ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ಟೆಸ್ಟ್ ರ್ಯಾಂಕಿಂಗ್: ನ್ಯೂಜಿಲೆಂಡ್ ಪರ ಅಪ್ರತಿಮ ಸಾಧನೆ ಮಾಡಿದ ಕೈಲ್ ಜೇಮಿಸನ್

Kyle jamieson

ನ್ಯೂಜಿಲೆಂಡ್‌ನ ಅದ್ಭುತ ಫಾರ್ಮ್‌ನಲ್ಲಿರುವ ವೇಗಿ ಕೈಲ್ ಜೇಮಿಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಐಸಿಸಿ ಟೆಸ್ಟ್ ರ್ಯಾಂಕಿಂಗ್ ಬೌಲಿಂಗ್‌ನಲ್ಲಿ ಕೈಲ್ ಜೇಮಿಸನ್ ಬರೋಬ್ಬರಿ 8 ಸ್ಥಾನ ಮೇಲೇರುವ ಮೂಲಕ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ರ್ಯಾಂಕಿಗೆ ಜಿಗಿದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ ಕೈಲ್ ಜೇಮಿಸನ್ ಒಟ್ಟು ಎಂಟು ವಿಕೆಟ್ ಕಬಳಿಸಿದ್ರು. ಅದ್ರಲ್ಲೂ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್‌ ಕಿತ್ತು ಮಿಂಚಿದ್ದರು. ಈ ಮೂಲಕ ಟೆಸ್ಟ್ ರೇಟಿಂಗ್‌ನಲ್ಲಿ 825 ಅಂಕಗಳನ್ನು ಪಡೆದ 5ನೇ ಕಿವೀಸ್‌ ಬೌಲರ್‌ ಎನಿಸಿದ್ದಾರೆ.

ಅಲ್ಲು ಅರ್ಜುನ್ 'ಪುಷ್ಪ' ಅವತಾರದಲ್ಲಿ ಸಂದೇಶ ನೀಡಿದ ರವೀಂದ್ರ ಜಡೇಜಾಅಲ್ಲು ಅರ್ಜುನ್ 'ಪುಷ್ಪ' ಅವತಾರದಲ್ಲಿ ಸಂದೇಶ ನೀಡಿದ ರವೀಂದ್ರ ಜಡೇಜಾ

ಇದಕ್ಕೂ ಮುನ್ನ ರಿಚರ್ಡ್‌ ಹ್ಯಾಡ್ಲೀ 909 (1985), ನೇಯ್ಲ್‌ ವ್ಯಾಗ್ನರ್‌ 859(2019), ಟಿಮ್‌ ಸೌಥೀ 839(2021) ಮತ್ತು ಟ್ರೆಂಟ್‌ ಬೌಲ್ಟ್‌ 825 (2015) ಈ ಸಾಧನೆ ಮಾಡಿದ ಕಿವೀಸ್‌ ಬೌಲರ್‌ಗಳಾಗಿದ್ದಾರೆ.

ಇನ್ನು ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿ ಟ್ರೆಂಟ್‌ ಬೌಲ್ಟ್ ಇತ್ತೀಚೆಗಷ್ಟೇ 300 ವಿಕೆಟ್ ಪಡೆದ ಸಾಧನೆ ಮಾಡಿದ್ದು, ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರು ಸ್ಥಾನ ಏರಿಕೆಗೊಂಡು 12ನೇ ಸ್ಥಾನ ತಲುಪಿದ್ದಾರೆ. ಬೋಲ್ಟ್‌ ಬಾಂಗ್ಲಾ ವಿರುದ್ಧದ ಸರಣಿಯ 9 ವಿಕೆಟ್‌ಗಳನ್ನು ಪಡೆದಿದ್ದರು.

