ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಮತ್ತು ಕೊಹ್ಲಿಗಿಂತ ಭಾರತದ ಈ ಆಟಗಾರನೆಂದರೆ ಡೇಲ್ ಸ್ಟೇನ್‌ಗೆ ಭಯ!

In this generation KL Rahul would have created a problem for me says Dale Steyn

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ತಲುಪುವುದರಲ್ಲಿ ವಿಫಲವಾಗಿ ಸೂಪರ್ 12 ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ. ಹೌದು, ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೆಮಿಫೈನಲ್ ಹಾಗೂ ಫೈನಲ್ ಪ್ರವೇಶಿಸಲಿದೆ ಎಂಬ ಲೆಕ್ಕಾಚಾರಗಳನ್ನು ಹಾಕಲಾಗುತ್ತಿತ್ತು. ಟ್ರೋಫಿ ಗೆಲ್ಲಬಹುದಾದ ಬಲಿಷ್ಠ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ ಟೂರ್ನಿ ಆರಂಭಕ್ಕೂ ಮುನ್ನ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಗಳಲ್ಲಿಯೂ ಕೂಡ ಅಬ್ಬರಿಸಿ ಗೆಲುವನ್ನು ಸಾಧಿಸಿತ್ತು. ಹೀಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳ ವಿರುದ್ಧ ನಡೆದ ಅಭ್ಯಾಸ ಪಂದ್ಯಗಳಲ್ಲಿ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಮತ್ತು ಇಶಾನ್ ಕಿಶಾನ್ ಅಬ್ಬರಿಸಿದ್ದರು.

ಯಾರೇ ಬಂದರೂ ವಿರಾಟ್ ಕೊಹ್ಲಿ ಸ್ಥಾನ ತುಂಬಲಾಗುವುದಿಲ್ಲ: ವಿರೇಂದ್ರ ಸೆಹ್ವಾಗ್ಯಾರೇ ಬಂದರೂ ವಿರಾಟ್ ಕೊಹ್ಲಿ ಸ್ಥಾನ ತುಂಬಲಾಗುವುದಿಲ್ಲ: ವಿರೇಂದ್ರ ಸೆಹ್ವಾಗ್

ಹೀಗಾಗಿಯೇ ಅಭ್ಯಾಸ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿಯನ್ನು ಗೆಲ್ಲಲಿದೆ ಎನ್ನುವ ನಿರೀಕ್ಷೆಗಳು ಹೆಚ್ಚಾಗಿದ್ದವು. ಅಭ್ಯಾಸ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಟೂರ್ನಿಯಲ್ಲಿ ತೋರುವಲ್ಲಿ ವಿಫಲವಾದ ಟೀಂ ಇಂಡಿಯಾ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ನಡೆದ ಪಂದ್ಯಗಳಲ್ಲಿ ಹೀನಾಯವಾಗಿ ಸೋತಿತು. ನಂತರ ನಡೆದ ಆಫ್ಘಾನಿಸ್ತಾನ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧದ ಪಂದ್ಯಗಳಲ್ಲಿ ಭರ್ಜರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲು ಬೇಕಾದ ಅಂಕಗಳಿಲ್ಲದೇ ಇರುವ ಕಾರಣದಿಂದ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.

ಟೂರ್ನಿಯಲ್ಲಿ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಉತ್ತಮ ಆರಂಭವನ್ನು ಕಟ್ಟಿ ಕೊಡುವಲ್ಲಿ ವಿಫಲರಾಗಿದ್ದೂ ಕೂಡ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸದೇ ಟೂರ್ನಿಯಿಂದ ಹೊರಬಿದ್ದದ್ದರ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಬಹುದು. ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಭರ್ಜರಿ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿರುವ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕುರಿತಾಗಿ ಇದೀಗ ಡೇಲ್ ಸ್ಟೇನ್ ಟ್ವೀಟ್ ಮಾಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಹೊಸ ಕೋಚ್ ಘೋಷಣೆಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಹೊಸ ಕೋಚ್ ಘೋಷಣೆ

