ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲ 104 ಸದಸ್ಯ ರಾಷ್ಟ್ರಗಳಿಗೂ ಐಸಿಸಿ ಟಿ20 ಮಾನ್ಯತೆ

ICC grants t20 status to all its 104 members

ಕೋಲ್ಕತ್ತ, ಏಪ್ರಿಲ್ 26: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಎಲ್ಲ 104 ಸದಸ್ಯ ರಾಷ್ಟ್ರಗಳಿಗೂ ಟಿ 20 ಮಾನ್ಯತೆ ನೀಡಿದೆ. ಪುರುಷ ಮತ್ತು ಮಹಿಳೆಯರ ಎರಡೂ ತಂಡಗಳಿಗೆ ಈ ಮಾನ್ಯತೆ ದೊರಕಲಿದೆ.

ಕೋಲ್ಕತ್ತದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಐಸಿಸಿ ಸಿಇಒ ಡೇವಿಡ್ ರಿಚರ್ಡ್‌ಸನ್‌ ಈ ಹೊಸ ಬೆಳವಣಿಗೆಯನ್ನು ಖಚಿತಪಡಿಸಿದರು. ಅಲ್ಲದೆ, ಟಿ20 ವಿಭಾಗದಲ್ಲಿ ಜಾಗತಿಕ ಶ್ರೇಣಿ ವ್ಯವಸ್ಥೆಯನ್ನು ಸಹ ಆರಂಭಿಸುವುದಾಗಿ ತಿಳಿಸಿದರು.

ಪ್ರಸ್ತುತ ಒಟ್ಟು 18 ಸದಸ್ಯ ದೇಶಗಳು ಟಿ20 ಮಾನ್ಯತೆ ಪಡೆದುಕೊಂಡಿವೆ. ಇದರಲ್ಲಿ 12 ಪೂರ್ಣಪ್ರಮಾಣದ ಸದಸ್ಯ ದೇಶಗಳ ಜತೆ ಸ್ಕಾಟ್ಲೆಂಡ್, ನೆದರ್‌ಲೆಂಡ್, ಹಾಂಕಾಂಗ್, ಯುಎಇ, ಒಮನ್ ಮತ್ತು ನೇಪಾಳ ದೇಶಗಳು ಒಳಗೊಂಡಿವೆ.

ಚೆಂಡು ವಿರೂಪಕ್ಕೆ ಕಠಿಣ ಶಿಕ್ಷೆ
ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ವೇಳೆ ಉಂಟಾದ ಚೆಂಡು ವಿರೂಪ ಪ್ರಕರಣದ ವಿವಾದದಿಂದ ಎಚ್ಚೆತ್ತುಕೊಂಡಿರುವ ಐಸಿಸಿ, ಚೆಂಡು ವಿರೂಪ ಮತ್ತು ಅಂಗಳದಲ್ಲಿ ನಿಂದನೆ (ಸ್ಲೆಡ್ಜಿಂಗ್) ಮುಂತಾದವುಗಳನ್ನು ತಡೆಯಲು ಕಠಿಣ ನಿಯಮ ರೂಪಿಸುವುದಾಗಿ ತಿಳಿಸಿದೆ.

ಚೆಂಡು ವಿರೂಪ, ಅಸಭ್ಯ ಪದಬಳಕೆ, ನಿಂದನೆ ಮತ್ತು ಅವುಗಳಿಗೆ ಪ್ರೋತ್ಸಾಹ ನೀಡುವ ಚಟುವಟಿಕೆಗಳಿಗೆ ಕಠಿಣ ಮತ್ತು ತೀವ್ರವಾದ ಶಿಕ್ಷೆ ವಿಧಿಸಲಾಗುತ್ತದೆ. ಅದಕ್ಕೆ ಸೂಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ದಂಡ ವಿಧಿಸುವುದು ಅದಕ್ಕೆ ಸೂಕ್ತ ಕ್ರಮವಾಗಲಾರದು. ಐಸಿಸಿ ಕೆಲವು ನಿಯಮಗಳನ್ನು ರೂಪಿಸಲಿದೆ ಎಂದು ರಿಚರ್ಡ್‌ಸನ್‌ ಹೇಳಿದರು.

ಚಾಂಪಿಯನ್ಸ್ ಟ್ರೋಫಿ ಭವಿಷ್ಯ ಏನು?
2017ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಅದರ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಈ ಟೂರ್ನಿಯನ್ನು ಆಡಿಸುವುದರ ಔಚಿತ್ಯ ಏನು ಎಂಬ ಪ್ರಶ್ನೆ ಎದುರಾಗಿತ್ತು. ಟೂರ್ನಿಯನ್ನು ಸ್ಥಗಿತಗೊಳಿಸುವಂತೆ ಅಭಿಪ್ರಾಯ ವ್ಯಕ್ತವಾಗಿದ್ದವು. ಆದರೆ, 2021ರಲ್ಲಿ ಎಂದಿನಂತೆ ಚಾಂಪಿಯನ್ಸ್ ಟ್ರೋಫಿ ಟಿ20 ನಡೆಯಲಿದೆ ಎನ್ನುವ ಮೂಲಕ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.

ಟಿ20 ಲೀಗ್‌ಗಳ ಪ್ರಸರಣ
ಟಿ20 ಲೀಗ್‌ಗಳು ಮತ್ತು ಅವುಗಳ ಪ್ರಭಾವದ ಬಗ್ಗೆಯೂ ಐಸಿಸಿ ಚರ್ಚೆ ನಡೆಸಿದೆ. ಐಪಿಎಲ್‌ಗೆ ನೆರವಾಗುವ ದೃಷ್ಟಿಯಿಂದ 2020ರಿಂದ ಟೂರ್ನಿಯ ಅವಧಿಯಲ್ಲಿ ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿ ಇರುವುದಿಲ್ಲ ಎಂಬ ವರದಿಗಳು ಪ್ರಕಟವಾಗಿದ್ದವು.

ಕೆಲವು ಟಿ20 ಲೀಗ್‌ಗಳು ನಡೆಯುವ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದ ದ್ವಿಪಕ್ಷೀಯ ಸರಣಿಗಳು ನಡೆಯುವ ಉದಾಹರಣೆಗಳಿವೆ. ಇವುಗಳಿಗೆ ಯಾವ ರೀತಿ ಅವಕಾಶ ನೀಡಬಹುದು ಎಂಬ ಬಗ್ಗೆ ನಮ್ಮ ನಿಯಮಾವಳಿಗಳನ್ನು ನೋಡಬೇಕಿದೆ ಎಂದು ರಿಚರ್ಡ್‌ಸನ್‌ ತಿಳಿಸಿದರು.

Story first published: Thursday, April 26, 2018, 18:53 [IST]
Other articles published on Apr 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X