ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಬೀಸೋ ಚಂಡಮಾರುತಕ್ಕೆ ಎದುರಾಗಿ ನಿಂತಿದ್ದಾರೆ ಎಂಎಸ್ ಧೋನಿ!

By R Kaushik, London
ICC WC 2019: MS Dhoni: Standing up against the storm surge

ಬರ್ಮಿಂಗ್‌ಹ್ಯಾಮ್, ಜೂನ್ 29: ಮಹೇಂದ್ರ ಸಿಂಗ್ ಧೋನಿ ವಿಚಾರದಲ್ಲಿ ಏನು ನಡೆಯಲಿದೆ ಎಂಬುದನ್ನು ನಿಮ್ಮಿಂದ ಊಹಿಸಲಾಗಲ್ಲ. 2014ರ ಡಿಸೆಂಬರ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಡ್ರಾ ಮಾಡಿಕೊಂಡಿತ್ತು. ಪಂದ್ಯದ ಬಳಿಕ ಎಂಎಸ್ ಧೋನಿ ಸುದ್ದಿಗೋಷ್ಠಿ ನಡೆಸಿದ ಕೆಲ ನಿಮಿಷಗಳಲ್ಲೇ ಧೋನಿ ಟೆಸ್ಟ್‌ಗೆ ನಿವೃತ್ತಿ ಘೋಷಿಸಿರುವ ಮಾಹಿತಿ ಬಿಸಿಸಿಐನಿಂದ ಇ-ಮೇಲ್ ಮೂಲಕ ಬಂದಿತ್ತು. ಬಹುಶಃ ಇದನ್ನು ಯಾರೂ ಕೂಡ ಊಹಿಸಿರಲಾರರು. 4ನೇ ಟೆಸ್ಟ್ ಪಂದ್ಯ ಬಾಕಿಯಿದ್ದಾಗಲೇ ಧೋನಿ ಇದ್ದಿಕ್ಕಿದ್ದಂತೆ ನಿವೃತ್ತಿ ನೀಡಿ ಕ್ರಿಕೆಟ್ ಜಗತ್ತನ್ನು ದಂಗುಬಡಿಸಿದ್ದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

2017ರಲ್ಲಿ ನಿಗದಿತ ಓವರ್‌ಗಳ ಪಂದ್ಯಗಳ ನಾಯಕತ್ವಕ್ಕೂ ಧೋನಿ ರಾಜೀನಾಮೆ ನೀಡುವಾಗ ಇಂಥದ್ದೇ ನಡೆದಿತ್ತು. ಮತ್ತೆ ಬಿಸಿಸಿಐ ಮೇಲ್ ಮೂಲಕ ಈ ವಿಚಾರ ಬಹಿರಂಗಗೊಂಡಿತ್ತು. ನಿವೃತ್ತಿಗೆ ಧೋನಿ ವಿಭಿನ್ನ ವಿಧಾನ ಅನುಸರಿಸೋದು ಇದರಿಂದ ತಿಳಿದುಬರುತ್ತೆ. ಆದರೆ ಧೋನಿ ನಿವೃತ್ತಿ ನೀಡುವುದಕ್ಕೂ ಮುನ್ನ ಕೂಲ್ ಕ್ಯಾಪ್ಟನ್ ಮುಖಚಹರೆ ಇದರ ಮುನ್ಸೂಚನೆ ನೀಡುತ್ತಿರುತ್ತೆ.

ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ: ಆಸೀಸ್ ಮಾಜಿ ಕ್ರಿಕೆಟಿಗಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ: ಆಸೀಸ್ ಮಾಜಿ ಕ್ರಿಕೆಟಿಗ

