ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ 2022: ಈ 3 ಆಟಗಾರರನ್ನ ಸರಿಯಾಗಿ ಬಳಸಿಕೊಳ್ಳದ ಟೀಂ ಇಂಡಿಯಾ, ಸೋಲಿಗೆ ಪ್ರಮುಖ ಕಾರಣ

Dinesh karthik

ಏಷ್ಯಾಕಪ್‌ನ ಹಾಟ್ ಫೇವರಿಟ್‌ ಆಗಿ, ಸ್ಟಾರ್‌ ಪ್ಲೇಯರ್‌ಗಳ ಜೊತೆಗೆ ದುಬೈಗೆ ಕಾಲಿಟ್ಟಿದ್ದ ಹಾಲಿ ಚಾಂಪಿಯನ್ ಭಾರತ, ಸೂಪರ್ 4 ಹಂತದಲ್ಲೇ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದೆ. ಪ್ರಮುಖ ಹಂತದಲ್ಲಿ ಸತತ ಎರಡು ಪಂದ್ಯಗಳನ್ನ ಸೋಲುವ ಮೂಲಕ ಟೀಂ ಇಂಡಿಯಾ ಟೂರ್ನಿಯನ್ನ ಕಳೆದುಕೊಂಡಿತು.

ಪ್ರಮುಖ ಆಟಗಾರರು ತಂಡಕ್ಕೆ ಆಧಾರವಾಗದೇ ಉಳಿದಿದ್ದು ಮತ್ತು ಸೂಪರ್‌ಸ್ಟಾರ್‌ ಪ್ಲೇಯರ್‌ಗಳಾದ ಬುಮ್ರಾ, ಹರ್ಷಲ್ ಪಟೇಲ್ ಗಾಯಗೊಂಡಿದ್ದರ ಜೊತೆಗೆ ಜಡ್ಡು ಕೂಡ ಹೊರಬಿದ್ದಿದ್ದು, ತಂಡವನ್ನ ಒತ್ತಡಕ್ಕೆ ಸಿಲುಕಿಸಿತು.

ಸೂಪರ್ ಫೋರ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಐದು ವಿಕೆಟ್‌ಗಳಿಂದ ಮತ್ತು ಶ್ರೀಲಂಕಾ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿತು. ಭಾರತದ ತಾರಾ ಬಲವನ್ನು ಪರಿಗಣಿಸಿ, ತಂಡವು ಉತ್ತಮ ಪ್ರದರ್ಶನ ನೀಡಬೇಕಿತ್ತು. ಏಷ್ಯಾಕಪ್‌ನಲ್ಲಿ ಭಾರತದ ಸೋಲು ಸ್ವಲ್ಪ ಮಟ್ಟಿಗೆ ಪ್ರಶ್ನಾರ್ಹವಾಗಿತ್ತು ಎಂದು ಹೇಳಬಹುದು. ಆಡುವ 11ರಲ್ಲಿ ಅನಗತ್ಯ ಬದಲಾವಣೆ ಹಾಗೂ ಬ್ಯಾಟಿಂಗ್ ಕ್ರಮಾಂಕದಲ್ಲಿನ ಪ್ರಯೋಗಗಳು ಭಾರತದ ಸೋಲಿಗೆ ಕಾರಣ ಎನ್ನಬಹುದು.

ಜೊತೆಗೆ ಭಾರತ ಪರ ಕೆಲವು ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದು ಸಹ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಟೀಂ ಇಂಡಿಯಾ ಸರಿಯಾಗಿ ಬಳಸಿಕೊಳ್ಳದ ಆ ಮೂವರು ಸ್ಟಾರ್‌ ಆಟಗಾರರು ಯಾರು ಎಂಬುದನ್ನ ಈ ಕೆಳಗೆ ಕಾಣಬಹುದು.