ICC ಟೆಸ್ಟ್‌ ಬೌಲರ್ಸ್‌ ರ್ಯಾಂಕಿಂಗ್ ಪಟ್ಟಿ
1. ಪ್ಯಾಟ್‌ ಕಮಿನ್ಸ್‌ (ಆಸ್ಟ್ರೇಲಿಯಾ): 895 ರೇಟಿಂಗ್‌
2. ಆರ್‌ ಅಶ್ವಿನ್‌ (ಭಾರತ): 861 ರೇಟಿಂಗ್‌
3. ಕೈಲ್‌ ಜೇಮಿಸನ್‌ (ನ್ಯೂಜಿಲೆಂಡ್‌): 825 ರೇಟಿಂಗ್‌
4. ಶಾಹೀನ್‌ ಶಾ ಅಫ್ರಿದಿ (ಪಾಕಿಸ್ತಾನ): 822 ರೇಟಿಂಗ್‌
5. ಕಗಿಸೊ ಬರಬಾಡ (ದಕ್ಷಿಣ ಆಫ್ರಿಕಾ): 810 ರೇಟಿಂಗ್‌
6. ಜೇಮ್ಸ್‌ ಆಂಡರ್ಸನ್‌ (ಇಂಗ್ಲೆಂಡ್‌): 796 ರೇಟಿಂಗ್‌
7. ಟಿಮ್‌ ಸೌಥೀ (ನ್ಯೂಜಿಲೆಂಡ್‌): 795 ರೇಟಿಂಗ್‌
8. ಜಾಶ್‌ ಹೇಝಲ್‌ವುಡ್‌ (ಆಸ್ಟ್ರೇಲಿಯಾ): 794 ರೇಟಿಂಗ್‌
9. ನೇಯ್ಲ್‌ ವ್ಯಾಗ್ನರ್‌ (ನ್ಯೂಜಿಲೆಂಡ್‌): 775 ರೇಟಿಂಗ್‌
10. ಹಸನ್‌ ಅಲಿ (ಪಾಕಿಸ್ತಾನ): 760 ರೇಟಿಂಗ್‌

ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್
ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಆಸ್ಟ್ರೇಲಿಯಾ ತಂಡದ ಯುವ ತಾರೆ ಮಾರ್ನಸ್‌ ಲಾಬುಶೇನ್‌ ಪಡೆದಿದ್ದಾರೆ. ಆ್ಯಷನ್ ನಾಲ್ಕನೇ ಟೆಸ್ಟ್‌ನಲ್ಲಿ ಎರಡು ಶತಕ ದಾಖಲಿಸಿದ ಆಸಿಸ್‌ನ ಉಸ್ಮಾನ್ ಖವಾಜ ರ್ಯಾಂಕಿಂಗ್‌ಗೆ ಮರಳಿದ್ದು, 26ನೇ ಸ್ಥಾನಕ್ಕೆ ತಲುಪಿದ್ದಾರೆ. ಬಾಂಗ್ಲಾದೇಶ ವಿರುದ್ಧ ದ್ವಿಶತಕ ಸಿಡಿಸಿದ ಕಿವೀಸ್ ತಾತ್ಮಾಲಿಕ ನಾಯಕ ಟಾಮ್ ಲಥಾಮ್ ಎರಡು ಸ್ಥಾನ ಏರಿಕೆಗೊಂಡು 11ನೇ ಸ್ಥಾನಕ್ಕೆ ಸುಧಾರಿಸಿದ್ದಾರೆ.

Virat Kohli ಶ್ರೇಷ್ಠ ಆಟಗಾರ ಆಗಿದ್ದರೂ ಈ ವಿಚಾರದಲ್ಲಿ ಹಿಂದೆ | Oneindia Kannada

ಲಿಟನ್ ದಾಸ್ (17 ಸ್ಥಾನ ಮೇಲೇರಿ 15ನೇ ಸ್ಥಾನ) ಮತ್ತು ಡೆವೊನ್ ಕಾನ್ವೇ (18 ಸ್ಥಾನ ಮೇಲೇರಿ 29ನೇ ಸ್ಥಾನ) ಬ್ಯಾಟಿಂಗ್‌ನಲ್ಲಿ ಪ್ರಮುಖ ಪಾತ್ರವಹಿಸಿದರೆ, ಎಬಾಡೋಟ್ ಹೊಸೈನ್ (17 ಸ್ಥಾನ ಮೇಲೇರಿ 88ನೇ ಸ್ಥಾನ) ಮತ್ತು ಶೋರಿಫುಲ್ ಇಸ್ಲಾಂ (34 ಸ್ಥಾನ ಮೇಲೇರಿ 104ನೇ ಸ್ಥಾನ) ಗಳಿಸಿದರು.

Story first published: Thursday, January 13, 2022, 9:52 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X