ಕೊಹ್ಲಿ ಹುಟ್ಟುಹಬ್ಬದ ವಿಶೇಷ, 2017ರ ಸಾಧನೆಗಳ ಹಿನ್ನೋಟ!

Posted By:

ಬೆಂಗಳೂರು, ನವೆಂಬರ್ 05: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಸೋತರೂ, ವಿರಾಟ್ ಕೊಹ್ಲಿ ಸಂಭ್ರಮ ಆಚರಣೆಯಲ್ಲಿ ತೊಡಗಿದ್ದರು.

ತ್ವರಿತಗತಿಯಲ್ಲಿ 9 ಸಾವಿರ ರನ್ : ಟಾಪ್ 5 ಆಟಗಾರರಲ್ಲಿ ಕೊಹ್ಲಿ ನಂ.1

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವತಿಯಿಂದ ಕೊಹ್ಲಿಗೆ ವಿಶೇಷವಾಗಿ 2017ರ ಸಾಧನೆಯ ಹಿನ್ನೋಟದ ಪರಿಚಯಾತ್ಮಕ ವಿಡಿಯೋ ಉಡುಗೊರೆ ನೀಡಲಾಗಿದೆ.

29 ವರ್ಷದ ವಿರಾಟ್‌ ಕೊಹ್ಲಿ 9 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ ಮಾಡಿರುವ ಸಾಧನೆ ಅನುಕರಣೀಯ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿರುವ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ ಹಿಂದಕ್ಕೆ ಹಾಕಿರುವ ಕೊಹ್ಲಿ(32 ಶತಕ) ಗಳಿಸಿದ್ದಾರೆ. 49 ಶತಕ ಗಳಿಸಿರುವ ಸಚಿನ್ ಕೂಡಾ ಇಷ್ಟು ತ್ವರಿತವಾಗಿ ರನ್ ಗಳಿಸಿರಲಿಲ್ಲ.

29 ಕ್ಕೆ ಕಾಲಿಟ್ಟ ಟೀ ಇಂಡಿಯಾ ನಾಯಕ ಕೊಹ್ಲಿ

2008ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೊಹ್ಲಿ, ಜಾಗತಿಕ ಕ್ರಿಕೆಟ್ ನಲ್ಲಿ ರನ್ ಮಷಿನ್ ಆಗಿ ಗುರುತಿಸಿಕೊಂಡಿದ್ದಾರೆ. ನಾಯಕನಾಗಿ, ಆಟಗಾರನಾಗಿ ಉಗ್ರ ಪ್ರತಾಪಿ ಎನಿಸಿಕೊಂಡಿರುವ ಕೊಹ್ಲಿ ಎಂದರೆ ತಂಡದ ಇತರೆ ಆಟಗಾರರಿಗೂ ಅಚ್ಚು ಮೆಚ್ಚು.

ಕೊಹ್ಲಿ ಸಾಧನೆ ಅಂಕಿ ಅಂಶ

ಕೊಹ್ಲಿ ಸಾಧನೆ ಅಂಕಿ ಅಂಶ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಭಾರತದ ಪರ 60 ಟೆಸ್ಟ್‌‌‌, 202 ಏಕದಿನ ಹಾಗೂ 53 ಟಿ20 ಪಂದ್ಯ ಆಡಿರುವ ಕೊಹ್ಲಿ ಟೆಸ್ಟ್‌‌ನಲ್ಲಿ 4658ರನ್‌, ಏಕದಿನದಲ್ಲಿ 9030 ಹಾಗೂ ಟಿ20 ಪಂದ್ಯದಲ್ಲಿ 1878ರನ್‌‌ ಗಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ನಾಯಕರಾಗಿ ಕೂಡಾ ಉತ್ತಮ ಸಾಧನೆ ಮಾಡಿದ್ದಾರೆ.

ನಿವೃತ್ತಿ ಬಗ್ಗೆ ಹೇಳಿದ್ದೇನು?

ನಿವೃತ್ತಿ ಬಗ್ಗೆ ಹೇಳಿದ್ದೇನು?

ಕ್ರಿಕೆಟ್‌‌ ಉತ್ಸಾಹ ಕಡಿಮೆಯಾಗುತ್ತಿದ್ದಂತೆ ಕ್ರಿಕೆಟ್‌‌ ವೃತ್ತಿಗೆ ವಿದಾಯ ಘೋಷಿಸುತ್ತೇನೆ. ನನ್ನ ದೇಹ ಸದೃಢವಾಗಿರುವರೆಗೂ ನಾನು ಮೈದಾನದಲ್ಲಿ ಕಾಣಿಸಿಕೊಳ್ಳುವೆ, ಅನಾರೋಗ್ಯ ಅಥವಾ ದೇಹ ಸರಿಯಾಗಿ ಸ್ಪಂದಿಸದಿದ್ದರೆ ನಿವೃತ್ತಿ ಘೋಷಣೆ ಮಾಡುವೆ ಎಂದು ಚಾಟ್ ಶೋವೊಂದರಲ್ಲಿ ಕೊಹ್ಲಿ ಹೇಳಿದ್ದಾರೆ.

ಅತಿ ಹೆಚ್ಚು ಶತಕ ಗಳಿಸಿದ ಆಟಗಾರ

ಅತಿ ಹೆಚ್ಚು ಶತಕ ಗಳಿಸಿದ ಆಟಗಾರ

* 15ನೇ ಜನವರಿ, ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯ
-ರನ್ ಚೇಸ್ ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ. ಸಚಿನ್ ಹೆಸರಿನಲ್ಲಿದ್ದ 14 ಶತಕಗಳ ದಾಖಲೆ ಮುರಿದ ಕೊಹ್ಲಿ.

