ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶತಕ ಸಿಡಿಸಿ ಗೆಲ್ಲಿಸಿದ ರಾಸ್ ಟೇಯ್ಲರನ್ನು ಹರ್ಭಜನ್ ಪ್ರಶ್ನೆ ಮಾಡಿದ್ದು ಈ 'ವಿಚಿತ್ರ' ಕಾರಣಕ್ಕೆ!!

Harbhajan Singh takes dig at Ross Taylors tongue poking celebration | Harbhajan | Ross Taylor
Harbhajan Singh Takes Dig At Ross Taylor’s Tongue Poking Celebration

ನ್ಯೂಜಿಲೆಂಡ್ ಕ್ರಿಕೆಟ್‌ ಕಂಡ ಅತ್ಯಂತ ಪ್ರತಿಭಾನ್ವಿತ ಕ್ರಿಕೆಟಿಗ ರಾಸ್ ಟೇಯ್ಲರ್. ಟೀಮ್ ಇಂಡಿಯಾ ವಿರುದ್ಧದ ಸರಣಿಯಲ್ಲಿ ಟೇಯ್ಲರ್ ಅದ್ಭುತವಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಟಿ20 ಪಂದ್ಯಗಳಲ್ಲಿ ಟೇಯ್ಲರ್ ಅದ್ಭುತ ಪ್ರದರ್ಶನ ನೀಡಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಟೇಯ್ಲರ್ ಎಡವಲಿಲ್ಲ.

ಆದರೂ ರಾಸ್ ಟೇಯ್ಲರ್ ಅವರನ್ನು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಅದು ಕೂಡ ವಿಚಿತ್ರ ಕಾರಣಕ್ಕೆ. ರಾಸ್ ಟೇಯ್ಲರ್ ಅವರ ವಿಚಿತ್ರ ಅಭ್ಯಾಸವೊಂದು ಹರ್ಭಜನ್ ಅವರಿಗೂ ಕುತೂಹಲ ಮೂಡಿಸಿ ಈ ಪ್ರಶ್ನೆ ಕೇಳಿಯೇ ಬಿಟ್ಟಿದ್ದಾರೆ.

 ಮೊದಲ ಪಂದ್ಯ ಸೋತರೂ ಈ ವಿಚಾರದಲ್ಲಿ ಟೀಮ್ ಇಂಡಿಯಾ ಗೆದ್ದಿದೆ! ಮೊದಲ ಪಂದ್ಯ ಸೋತರೂ ಈ ವಿಚಾರದಲ್ಲಿ ಟೀಮ್ ಇಂಡಿಯಾ ಗೆದ್ದಿದೆ!

ಹರ್ಭಜನ್ ಅವರು ಕೇಳಿದ ಪ್ರಶ್ನೆ ಅಭಿಮಾನಿಗಳಿಗೂ ಕಾಡದೆ ಇರದು. ಈ ಕುತೂಹಲ ತಡೆಯಲಾಗದ ಹರ್ಭಜನ್ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪ್ರಶ್ನೆಯನ್ನು ಕೇಳಿಯೇ ಬಿಟ್ಟಿದ್ದಾರೆ. ಅದಕ್ಕೆ ಟೇಯ್ಲರ್ ಯಾವ ರೀತಿ ಉತ್ತರಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಭಜ್ಜಿ ಪ್ರಶ್ನೆಗೆ ಕಾರಣವೇನು!

ಭಜ್ಜಿ ಪ್ರಶ್ನೆಗೆ ಕಾರಣವೇನು!

