ ಅತ್ಯಂತ ದುಬಾರಿ ವಾಚ್‌ಗಳನ್ನ ಹೊಂದಿರುವ ಪಾಂಡ್ಯ ಕಾಸ್ಟ್ಲಿ ಕಲೆಕ್ಷನ್ ಈ ಕೆಳಗಿದೆ.

* ವಿಶ್ವದ ಅಪರೂಪದ ರೋಲೆಕ್ಸ್ ವಾಚ್‌ಗಳಲ್ಲಿ ಒಂದಾದ Day Date 40mm ಹಳದಿ ಚಿನ್ನದ ಬಣ್ಣದ ವಾಚ್​ ಪಾಂಡ್ಯ ಹೊಂದಿದ್ದಾರೆ. ಇದರ ಬೆಲೆ ಸುಮಾರು 89 ಲಕ್ಷ ರೂಪಾಯಿ.

* Audemars Piguet ನ ರಾಯಲ್ ಓಕ್ ಆಫ್‌ಶೋರ್ 18 ಕ್ಯಾರೆಟ್ ರೋಸ್ ಗೋಲ್ಡ್ ಆವೃತ್ತಿಯನ್ನು ಹೊಂದಿದ್ದಾರೆ. ಇದರ ಬೆಲೆ ಸುಮಾರು 85-95 ಲಕ್ಷ ರೂ. ಆಗಿದೆ.

* ರಾಯ್ ಓಕ್ ಸೆಲ್ಫ್‌ವೈಂಡಿಂಗ್ ಕ್ರೋನೋಗ್ರಾಫ್ ರೋಸ್ ಗೋಲ್ಡ್ ಅನ್ನು ಹೊಂದಿದ್ದಾರೆ. ಇದು ಆಡೆಮರ್ಸ್ ಪಿಗುಯೆಟ್ ಅವರ ದುಬಾರಿ ಸ್ವಿಸ್ ವಾಚ್ ಆಗಿದೆ. ಇದರ ಬೆಲೆ ಸುಮಾರು 38 ಲಕ್ಷ ರೂಪಾಯಿ

* ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾದಿಂದ 18 ಸಿಟಿ ಹಳದಿ ಚಿನ್ನದಲ್ಲಿರುವ ಐ ಆಫ್ ದಿ ಟೈಗರ್ ಗಡಿಯಾರವನ್ನು ಹೊಂದಿದ್ದಾರೆ. ಇವರ ಬೆಲೆ ಸುಮಾರು 1 ಕೋಟಿ ರೂ.

* ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5712R : ಇದರ ಬೆಲೆ ಸುಮಾರು 1.65 ಕೋಟಿ ರೂ ಆಗಿದೆ.

* ದುಬಾರಿ ಫಿಲಿಪ್ ವಾಚ್ , ಇದು 18K ವೈಟ್ ಗೋಲ್ಡ್ ಮಾದರಿಯಾಗಿದೆ. ಈ ಗಡಿಯಾರದ ಡಯಲ್ 255 ವಜ್ರಗಳಿಂದ ಕೂಡಿದೆ. ಡಯಲ್ ಪ್ಲೇಟ್ ಅನ್ನು 18 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. ಬೆಲ್ಟ್ ಮತ್ತು ಡಯಲ್ ಸೇರಿದಂತೆ ಒಟ್ಟು 1343 ವಜ್ರಗಳನ್ನು ಅದರಲ್ಲಿ ಕೆತ್ತಲಾಗಿದೆ. ಇವರ ಬೆಲೆ ಸುಮಾರು 2.7 ಕೋಟಿ ರೂ.

Story first published: Monday, June 6, 2022, 9:42 [IST]
Other articles published on Jun 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X