ತ್ವರಿತಗತಿಯಲ್ಲಿ 1000ರನ್ ಗಳಿಕೆ

ತ್ವರಿತಗತಿಯಲ್ಲಿ 1000ರನ್ ಗಳಿಕೆ

* 22 ಜನವರಿ, ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯ
- ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ತ್ವರಿತಗತಿಯಲ್ಲಿ 1000ರನ್ ಗಳಿಕೆ.

ಇದರ ಜತೆಗೆ 2017ರಲ್ಲಿ 2000ರನ್ ಗಳಿಸಿದ್ದು, ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. 2012, 2014 ಹಾಗೂ 2016ರಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

4 ಸತತ ದ್ವಿತಶಕ ಸಿಡಿಸಿದ ಮೊದಲ ಆಟಗಾರ

4 ಸತತ ದ್ವಿತಶಕ ಸಿಡಿಸಿದ ಮೊದಲ ಆಟಗಾರ

* ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ನಾಯಕ ಕೊಹ್ಲಿ.
- 4 ಸತತ ಸರಣಿಯಲ್ಲಿ ದ್ವಿತಶಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡ ಕೊಹ್ಲಿ. ಡಾನ್ ಬ್ರಾಡ್ಮನ್ ಹಾಗೂ ರಾಹುಲ್ ದ್ರಾವಿಡ್ ಹೆಸರಿನಲ್ಲಿದ್ದ ದಾಖಲೆ ಮುರಿದ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ನಲ್ಲೂ ದಾಖಲೆಗಳನ್ನು ಮುರಿದಿದ್ದಾರೆ.

ಮೂರು ಸರಣಿ ಕ್ಲೀನ್ ಸ್ವೀಪ್

ಮೂರು ಸರಣಿ ಕ್ಲೀನ್ ಸ್ವೀಪ್

3ನೇ ಟೆಸ್ಟ್ ಪಂದ್ಯ, ಶ್ರೀಲಂಕಾ, ಪಲ್ಲಕೆಲೆ
- ವಿದೇಶಗಳಲ್ಲಿ 3 ಟೆಸ್ಟ್ ಪಂದ್ಯಗಳ ಸರಣಿ ಕ್ಲೀನ್ ಸ್ವೀಪ್ ಮಾಡಿದ ಮೊದಲ ನಾಯಕ.

ಟಿ20ಐ, ಶ್ರೀಲಂಕಾ, ಕೊಲಂಬೊ
- ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತ್ವರಿತಗತಿಯಲ್ಲಿ 15000ರನ್ ಗಳಿಕೆ.
- 3-0,5-0,1-0 ಮೂರು ಸರಣಿ ಕ್ಲೀನ್ ಸ್ವೀಪ್ ಮಾಡಿದ ಮೊದಲ ಟೀಂ ಇಂಡಿಯಾ ನಾಯಕ.

ತ್ವರಿತಗತಿಯಲ್ಲಿ 9000ರನ್ ಗಳಿಕೆ

ತ್ವರಿತಗತಿಯಲ್ಲಿ 9000ರನ್ ಗಳಿಕೆ

29 ಅಕ್ಟೋಬರ್, ಮೂರನೇ ಏಕದಿನ ಪಂದ್ಯ, ನ್ಯೂಜಿಲೆಂಡ್
-113 ರನ್, ತ್ವರಿತಗತಿಯಲ್ಲಿ 9000ರನ್ ಗಳಿಕೆ.


ಭಾರತೀಯರ ಪೈಕಿ ತ್ವರಿತವಾಗಿ 4,000, 5,000,6,000,7,000,8,000 ಹಾಗೂ 9,000 ರನ್ ಗಡಿ ದಾಟಿದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಶಿಖರ್ ಧವನ್ ಅವರು ಜಂಟಿಯಾಗಿ 1,000ರನ್ ಗಡಿದಾಟಿದ ಸಾಧನೆ ಮಾಡಿದ್ದಾರೆ. 2 ಹಾಗೂ 3 ಸಾವಿರ ರನ್ ಮೈಲಿಗಲ್ಲಿ ಕೂಡಾ ಧವನ್ ಪಾಲಾಗಿದೆ.

ಅತ್ಯಧಿಕ ಶತಕ ಗಳಿಕೆ ಪಟ್ಟಿಯಲ್ಲಿ 2ನೇ ಸ್ಥಾನ

ಅತ್ಯಧಿಕ ಶತಕ ಗಳಿಕೆ ಪಟ್ಟಿಯಲ್ಲಿ 2ನೇ ಸ್ಥಾನ

*29 ಅಕ್ಟೋಬರ್, ಮೂರನೇ ಏಕದಿನ ಪಂದ್ಯ, ನ್ಯೂಜಿಲೆಂಡ್, 113ರನ್ ಗಳಿಕೆ.
-ಸಚಿನ್(49) ನಂತರ ಅತ್ಯಧಿಕ ಶತಕ ಗಳಿಕೆ ಪಟ್ಟಿಯಲ್ಲಿ ಕೊಹ್ಲಿ (32) ಎರಡನೇ ಸ್ಥಾನ.

200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿರುವ ಕೊಹ್ಲಿ ಅವರು ಶತಕಗಳ ಪಟ್ಟಿಯಲ್ಲಿ ಹಾಲಿ ಆಟಗಾರರ ಪೈಕಿ ಅಗ್ರಸ್ಥಾನಕ್ಕೇರಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ಶತಕ ಗಳಿಸಿದವರ ಪೈಕಿ ಸಚಿನ್ ತೆಂಡೂಲ್ಕರ್ (49) ಈಗಲೂ ಮುಂದಿದ್ದಾರೆ.

Story first published: Sunday, November 5, 2017, 13:16 [IST]
Other articles published on Nov 5, 2017
Please Wait while comments are loading...