ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಪೈರ್‌ ತೀರ್ಪಿಗೆ ಅಸಮಾಧಾನ, ಇಂಗ್ಲೆಂಡ್‌ನ ಜೇಸನ್‌ ರಾಯ್‌ಗೆ ದಂಡ!

ICC CWC 2019: Jason Roy fined for showing dissent at umpires decision

ಬರ್ಮಿಂಗ್‌ಹ್ಯಾಮ್‌, ಜುಲೈ 12: ಪ್ರಸಕ್ತ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್ಸ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ ಅಂಪೈರ್‌ ತೀರ್ಪಿಗೆ ಅಸಮಾಧಾನ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಪಂದ್ಯ ಸಂಭಾವನೆಯ ಶೇ.30 ರಷ್ಟು ದಂಡ ತೆರುವಂತಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಐಸಿಸಿ ನೀತಿ ಸಂಹಿತೆಯ ಪ್ರಾತಮಿಕ ಹಂತದ ನಿಯಮ ಉಲ್ಲಂಘನೆ ಮಾಡಿದ ಕಾರಣ ರಾಯ್‌ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ರಾಯ್‌ 65 ಎಸೆತಗಳಲ್ಲಿ 85 ರನ್‌ ಚೆಚ್ಚುವ ಮೂಲಕ ಇಂಗ್ಲೆಂಡ್‌ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

"ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಅಂಪೈರ್‌ ತೀರ್ಪಿಗೆ ಅಸಮಾಧಾನ ವ್ಯಕ್ತ ಪಡಿಸಿದ ನೀತಿಯನ್ನು ರಾಯ್‌ ಉಲ್ಲಂಘಿಸಿದ್ದಾರೆ. ಅವರ ಪಂದ್ಯ ಸಂಭಾವನೆಯ ಶೇ.30 ರಷ್ಟು ದಂಡ ತೆರುವುದರ ಜೊತೆಗೆ ರಾಯ್‌ ವಿರುದ್ಧ ಎರಡು ಡೀಮೆರಿಟ್‌ ಅಂಕಗಳನ್ನು ಕೂಡ ವಿಧಿಸಲಾಗಿದೆ," ಎಂದು ಐಸಿಸಿ ತನ್ನ ಅಧಿಋತ ಹೇಳಿಕೆಯಲ್ಲಿ ತಿಳಿಸಿದೆ.

ಆಸೀಸ್‌ ವಿರುದ್ಧ ಸೆಮಿಫೈನಲ್‌ ಗೆದ್ದು ತೊಡೆತಟ್ಟಿ ಮಾರ್ಗನ್‌ ಹೇಳಿದ್ದಿದು!ಆಸೀಸ್‌ ವಿರುದ್ಧ ಸೆಮಿಫೈನಲ್‌ ಗೆದ್ದು ತೊಡೆತಟ್ಟಿ ಮಾರ್ಗನ್‌ ಹೇಳಿದ್ದಿದು!

ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 224 ರನ್‌ಗಳ ಗುರಿ ಬೆನ್ನತ್ತಿದ್ದ ಸಂದರ್ಭದಲ್ಲಿ 19ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. 85 ರನ್‌ ಗಳಿಸಿದ್ದ ರಾಯ್‌ ಅವರ ಕಾಟ್‌ ಬಿಹೈಂಡ್‌ಗಾಗಿ ವೇಗಿ ಪ್ಯಾಟ್‌ ಕಮಿನ್ಸ್‌ ಮತ್ತು ವಿಕೆಟ್‌ಕೀಪರ್‌ ಅಲೆಕ್ಸ್‌ ಕೇರಿ ಮನವಿ ಮಾಡಿದ್ದರು. ಇದು ನಾಟ್‌ಔಟ್‌ ಆಗಿದ್ದರೂ ಕೂಡ ಸ್ಟ್ರೈಕ್‌ ಅಂಪೈರ್‌ ಕುಮಾರ ಧರ್ಮಸೇನಾ ಔಟ್ ತೀರ್ಮಾನ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ರಾಯ್‌, ತೀರ್ಪಿಗೆ ಕೂಡಲೇ ಅಸಮಾಧಾನ ವ್ಯಕ್ತ ಪಡಿಸಿ ಅಂಪೈರ್‌ಗಳ ಬಳಿ ಚರ್ಚೆಗಿಳಿದಿದ್ದರು. ರಾಯ್‌ ಇನಿಂಗ್ಸ್‌ನಲ್ಲಿ 9 ಫೋರ್‌ ಮತ್ತು 5 ಸಿಕ್ಸರ್‌ಗಳು ಮೂಡಿಬಂದಿದ್ದವು.

ಇಂಡೊ-ಪಾಕ್‌ ವಿಶ್ವಕಪ್‌ ಪಂದ್ಯದ ಚೆಂಡಿನ ಬೆಲೆ ಎಷ್ಟೂ ಅಂತೀರ!ಇಂಡೊ-ಪಾಕ್‌ ವಿಶ್ವಕಪ್‌ ಪಂದ್ಯದ ಚೆಂಡಿನ ಬೆಲೆ ಎಷ್ಟೂ ಅಂತೀರ!

ಮ್ಯಾಚ್‌ ರೆಫ್ರಿ ರಂಜನ್‌ ಮಧುಗಲೆ ವಿಧಿಸಿದ ಶಿಕ್ಷೆಗೆ ಸಮ್ಮತಿಸಿರುವ ರಾಯ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆನ್‌ಫೀಲ್ಡ್‌ ಅಂಪೈರ್‌ಗಳಾದ ಮಾರಾಯಿಸ್‌ ಎರಾಸ್ಮಸ್‌ ಮತ್ತು ಕುಮಾರ ಧರ್ಮಸೇನಾ, ಮೂರನೇ ಅಂಪೈರ್‌ ಕ್ರಿಸ್‌ ಗ್ಯಾಫನಿ ಮತ್ತು ನಾಲ್ಕನೇ ಅಂಪೈರ್‌ ಅಲೀಮ್‌ ದಾರ್‌ ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್‌ ವಿರುದ್ಧ ದಂಡಕ್ಕೆ ಸೂಚಿಸಿದ್ದಾರೆ.

1992ರ ವಿಶ್ವಕಪ್‌ ಬಳಿಕ ಇದೇ ಮೊದಲ ಬಾರಿ ಫೈನಲ್‌ ತಲುಪುವಲ್ಲಿ ಯಶಸ್ವಿಯಾಗಿರುವ ಇಂಗ್ಲೆಂಡ್‌ ಭಾನುವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಪೈಪೋಟಿ ನಡೆಸಲಿದೆ. ಯಾರೇ ಗೆದ್ದರು ವಿಶ್ವಕಪ್‌ ಇತಿಹಾಸದಲ್ಲಿ ನೂತನ ಚಾಂಪಿಯನ್ಸ್‌ ಎಂಬ ಇತಿಹಾಸ ಬರೆಯಲಿದ್ದಾರೆ.

Story first published: Friday, July 12, 2019, 15:56 [IST]
Other articles published on Jul 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X