T20 ವಿಶ್ವಕಪ್‌ 2022: ಭಾರತದ ಸಂಭಾವ್ಯ ಸ್ಕ್ವಾಡ್‌ ಘೋಷಿಸಿದ ಆಶಿಶ್ ನೆಹ್ರಾ

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತದ ಮಾಜಿ ಆಟಗಾರ ಆಶಿಶ್ ನೆಹ್ರಾ ತನ್ನ ಫೇವರಿಟ್ ಟೀಂ ಇಂಡಿಯಾ ಸ್ಕ್ವಾಡ್ ಅನ್ನು ಘೋಷಣೆ ಮಾಡಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ಸಮರಕ್ಕೆ ತನ್ನ ನೆಚ್ಚಿನ ಆಟಗಾರರನ್ನ ಆಯ್ಕೆ ಮಾಡಿದ್ದು, ತಂಡ ಹೇಗಿರಬೇಕು ಎಂದು ತಿಳಿಸಿದ್ದಾರೆ.

15 ಆಟಗಾರರ ತಂಡವನ್ನ ಘೋಷಿಸಿರುವ ಆಶಿಶ್ ನೆಹ್ರಾ ಕೆಲವು ಆಯ್ಕೆಗಳು ಹುಬ್ಬೇರಿಸುವಂತೆ ಮಾಡಿದೆ. ಇದರ ಜೊತೆಗೆ ಯಾವುದೇ ಅನುಮಾನವಿಲ್ಲದೆ ರೋಹಿತ್ ಶರ್ಮಾ ಜೊತೆಗೆ ಕೆ.ಎಲ್ ರಾಹುಲ್ ಬ್ಯಾಟಿಂಗ್ ಮಾಡಬೇಕು ಎಂದು ಸಹ ತಿಳಿಸಿದ್ದಾರೆ. ಇಂಜ್ಯುರಿ ಬಳಿಕ ಕೆ.ಎಲ್ ರಾಹುಲ್ ಹೆಚ್ಚು ಅಗ್ರೆಸ್ಸಿವ್ ಆಗಿ ಆಡಲು ಸಾಧ್ಯವಾಗದ ಕಾರಣ ಟಿ20 ವಿಶ್ವಕಪ್‌ನಲ್ಲಿ ಅವರನ್ನ ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಪ್ರಶ್ನೆಗಳು ಎದುರಾಗಿದ್ದವು.

ಕೆ.ಎಲ್ ರಾಹುಲ್ ಆಯ್ಕೆಯಾಗಬೇಕು ಎಂದು ಸಮರ್ಥಿಸಿಕೊಂಡ ಆಶಿಶ್ ನೆಹ್ರಾ

ಕೆ.ಎಲ್ ರಾಹುಲ್ ಆಯ್ಕೆಯಾಗಬೇಕು ಎಂದು ಸಮರ್ಥಿಸಿಕೊಂಡ ಆಶಿಶ್ ನೆಹ್ರಾ

ಕೆ.ಎಲ್ ರಾಹುಲ್ ಆಯ್ಕೆ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಭಾರತದ ಮಾಜಿ ವೇಗಿ ''ಟಿ20 ವಿಶ್ವಕಪ್ ದೃಷ್ಟಿಯಿಂದ ನೋಡುವುದಾದ್ರೆ ನಾವಿನ್ನೂ ತುಂಬಾ ದೂರ ಸಾಗಬೇಕಿದೆ. ನನ್ನ ಪ್ರಕಾರ ಮುಂದಿನ ಆರು ಪಂದ್ಯಗಳಲ್ಲಿ ಕೆ.ಎಲ್ ರಾಹುಲ್‌ರಿಂದ ಇನ್ನಷ್ಟು ಪ್ರದರ್ಶನ ನಿರೀಕ್ಷಿಸಬೇಕಿದೆ'' ಎಂದು ಕೆ.ಎಲ್ ರಾಹುಲ್ ಆಯ್ಕೆಯ ಕುರಿತು ಸಮರ್ಥನೆ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ನಂಬರ್ 3 ಬ್ಯಾಟರ್‌

ವಿರಾಟ್ ಕೊಹ್ಲಿ ನಂಬರ್ 3 ಬ್ಯಾಟರ್‌

ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಓಪನರ್‌ಗಳಾಗಿ ಕಣಕ್ಕಿಳಿದ ಬಳಿಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುವುದೇ ಹೆಚ್ಚು ಸೂಕ್ತ ಎಂದು ನೆಹ್ರಾ ಹೇಳಿದ್ದಾರೆ. ಏಷ್ಯಾಕಪ್‌ 2022ರಲ್ಲಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಎರಡು ಅರ್ಧಶತಕ ಸಿಡಿಸಿದರು. ಸೂರ್ಯಕುಮಾರ್ ಯಾದವ್‌ರನ್ನ ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಯಿತು.

''ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ 11ನಲ್ಲಿ ಆಡಬೇಕು, ಏಕೆಂದರೆ ರಿಷಭ್ ಪಂತ್‌ಗೆ ಬದಲಿ ಸ್ಥಾನವನ್ನ ನೋಡಬಹುದು. ಈ ಇಬ್ಬರು ಆಟಗಾರರು 4 ಮತ್ತು 5 ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು'' ಎಂದು ಭಾರತದ ಮಾಜಿ ವೇಗಿ ನೆಹ್ರಾ ತಿಳಿಸಿದ್ದಾರೆ.