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್ 37ನೇ ವಯಸ್ಸಿನಲ್ಲಿ ಫಿನಿಶರ್ ಪಾತ್ರದಲ್ಲಿ ಭಾರತ ತಂಡಕ್ಕೆ ಮರಳಿರುವ ಆಟಗಾರ. ಅದ್ಭುತ ಪ್ರದರ್ಶನ ನೀಡಬಲ್ಲ ಕಾರ್ತಿಕ್ ಕೊನೆಯ ಎರಡು ಓವರ್‌ಗಳಲ್ಲಿ ದೊಡ್ಡ ಮೊತ್ತವನ್ನು ಗಳಿಸುವ ಮೂಲಕ ಪಂದ್ಯದಲ್ಲಿ ಪ್ರಭಾವ ಬೀರಲು ಸಮರ್ಥರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಫಿನಿಶಿಂಗ್ ಪರಾಕ್ರಮವನ್ನು ಮುಂದುವರೆಸಿರುವ ಕಾರ್ತಿಕ್ ಅವರನ್ನು ಭಾರತವು ಕಡಿಮೆ ಬಳಸಿಕೊಂಡಿತು.

ಕಾರ್ತಿಕ್‌ಗಿಂತ ಮೊದಲು ರಿಷಬ್ ಪಂತ್ ಮತ್ತು ದೀಪಕ್ ಹೂಡಾ ಅವರನ್ನು ಭಾರತ ಪರಿಗಣಿಸಿದೆ. ಕಾರ್ತಿಕ್ ಗ್ರೂಪ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದರು. ಪಂದ್ಯವನ್ನು ಭಾರತ ಗೆದ್ದುಕೊಂಡಿತು. ಆದರೆ ಭಾರತ ಸೂಪರ್ ಫೋರ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಆಡಿದಾಗ, ಕಾರ್ತಿಕ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿರಲಿಲ್ಲ. ಈ ಎರಡೂ ಪಂದ್ಯಗಳಲ್ಲಿ ಭಾರತ ಸೋತಿತು. ಕಾರ್ತಿಕ್ ಒತ್ತಡದಲ್ಲಿ ಬ್ಯಾಟಿಂಗ್ ಮತ್ತು ರನ್ ಗಳಿಸಲು ಸಮರ್ಥರಾಗಿದ್ದರೂ ಸಹ, ಅವರನ್ನ ಪ್ರಮುಖ ಪಂದ್ಯಗಳಲ್ಲಿ ಭಾರತ ಕಡೆಗಣಿಸಿ ಎಡವಟ್ಟು ಮಾಡಿದೆ.

24,000 ರನ್‌ ಪೂರೈಸಿದ ವಿರಾಟ್ ಕೊಹ್ಲಿ: ಈ ಸಾಧನೆ ಮಾಡಿದ ವಿಶ್ವದ 7ನೇ ಬ್ಯಾಟರ್

ಅಕ್ಷರ್ ಪಟೇಲ್

ಅಕ್ಷರ್ ಪಟೇಲ್

ಅಕ್ಷರ್ ಪಟೇಲ್ ಭಾರತದ ಪ್ರಮುಖ ಸ್ಪಿನ್ ಆಲ್ ರೌಂಡರ್. ರವೀಂದ್ರ ಜಡೇಜಾ ಗಾಯಗೊಂಡಾಗ, ಭಾರತವು ಅಕ್ಷರ್ ಪಟೇಲ್‌ರನ್ನು ಪರಿಗಣಿಸಬೇಕಿತ್ತು. ಆದರೆ ಭಾರತವು ಅಕ್ಷರ್ ಅವರನ್ನು ತಿರಸ್ಕರಿಸಿತು ಮತ್ತು ತಂಡವು ದೀಪಕ್ ಹೂಡಾ ಅವರನ್ನು ಪರಿಗಣಿಸಿತು. ಹೂಡಾ ಬೌಲಿಂಗ್ ಮಾಡದೆ ಕೇವಲ ಬ್ಯಾಟ್ಸ್ ಮನ್ ಆಗಿ ಮಾತ್ರ ಭಾರತ ಆಡಿದೆ. ಇದರಿಂದ ಹಿನ್ನಡೆಯಾಯಿತು.