ಅಷ್ಟಕ್ಕೂ ಭಜ್ಜಿ ಟೇಯ್ಲರನ್ನು ಪ್ರಶ್ನೆ ಮಾಡಿದ್ದು ಕ್ರಿಕೆಟ್ ಆಟದ ವಿಚಾರಕ್ಕಲ್ಲ.ರಾಸ್ ಟೇಯ್ಲರ್ ಶತಕ ಸಿಡಿಸಿದ ಬಳಿಕ ಹೆಲ್ಮೆಟ್ ಎತ್ತಿ ಸಂಭ್ರಮಿಸುವ ಸಂದರ್ಭದಲ್ಲಿ ತನ್ನ ನಾಲಗೆಯನ್ನು ಹೊರಚಾಚಿಯೇ ಇರುತ್ತಾರೆ. ಈ ವಿಚಿತ್ರ ಮ್ಯಾನರಿಸಮ್ ಬಗ್ಗೆ ಅಭಿಮಾನಿಗಳಿಗೂ ಕುತೂಹಲ ಇದ್ದೇ ಇದೆ. ಆದರೆ ಯಾರೂ ಪ್ರಶ್ನಿಸಿರಲಿಲ್ಲ. ಆದರೆ ಹರ್ಭಜನ್ ಈ ಬಗ್ಗೆ ಪ್ರಶ್ನೆ ಮಾಡಿಯೇ ಬಿಟ್ಟಿದ್ದಾರೆ.

ಹೊಗಳಿ ಕಾಲೆಳೆದ ಹರ್ಭಜನ್:

ಹೊಗಳಿ ಕಾಲೆಳೆದ ಹರ್ಭಜನ್:

ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಟೇಲರ್‌ ಅವರಿಗೆ ಹರ್ಭಜನ್ ಅಭಿನಂದನೆ ಸಲ್ಲಿಸಿ ಅದ್ಭುತ ಆಟ ಎಂದು ಹೊಗಳಿದ್ದಾರೆ. ಇದರ ಜೊತೆಗೇ ಪ್ರತಿ ಬಾರಿ ಶತಕ ಸಿಡಿಸಿದಾಗಲೂ ನಾಲಗೆ ಹೊರಹಾಕುತ್ತೀರಾ ಯಾಕೆ? ಎಂದು ಪ್ರಶ್ನೆ ಕೇಳಿದ್ದಾರೆ. ಆದರೆ ಇದಕ್ಕೆ ಟೇಯ್ಲರ್ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.

ನಾಲ್ಕನೇ ಕ್ರಮಾಂಕದಲ್ಲಿ ಅತಿಹೆಚ್ಚು ಶತಕ:

ನಾಲ್ಕನೇ ಕ್ರಮಾಂಕದಲ್ಲಿ ಅತಿಹೆಚ್ಚು ಶತಕ:

ರಾಸ್ ಟೇಯ್ಲರ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಆಟಗಾರ. 19 ಶತಕ ಸಿಡಿಸಿರುವ ಟೇಯ್ಲರ್ ಈ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಎರಡನೇ ಈ ಕ್ರಮಾಂಕದಲ್ಲಿ ಸ್ಥಾನದಲ್ಲಿ 15 ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಆಟಗಾರ ಎಬಿಡಿ ವಿಲಿಯರ್ಸ್ ಇದ್ದಾರೆ.

84 ಎಸೆತಗಳಲ್ಲಿ 109ರನ್ ಸಿಡಿಸಿದ ಟೇಯ್ಲರ್:

84 ಎಸೆತಗಳಲ್ಲಿ 109ರನ್ ಸಿಡಿಸಿದ ಟೇಯ್ಲರ್:

ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆದ್ದುಕೊಂಡಿದೆ. ಟೀಮ್ ಇಂಡಿಯಾ ನೀಡಿದ 348ರನ್‌ಗಳ ಬೃಹತ್ ಗುರಿಯನ್ನು ನ್ಯೂಜಿಲೆಂಡ್ ಬೆನ್ನತ್ತಿ ಹೊರಟಿತ್ತು. ಈ ವೇಳೆ ರಾಸ್‌ ಟೇಯ್ಲರ್ ಸ್ಪೋಟಕ ಆಟವಾಡಿ ಭರ್ಜರಿ ಶತಕ ಸಿಡಿಸಿದರು. ಅತಿಥೇಯರ ಗೆಲುವಿಗೆ ಕಾರಣವಾದರು.

Story first published: Friday, February 7, 2020, 11:23 [IST]
Other articles published on Feb 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X