ಇದರ ಜೊತೆಗೆ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾರನ್ನ ಆಶಿಶ್ ನೆಹ್ರಾ ಐದು ಮತ್ತು ಆರನೇ ಸ್ಥಾನಕ್ಕೆ ಸೂಸಿಸಿದ್ದಾರೆ. ಜಡ್ಡು ಪ್ರಸ್ತುತ ಮಂಡಿ ನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವುದು ಬಹುತೇಕ ಅನುಮಾನವಾಗಿದೆ.

ಏಷ್ಯಾ ಕಪ್‌ 2022: ಈ 3 ಆಟಗಾರರನ್ನ ಸರಿಯಾಗಿ ಬಳಸಿಕೊಳ್ಳದ ಟೀಂ ಇಂಡಿಯಾ, ಸೋಲಿಗೆ ಪ್ರಮುಖ ಕಾರಣ

ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಕುರಿತು ನೆಹ್ರಾ ಆಯ್ಕೆ

ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಕುರಿತು ನೆಹ್ರಾ ಆಯ್ಕೆ

ಸ್ಪಿನ್ನರ್‌ಗಳನ್ನ ಆಯ್ಕೆ ಮಾಡಿರುವ ಆಶಿಶ್ ನೆಹ್ರಾ ''ಕೇವಲ ಚಹಾಲ್ ಮತ್ತು ಜಡೇಜಾ ಅಷ್ಟೇ ತಂಡಕ್ಕೆ ಮುಖ್ಯವಲ್ಲ, ರವಿ ಬಿಷ್ನೋಯಿ, ಅಶ್ವಿನ್ ಕೂಡ ಬಹುಮುಖ್ಯ. ಈ ಆಟಗಾರರು ಆಡಿದ್ರೆ, ತಂಡದ ಮೇಲೆ ಪರಿಣಾಮ ಬೀರುತ್ತಾರೆ'' ಅಂತಿಮವಾಗಿ ಚಹಾಲ್ ಮತ್ತು ಅಶ್ವಿನ್‌ರನ್ನ ಪ್ಲೇಯಿಂಗ್ 11ನಲ್ಲಿ ಆಯ್ಕೆ ಮಾಡಿದ ಬಳಿಕ ನೆಹ್ರಾ ಹೇಳಿದ್ದಾರೆ.

ಇದಾದ ಬಳಿಕ ನೆಹ್ರಾ ನಾಲ್ವರು ವೇಗಿಗಳನ್ನ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಅರ್ಷ್‌ದೀಪ್ ಸಿಂಗ್, ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ತಂಡದ ನಾಲ್ವರು ಬೌಲರ್‌ಗಳಾಗಿದ್ದಾರೆ.

''ನನ್ನ ತಲೆಯಲ್ಲಿ ನೆನಪಾಗುವ ಮತ್ತೊಂದು ಹೆಸರೆಂದ್ರೆ ಅದು ಮೊಹಮ್ಮದ್ ಶಮಿ. ಆದ್ರೆ ಆತನನ್ನು ಟೆಸ್ಟ್‌ ಸ್ಪೆಷಲಿಸ್ಟ್‌ ಎಂದು ಪರಿಗಣಿಸಿರುವುದರಿಂದ ಆಯ್ಕೆಗಾರರು ಆತನ ಮೇಲೆ ಹೆಚ್ಚು ಆಕರ್ಷಣೆಗೊಂಡಿಲ್ಲ. ಗುಜರಾತ್ ಟೈಟನ್ಸ್‌ ತಂಡದಲ್ಲಿ ಬಹಳ ಹತ್ತಿರದಿಂದ ಆತನನ್ನು ನೋಡಿರುವುದರಿಂದ ಹೀಗೆ ಹೇಳುತ್ತಿಲ್ಲ'' ಎಂದು ಶಮಿ ಆಯ್ಕೆ ಕುರಿತು ನೆಹ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದುಲೀಪ್‌ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ರಹಾನೆ, ಯಶಸ್ವಿ ಜೈಸ್ವಾಲ್!

Virat Kohli ಆಟ ನೋಡಿದ ಕೋಚ್ ಹಾಗು ಕ್ಯಾಪ್ಟನ್ ಮಾಡಿದ್ದೇನು | *Cricket | OneIndia Kannada
ಟಿ20 ವಿಶ್ವಕಪ್‌ಗೆ ಆಶಿಶ್ ನೆಹ್ರಾ ಸಂಭಾವ್ಯ ಟೀಂ ಇಂಡಿಯಾ ಸ್ಕ್ವಾಡ್‌

ಟಿ20 ವಿಶ್ವಕಪ್‌ಗೆ ಆಶಿಶ್ ನೆಹ್ರಾ ಸಂಭಾವ್ಯ ಟೀಂ ಇಂಡಿಯಾ ಸ್ಕ್ವಾಡ್‌

ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜವೇಂದ್ರ ಚಾಹಲ್, ರವಿಚಂದ್ರನ್ ಅಶ್ವಿನ್, ದಿನೇಶ್ ಕಾರ್ತಿಕ್, ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ದೀಪಕ್ ಹೂಡಾ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, September 10, 2022, 8:33 [IST]
Other articles published on Sep 10, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X