ಎಡಗೈ ಬ್ಯಾಟ್ಸ್‌ಮನ್‌ಗಳು ಭಾರತ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಆದ್ದರಿಂದ ಭಾರತ ಅಕ್ಷರ್‌ ಪಟೇಲ್‌ರನ್ನ ಆಡಿಸಬೇಕಿತ್ತು. ಅಕ್ಷರ್ ಪಟೇಲ್‌ ಎಡಗೈ ಸ್ಪಿನ್ನರ್ ಆಗಿಯೂ ತಂಡಕ್ಕೆ ಉಪಯುಕ್ತವಾಗಿದ್ದರು. ಆದರೆ ಭಾರತ ಅವರನ್ನು ಕಡೆಗಣಿಸುವ ನಿಲುವನ್ನು ಅನುಸರಿಸಿದೆ. ಇದರಿಂದ ತಂಡಕ್ಕೆ ಹಿನ್ನಡೆಯಾಯಿತು.

Asia Cup 2022: ನಾಯಕತ್ವವಲ್ಲ, ಇದು ಭಾರತ ತಂಡದ ದೊಡ್ಡ ಸಮಸ್ಯೆಯಾಗಿದೆ; ಆಕಾಶ್ ಚೋಪ್ರಾ

Pakistanaದ ಬೌಲರ್ Naseem Shah ಜೊತೆ ರೋಮ್ಯಾಂಟಿಕ್ ವಿಡಿಯೋ ಶೇರ್ ಮಾಡಿದ Urvashi Rautela | *Cricket |OneIndia
ದೀಪಕ್ ಚಹರ್

ದೀಪಕ್ ಚಹರ್

ದುಬೈನ ಪಿಚ್‌ನಲ್ಲಿ ಭಾರತಕ್ಕೆ ವೇಗಿಗಳ ಅಗತ್ಯವಿತ್ತು. ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯದ ಕಾರಣದಿಂದ ಹೊರಗುಳಿದಿದ್ದು, ಭಾರತೀಯ ಲೈನ್ ಅಪ್ ಯಾವುದೇ ಉತ್ತಮ ವೇಗಿಗಳಿಲ್ಲ. ಭುವನೇಶ್ವರ್ ಕುಮಾರ್ ಜತೆ ಅನನುಭವಿ ವೇಗಿಗಳಿದ್ದರು. ಭುವಿ ಅವರೊಂದಿಗೆ ಅರ್ಷದೀಪ್ ಸಿಂಗ್ ಮತ್ತು ಅವೇಶ್‌ ಖಾನ್ ಇದ್ದರು.

ಇದರಲ್ಲಿ ಅವೇಶ್‌ ಖಾನ್ ಅವರ ಕಳಪೆ ಫಾರ್ಮ್‌ನಿಂದಾಗಿ ಆಡುವ 11 ರಿಂದ ಕೈಬಿಡಲಾಯಿತು. ಹಾರ್ದಿಕ್ ಪಾಂಡ್ಯ ಅವರನ್ನು ಮೂರನೇ ವೇಗಿ ಎಂದು ಭಾರತ ಪರಿಗಣಿಸಿದೆ. ದೀಪಕ್ ಚಹರ್ ಅವರಂತಹ ಉತ್ತಮ ವೇಗಿ ಜೊತೆಗಿದ್ದರೂ ಭಾರತ ಪರಿಗಣಿಸಲಿಲ್ಲ. ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿರುವ ಚಹಾರ್ ಅವರನ್ನು ಭಾರತ ಪರಿಗಣಿಸದೇ ಇದ್ದಿದ್ದು ದೊಡ್ಡ ಹಿನ್ನಡೆ ಎಂದೇ ಹೇಳಬಹುದು.

Story first published: Friday, September 9, 2022, 23:50 [IST]
Other articles published on Sep 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X