ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ರೋಣಾಚಾರ್ಯ ಪ್ರಶಸ್ತಿಗೆ ಕಡೆಗಣನೆ, ಕನ್ನಡಿಗನಿಗೆ ಅನ್ಯಾಯ

By Mahesh

ಬೆಂಗಳೂರು, ಆಗಸ್ಟ್ 20: ಪ್ಯಾರಾ-ಸ್ಪೋರ್ಟ್ಸ್ ಕೋಚ್, ಕರ್ನಾಟಕದ ಸತ್ಯನಾರಾಯಣ ಅವರ ಹೆಸರನ್ನು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿಯಿಂದ ಕಡೆಕ್ಷಣದಲ್ಲಿ ಕೈಬಿಡಲಾಗಿದೆ.

ಕನ್ನಡಿಗ ಟೆನಿಸ್ ಪಟು ರೋಹನ್ ಬೋಪಣ್ಣ ಹಾಗೂ ವೇಟ್​ಲಿಫ್ಟರ್ ಸಂಜಿತಾ ಚಾನು ಹೆಸರನ್ನು ಅರ್ಜುನ ಪ್ರಶಸ್ತಿ ಪಟ್ಟಿಗೆ ಸೇರಿಸಲಾಗಿಲ್ಲ. ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸುವ ಮೂಲಕ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಜಯಿಸಿದ ಭಾರತದ 4ನೇ ಆಟಗಾರ ಎನಿಸಿಕೊಂಡಿರುವ ಬೋಪಣ್ಣ ಅವರ ಹೆಸರನ್ನು ಪರಿಗಣಿಸಿಲ್ಲ.

2016ರ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಸ್ವರ್ಣ ಪದಕ ಜಯಿಸಿದ್ದ ಮರಿಯಪ್ಪನ್ ತಂಗವೇಲುಗೆ ಸತ್ಯನಾರಾಯಣ ಕೋಚ್ ಆಗಿ ಕಾರ್ಯನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

I've been wrongly denied Dronacharya Award: Satyanarayana


ಆಕ್ಷೇಪ ಏಕೆ?: ಸತ್ಯನಾರಾಯಣ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿ ಶಿಫಾರಸು ಮಾಡುತ್ತಿದ್ದಂತೆಯೇ ಆಕ್ಷೇಪ ಕೇಳಿ ಬಂದಿತ್ತು.
ಪಿಸಿಐನ ಮಾಜಿ ಮುಖ್ಯಸ್ಥ ರಾಜೇಶ್ ತೋಮಾರ್ ಅವರು 2015ರಲ್ಲಿ ರಾಷ್ಟ್ರೀಯ ಪ್ಯಾರಾ ಕ್ರೀಡಾ ಇಲಾಖೆ ವಿರುದ್ಧ ದನಿ ಎತ್ತಿ, ದೆಹಲಿಯ ಸಾಕೇತ್ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ಪ್ರಕರಣದಲ್ಲಿ ಕೋಚ್ ಸತ್ಯನಾರಾಯಣ ಅವರ ಹೆಸರು ಇದೆ ಎಂದು ಕೆಲ ಮಾಧ್ಯಮಗಳಲ್ಲಿ ಬದಿರುವ ವರದಿಯನ್ನು ಆಧರಿಸಿ, ಅವರ ಹೆಸರನ್ನು ಆಯ್ಕೆ ಸಮಿತಿ ಪರಿಗಣಿಸಿಲ್ಲ ಎಂದು ತಿಳಿದು ಬಂದಿದೆ.

ಕ್ರೀಡಾ ಸಚಿವಾಲಯ ನೇಮಿಸಿದ್ದ ನಿವೃತ್ತಿ ನ್ಯಾಯಮೂರ್ತಿ ಸಿಕೆ ಠಾಕೂರ್ ನೇತೃತ್ವದ ಸಮಿತಿ 2 ಪ್ಯಾರಾ ಅಥ್ಲೀಟ್​ಗಳು ಸೇರಿ 17 ಮಂದಿಯನ್ನು ಅರ್ಜುನ ಪ್ರಶಸ್ತಿಗೆ ಹಾಗೂ ಸರ್ದಾರ್ ಸಿಂಗ್ ಹಾಗೂ ದೇವೇಂದ್ರ ಜಜಾರಿಯಾರನ್ನು ಖೇಲ್ ರತ್ನಕ್ಕೆ ಶಿಫಾರಸು ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸತ್ಯನಾರಾಯಣ, ನಾನೇನು ತಪ್ಪು ಮಾಡಿಲ್ಲ. ಪ್ರಶಸ್ತಿಗಾಗಿ ನಾನು ಕೋರ್ಟಿಗೆ ಹೋಗಬೇಕಾಗಿಲ್ಲ. ಕ್ರೀಡೆ ಬಗ್ಗೆ ಮರ್ಯಾದೆ ಹೊಂದಿದ್ದೇನೆ. ಈ ಬಗ್ಗೆ ಕ್ರೀಡಾ ಸಚಿವ ವಿಜಯ್ ಗೋಯಲ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥ ಪಿ ಗೋಪಿಚಂದ್ ಗೆ ಪತ್ರ ಬರೆದಿದ್ದೇನೆ. ಆದರೆ, ಪ್ರತಿಕ್ರಿಯೆ ಇನ್ನೂ ಸಿಕ್ಕಿಲ್ಲ ಎಂದಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X