ಕೊಂಚ ಇಂಥದ್ದೆ ಸಂದರ್ಭವಿದೆ ಈಗ. ಧೋನಿ ಸದ್ಯ ಶಾಂತ ಚಂಡಮಾರುತದಂತಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಧೋನಿ 28 ಎಸೆತಗಳಿಗೆ 52 ರನ್ ಬಾರಿಸಿ ವಿಕೆಟ್ ಒಪ್ಪಿಸಿದಾಗ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರೇ ಧೋನಿಯನ್ನು ಹಿಂದೆ ಜಗ್ಗಿದ್ದರು. ಧೋನಿಯಲ್ಲಿ ಸಕಾರಾತ್ಮಕ ಉದ್ದೇಶದ ಕೊರತೆಯಿದೆ ಎಂದಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ ಧೋನಿ ಕೇವಲ 8 ರನ್‌ಗೆ ಸ್ಪಂಪ್ ಔಟ್ ಆಗುವುದರಲ್ಲಿದ್ದರು. ಆದರೆ ವಿಂಡೀಸ್ ವಿಕೆಟ್ ಕೀಪರ್ ಶೈ ಹೋಪ್ ಕೈಗೆ ಬಂದಿದ್ದ ಅವಕಾಶವನ್ನು ಕೈಚೆಲ್ಲಿ ಧೋನಿಗೆ ಜೀವದಾನ ನೀಡಿದ್ದರು. ಪರಿಣಾಮ ಧೋನಿ 61 ಎಸೆತಗಳಿಗೆ 56 ರನ್ ಬಾರಿಸಿದ್ದರು. ಪಂದ್ಯವನ್ನು ಭಾರತ 125 ರನ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತು ಕೂಡ.

ಶಮಿಯ 'ಅಣಕು' ಸೆಲ್ಯೂಟ್ ಗೆ ಕಾಟ್ರೆಲ್ ವಿಶಿಷ್ಟ ರೀತಿಯಲ್ಲಿ ಪ್ರತ್ಯುತ್ತರಶಮಿಯ 'ಅಣಕು' ಸೆಲ್ಯೂಟ್ ಗೆ ಕಾಟ್ರೆಲ್ ವಿಶಿಷ್ಟ ರೀತಿಯಲ್ಲಿ ಪ್ರತ್ಯುತ್ತರ

ಧೋನಿ ತನ್ನ ಫಾರ್ಮ್ ದಿನಗಳಲ್ಲಿ ಎಲ್ಲಾ ಟೀಕೆಗಳಿಗೂ ಬ್ಯಾಟ್‌ನ ಮೂಲಕವೇ ಪ್ರತ್ಯುತ್ತರ ನೀಡುತ್ತಿದ್ದವರು. ಆಗ ಧೋನಿ ಎದ್ದು ನಿಲ್ಲಲೇಬೇಕಾದ ಪರಿಸ್ಥಿತಿ ಅವರ ಸುತ್ತಮುತ್ತಲಿನಲ್ಲಿತ್ತು. ಆದರೆ ಈಗ? ಈಗ ಧೋನಿ ಮತ್ತೆ ಹಿಂದಿನಂತೆ ಸಿಡಿದು ನಿಲ್ಲಬಲ್ಲರು ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇದ್ದಂತಿಲ್ಲ. ಮೇಲಾಗಿ ಧೋನಿ ಜೊತೆ ಆಡುತ್ತಿದ್ದ ಆಟಗಾರರೂ ಇದನ್ನೇ ಅಭಿಪ್ರಾಯವಾಗಿ ವ್ಯಕ್ತಪಡಿಸುತ್ತಿರುವುದೂ ಕಾಣುತ್ತಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಶನಿವಾರ (ಜೂನ್ 29) ಎಜ್‌ಬಾಸ್ಟನ್‌ನಲ್ಲಿ ಭಾರತ ತಂಡ ಅಭ್ಯಾಸ ನಡೆಸುತ್ತಿದ್ದಾಗಲೂ ಧೋನಿಯ ಮುಖ ಕಳೆಗುಂದಿದಂತಿತ್ತು. ಅವರ ಆ ಮುಖಚಹರೆ ಏನನ್ನೋ ಹೇಳುವಂತಿತ್ತು. ಟೀಮ್ ಇಂಡಿಯಾ ಮುಖ್ಯಕೋಚ್ ರವಿ ಶಾಸ್ತ್ರಿ ಕೂಡ ಧೋನಿ ಅವರನ್ನು ಅವರ ಪಾಡಿಗೆ ಬಿಟ್ಟು ಕೇದಾರ್ ಜಾಧವ್ ಕಡೆಗೆ ನಿಗಾವಹಿಸುತ್ತಿದ್ದುದು ಕಾಣಿಸುತ್ತಿತ್ತು.

