ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Test ranking: ಸ್ಟೀವ್ ಸ್ಮಿತ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ!

ICC Test rankings: Virat Kohli reclaims top spot from Steve Smith

ಬೆಂಗಳೂರು, ಡಿಸೆಂಬರ್ 4: ಐಸಿಸಿ ಟೆಸ್ಟ್‌ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರನ್ನು ಭಾರತದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೆಳಗಿಳಿಸಿ ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ. ಹಿಂದಿನ ರ್ಯಾಂಗ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಕೊಹ್ಲಿ, ಸ್ಮಿತ್ ಗಿಂತ ಕೇವಲ 3 ಪಾಯಿಂಟ್ ಹಿಂದಿದ್ದರು.

ಮೊದಲ ಟಿ-20 ಪಂದ್ಯ: ಅತಿಥಿಗಳಿಗೆ ಕರಿಮುಗಿಲ ಸ್ವಾಗತ!ಮೊದಲ ಟಿ-20 ಪಂದ್ಯ: ಅತಿಥಿಗಳಿಗೆ ಕರಿಮುಗಿಲ ಸ್ವಾಗತ!

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್‌ನಲ್ಲಿ ಕೊಹ್ಲಿ 136 ರನ್ ಬಾರಿಸಿದ್ದರು. ಇದು ಅವರು ಅಗ್ರಸ್ಥಾನಕ್ಕೇರಲು ನೆರವು ನೀಡಿದೆ. ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಸ್ಮಿತ್ ಕೇವಲ 36 ರನ್ ಬಾರಿಸಿದ್ದರು. ಹೀಗಾಗಿ ಸ್ಮಿತ್ ನಂ.1 ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ವಿಕ್ರಂ ಲ್ಯಾಂಡರ್ ಅವಶೇಷ ಪತ್ತೆ ಹಚ್ಚಿದ ನಾಸಾಗೆ ವಿಚಿತ್ರ ಬೇಡಿಕೆಯಿಟ್ಟ ಆರ್‌ಸಿಬಿ!ವಿಕ್ರಂ ಲ್ಯಾಂಡರ್ ಅವಶೇಷ ಪತ್ತೆ ಹಚ್ಚಿದ ನಾಸಾಗೆ ವಿಚಿತ್ರ ಬೇಡಿಕೆಯಿಟ್ಟ ಆರ್‌ಸಿಬಿ!

ಕೊಹ್ಲಿಗೆ ನ್ಯೂಜಿಲೆಂಡ್ ವಿರುದ್ಧ ಇನ್ನೂ ಎರಡು ಟೆಸ್ಟ್ ಪಂದ್ಯಗಳಿವೆ. ಹೀಗಾಗಿ ಕೊಹ್ಲಿ ವರ್ಷವನ್ನು ನಂ.1 ಸ್ಥಾನದಲ್ಲೇ ಕೊನೆಗೊಳಿಸಲಿದ್ದಾರೆ. ನೂತನ ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು ಮತ್ತು ತಂಡಗಳ ಸ್ಥಾನ ಕೆಳಗಿನಂತಿವೆ.

ಟಾಪ್ 6ನಲ್ಲಿ ಮೂವರು ಭಾರತೀಯರು

ಟಾಪ್ 6ನಲ್ಲಿ ಮೂವರು ಭಾರತೀಯರು

ಹಿಂದಿನ ಟೆಸ್ಟ್‌ ಬ್ಯಾಟಿಂಗ್ ರ್ಯಾಂಕ್‌ ಪಟ್ಟಿಯಲ್ಲಿ 928 ರೇಟಿಂಗ್ ಪಾಯಿಂಟ್‌ ಹೊಂದಿದ್ದ ವಿರಾಟ್ ಕೊಹ್ಲಿ ಈ ಬಾರಿಯೂ ಅದೇ ಅಂಕ ಉಳಿಸಿಕೊಂಡಿದ್ದಾರೆ. ಆದರೆ ಹಿಂದಿನಸಾರಿ 931 ರೇಟಿಂಗ್ ಪಾಯಿಂಟ್ ಹೊಂದಿದ್ದ ಸ್ಟೀವ್ ಸ್ಮಿತ್ 923ನೇ ಪಾಯಿಂಟ್‌ಗೆ ಕುಸಿದಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (877 ಪಾಯಿಂಟ್), ಭಾರತದ ಚೇತೇಶ್ವರ್ ಪೂಜಾರ (791) ಆಸ್ಟ್ರೇಯಾದ ಡೇವಿಡ್ ವಾರ್ನರ್ (764), ಭಾರತದ ಅಜಿಂಕ್ಯ ರಹಾನೆ (759) 3ರಿಂದ 6ನೇ ಸ್ಥಾನ ಪಡೆದುಕೊಂಡಿದ್ದಾರೆ.

ಬೂಮ್ರಾಗೆ 5ನೇ ಸ್ಥಾನ

ಬೂಮ್ರಾಗೆ 5ನೇ ಸ್ಥಾನ

ಟೆಸ್ಟ್ ಬೌಲಿಂಗ್‌ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (900 ರೇಟಿಂಗ್ ಪಾಯಿಂಟ್), ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡ (839), ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ (830), ನ್ಯೂಜಿಲೆಂಡ್‌ನ ನೇಲ್ ವ್ಯಾಗ್ನರ್ (814), ಭಾರತದ ಜಸ್‌ಪ್ರೀತ್ ಬೂಮ್ರಾ (794) ಕ್ರಮವಾಗಿ ಮೊದಲ 5ರಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿ ಜಡ್ಡು

ಎರಡನೇ ಸ್ಥಾನದಲ್ಲಿ ಜಡ್ಡು

ಆಲ್ ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ (473) ನಂ.1 ಸ್ಥಾನದಲ್ಲಿದ್ದಾರೆ. ಭಾರತದ ರವೀಂದ್ರ ಜಡೇಜಾ (406), ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (381), ದಕ್ಷಿಣ ಆಫ್ರಿಕಾದ ವರ್ನಾನ್ ಫಿಲಾಂಡರ್ (315), ಭಾರತ ರವಿಚಂದ್ರನ್ ಅಶ್ವಿನ್ (308) ಅನಂತರ ಸ್ಥಾನ ಪಡೆದುಕೊಂಡಿದ್ದಾರೆ.

ಉತ್ತುಂಗದಲ್ಲಿ ಭಾರತ ತಂಡ

ಉತ್ತುಂಗದಲ್ಲಿ ಭಾರತ ತಂಡ

ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ಭಾರತ ತಂಡ ಉತ್ತುಂಗದಲ್ಲಿದೆ. ಭಾರತದ ಸಮೀಪದಲ್ಲೂ ಬೇರೆ ತಂಡಗಳಿಲ್ಲ. ಮೊದಲ ಸ್ಥಾನದಲ್ಲಿರುವ ಭಾರತ 129 ರೇಟಿಂಗ್ ಪಾಯಿಂಟ್ ಕಲೆ ಹಾಕಿದೆ. ಇನ್ನು ನ್ಯೂಜಿಲೆಂಡ್ (109), ಇಂಗ್ಲೆಂಡ್ (104), ದಕ್ಷಿಣ ಆಫ್ರಿಕಾ (102), ಆಸ್ಟ್ರೇಲಿಯಾ (102) 2ರಿಂದ 5ರೊಳಗೆ ಸ್ಥಾನ ಪಡೆದಿವೆ.

Story first published: Wednesday, December 4, 2019, 15:38 [IST]
Other articles published on Dec 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X