ಇಂದು ( ನವೆಂಬರ್‌ 9 ) ಡೇಲ್ ಸ್ಟೇನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ "ಯಾರಾದರೂ ಪ್ರಶ್ನೆಯನ್ನು ಕೇಳುವವರಿದ್ದರೆ ಕೇಳಿ ನಾನು ಬಿಡುವು ಮಾಡಿಕೊಂಡಿದ್ದೇನೆ ಮಾತನಾಡೋಣ" ಎಂಬ ಟ್ವೀಟ್ ಮಾಡಿದ್ದರು. ಡೇಲ್ ಸ್ಟೇನ್ ಈ ರೀತಿಯ ಟ್ವೀಟ್ ಮಾಡಿದ್ದೇ ತಡ ಕ್ರಿಕೆಟ್ ಅಭಿಮಾನಿಗಳು ಸಾಲು ಸಾಲು ಪ್ರಶ್ನೆಗಳನ್ನು ಡೇಲ್ ಸ್ಟೈನ್ ಅವರಿಗೆ ಕೇಳಲು ಆರಂಭಿಸಿದರು. ಹೀಗೆ ವಿಶ್ವದ ಮೂಲೆಮೂಲೆಗಳಿಂದ ಕೇಳಿ ಬಂದ ಅಭಿಮಾನಿಗಳ ಪ್ರಶ್ನೆಗಳಿಗೆ ಡೇಲ್ ಸ್ಟೇನ್ ಒಂದೊಂದಾಗಿ ಉತ್ತರಗಳನ್ನು ನೀಡಿದ್ದಾರೆ.

ಹೀಗೆ ಭಾರತ ಮೂಲದ ಕ್ರಿಕೆಟ್ ಅಭಿಮಾನಿ ಜಯಂತ್ ಕುಮಾರ್ ನಾಥ್ ಎಂಬುವವರು ಡೇಲ್ ಸ್ಟೇನ್ ಅವರಿಗೆ "ಈಗಿನ ತಲೆಮಾರಿನಲ್ಲಿ ಯಾವ ಕ್ರಿಕೆಟಿಗ ನಿಮ್ಮ ಬೌಲಿಂಗ್‌ಗೆ ತೊಂದರೆಯನ್ನುಂಟು ಮಾಡಬಹುದು ಎಂದೆನಿಸುತ್ತದೆ?" ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಜಯಂತ್ ಕುಮಾರ್ ನಾಥ್ ಅವರ ಈ ಪ್ರಶ್ನೆಗೆ ಮರುಟ್ವೀಟ್ ಮಾಡಿದ ಡೇಲ್ ಸ್ಟೇನ್ ಕೆಎಲ್ ರಾಹುಲ್ ಎಂಬ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಈಗಿನ ತಲೆಮಾರಿನಲ್ಲಿ ಕೆಎಲ್ ರಾಹುಲ್ ಅವರಿಗೆ ಬೌಲಿಂಗ್ ಮಾಡುವುದು ತೀರಾ ಕಷ್ಟ ಎಂಬುದನ್ನು ಡೇಲ್ ಸ್ಟೇನ್ ವ್ಯಕ್ತಪಡಿಸಿದ್ದಾರೆ.

ಹೀಗೆ ಡೇಲ್ ಸ್ಟೈನ್ ಅವರಿಗೆ ಹಲವಾರು ಪ್ರಶ್ನೆಗಳನ್ನು ಕ್ರಿಕೆಟ್ ಅಭಿಮಾನಿಗಳು ಕೇಳಿದ್ದು ಮತ್ತೋರ್ವ ಕ್ರಿಕೆಟ್ ಅಭಿಮಾನಿ ನೀವು ನಿಮ್ಮ ಕ್ರಿಕೆಟ್ ಜೀವನದಲ್ಲಿ ಆಡಿರುವ ಮರೆಯಲಾಗದಂತಹ ಟೆಸ್ಟ್ ಸರಣಿ ಯಾವುದು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಡೇಲ್ ಸ್ಟೇನ್ "ಆಸ್ಟ್ರೇಲಿಯಾದಲ್ಲಿ ಗೆದ್ದ ಸರಣಿ ಹಾಗೂ ನಾವು ಆಸ್ಟ್ರೇಲಿಯಾದಲ್ಲಿ ಇದುವರೆಗೂ ಸೋತಿಲ್ಲ" ಎಂದು ಉತ್ತರವನ್ನು ನೀಡಿದರು.

Story first published: Tuesday, November 9, 2021, 18:46 [IST]
Other articles published on Nov 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X