ವಿಶ್ವಕಪ್ ಇನ್ನುಳಿದ ಪಂದ್ಯಗಳನ್ನು ಟೀಮ್ ಇಂಡಿಯಾ ಬೇಕೆಂದೇ ಸೋಲುತ್ತಾ?!ವಿಶ್ವಕಪ್ ಇನ್ನುಳಿದ ಪಂದ್ಯಗಳನ್ನು ಟೀಮ್ ಇಂಡಿಯಾ ಬೇಕೆಂದೇ ಸೋಲುತ್ತಾ?!

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಧೋನಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು ಕಂಡುಬಂತು. ಕೊಹ್ಲಿ ಅವರು ಮಾಜಿ ನಾಯಕನ್ನು ಸಮರ್ಥಿಸಿಕೊಂಡರು. 'ತಾನೇನು ಮಾಡಬೇಕನ್ನೋದು ದೋನಿ ಚೆನ್ನಾಗೇ ಗೊತ್ತು' ಎಂದು ಕೊಹ್ಲಿ ಪುನರುಚ್ಛರಿಸಿದರು.

'ಅವರು ಯಾವತ್ತಿಗೂ ಕ್ರಿಕೆಟ್‌ ಅಂಗಳದಲ್ಲಿರುತ್ತಾರೆಂದು ನಾನು ಭಾವಿಸುವುದಿಲ್ಲ, ಹೀಗಾಗಿ ನಿಖರವಾಗಿ ತಾನೇನು ಮಾಡಬೇಕೆಂದು ಅವರೇ ಹೇಳಬೇಕಾಗಿದೆ. ಡ್ರೆಸ್ಸಿಂಗ್ ರೂಮಿನಲ್ಲಿದ್ದು ಒಬ್ಬ ಆಟಗಾರನ ಬಗ್ಗೆ ನಾವೇನು ತಿಳಿದುಕೊಂಡಿದ್ದೇವೆ ಅದು ನಮಗೆ ತುಂಬಾ ಪ್ರಮುಖ ಸಂಗತಿ. ಹೀಗಾಗಿ ನಮಗೆ ಧೋನಿ ಮೇಲೆ ಸಂಪೂರ್ಣ ನಂಬಿಕೆಯಿದೆ. ಅವರು ತಂಡದ ಪರವಾಗಿ ಸಾಕಷ್ಟು ಬಾರಿ ನಿಂತಿದ್ದಾರೆ. ಮುಖ್ಯವಾಗಿ ನೀವು ಕ್ಯಾಲೆಂಡರ್ ಇಯರ್ ಗಮನಿಸಿದರೆ ಅಲ್ಲಿ ಧೋನಿ ಅನೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಕಾಣಿಸುತ್ತೆ. ಆದರೆ ಅವೆಲ್ಲವನ್ನೂ ಬಿಟ್ಟು ಕೇವಲ ಒಂದೆರಡು ಪ್ರದರ್ಶನವನ್ನೇ ಎತ್ತಿ ಟೀಕಿಸುವುದು ಸರಿಯಲ್ಲ' ಎಂದು ಕೊಹ್ಲಿ ಹೇಳಿದರು.

ಭಾರತದ ವಿರುದ್ಧ ಗೆಲ್ಲಲೇಬೇಕಿರುವ ಸಂದಿಗ್ಧದಲ್ಲಿ ಇಂಗ್ಲೆಂಡ್ಭಾರತದ ವಿರುದ್ಧ ಗೆಲ್ಲಲೇಬೇಕಿರುವ ಸಂದಿಗ್ಧದಲ್ಲಿ ಇಂಗ್ಲೆಂಡ್

(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್‌ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ಮೈಖೇಲ್‌ಗಾಗಿ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)

Story first published: Sunday, June 30, 2019, 0:31 [IST]
Other articles published on Jun 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X