ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: ವಿರಾಟ್ ಕೊಹ್ಲಿ ಬೆರಳಲ್ಲಿ ರಕ್ತ ಬರಿಸಿದ ಸ್ಟಾರ್ಕ್

Ind vs Aus 1st Test: Mitchell Starc’s bouncer leaves Virat Kohli’s thumb bleeding

ಅಡಿಲೇಡ್: ಕ್ರಿಕೆಟ್‌ನಲ್ಲಿ ಬದ್ಧ ಎದುರಾಳಿ ತಂಡಗಳೆನಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕುತೂಹಲಕಾರಿ ಟೆಸ್ಟ್ ಸರಣಿ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಎರಡೂ ತಂಡಗಳ ಜಿದ್ದಾಜಿದ್ದಿ ಕದನಕ್ಕೆ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಕಾರಣರಾಗಿದ್ದಾರೆ. ಅಡಿಲೇಡ್‌ನ ಓವಲ್‌ನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ನಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಬೌನ್ಸರ್‌ಗೆ ವಿರಾಟ್ ಕೊಹ್ಲಿ ಬೆರಳಲ್ಲಿ ರಕ್ತ ಸುರಿಸಿದೆ.

 ಭಾರತದ ಆರಂಭಿಕರ ವೈಫಲ್ಯವನ್ನು ಕಟುವಾಗಿ ಟೀಕಿಸಿದ ಸುನಿಲ್ ಗವಾಸ್ಕರ್ ಭಾರತದ ಆರಂಭಿಕರ ವೈಫಲ್ಯವನ್ನು ಕಟುವಾಗಿ ಟೀಕಿಸಿದ ಸುನಿಲ್ ಗವಾಸ್ಕರ್

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತದ ಪರ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ವಿರಾಟ್ ಕೊಹ್ಲಿ ಬೆರಳಿಗೆ ಗಾಯವಾಗಿದೆ. ರಕ್ತ ಸುರಿದಿದ್ದು ಕಂಡು ಬಂದಿದೆ. 43ನೇ ಓವರ್‌ನಲ್ಲಿ ಕೊಹ್ಲಿ ಹೆಬ್ಬೆರಳಿಗೆ ಗಾಯವಾಗಿತ್ತು.

ಅದೃಷ್ಟ ಕರೆಯುತ್ತಿದೆ ಬನ್ನಿ, ಕೋಟ್ಯಾಧಿಪತಿಯಾಗಲು ಇಲ್ಲಿದೆ ಅವಕಾಶ!ಅದೃಷ್ಟ ಕರೆಯುತ್ತಿದೆ ಬನ್ನಿ, ಕೋಟ್ಯಾಧಿಪತಿಯಾಗಲು ಇಲ್ಲಿದೆ ಅವಕಾಶ!

ಹೆಬ್ಬೆರಳಿನಲ್ಲಿ ರಕ್ತ ಬರುತ್ತಿದ್ದ ಕೊಹ್ಲಿಗೆ ಚಿಕಿತ್ಸೆ ನೀಡಲಾಯಿತು. ಆ ಬಳಿಕ ಕೊಹ್ಲಿ ಮತ್ತೆ ಬ್ಯಾಟಿಂಗ್‌ ಮುಂದುವರೆಸಿದರು. ಅರ್ಧ ಶತಕ ಬಾರಿಸಿದರು.

ಬ್ಯಾಟಿಂಗ್‌ಗೆ ಪರದಾಡಿದ ಕೊಹ್ಲಿ

ಬ್ಯಾಟಿಂಗ್‌ಗೆ ಪರದಾಡಿದ ಕೊಹ್ಲಿ

43ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್‌ ಎಸೆದ ಶಾರ್ಟ್ ಬಾಲ್‌ ಕೊಹ್ಲಿಯ ಬಲಗೈ ಹೆಬ್ಬೆರಳಿಗೆ ಬಡಿಯಿತು. ಹೀಗಾಗಿ ಹೆಬ್ಬೆರಳಿಗೆ ಗಾಯವಾಗಿ ರಕ್ತ ಸುರಿಯಿತು. ಆ ಬಳಿಕ ಕೊಹ್ಲಿ ಕೈಗೆ ಚಿಕಿತ್ಸೆ ನೀಡಲಾಯಿತು. ಕೊಹ್ಲಿ ಬ್ಯಾಟಿಂಗ್‌ ಮುಂದುವರೆಸಿದರಾದರೂ ಅವರಿಗೆ ಸರಿಯಾಗಿ ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಕಷ್ಟಪಡುತ್ತಿದ್ದುದು ಕಂಡುಬಂತು.

ಅರ್ಧ ಶತಕ ಬಾರಿಸಿದ ಕೊಹ್ಲಿ

ಅರ್ಧ ಶತಕ ಬಾರಿಸಿದ ಕೊಹ್ಲಿ

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಕೈಗೆ ಗಾಯ ಮಾಡಿಕೊಂಡರೂ ಕೂಡ ಕೊಹ್ಲಿ ಅರ್ಧ ಶತಕ ಬಾರಿಸಿ ಗಮನ ಸೆಳೆದಿದ್ದಾರೆ. 180 ಎಸೆತಗಳಲ್ಲಿ 74 ರನ್ ಬಾರಿಸಿದ ಕೊಹ್ಲಿ, 77ನೇ ಓವರ್‌ನಲ್ಲಿ ನೇಥನ್ ಲಿಯಾನ್ ಎಸೆದ ವೇಳೆ ರನ್‌ ಔಟ್ ಆಗಿ ನಿರ್ಗಮಿಸಿದರು. ಅಜಿಂಕ್ಯಾ ರಹಾನೆ ನೀಡಿದ ತಪ್ಪು ಕರೆಯಿಂದಾಗಿ ಕೊಹ್ಲಿ ವಿಕೆಟ್ ಒಪ್ಪಿಸಬೇಕಾಯ್ತು.

ಮೊದಲ ದಿನದ ಸಂಕ್ಷಿಪ್ತ ಸ್ಕೋರ್‌

ಮೊದಲ ದಿನದ ಸಂಕ್ಷಿಪ್ತ ಸ್ಕೋರ್‌

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತದಿಂದ ಪೃಥ್ವಿ ಶಾ 0, ಮಯಾಂಕ್ ಅಗರ್ವಾಲ್ 17, ಚೇತೇಶ್ವರ್ ಪೂಜಾರ 43, ವಿರಾಟ್ ಕೊಹ್ಲಿ 74, ಅಜಿಂಕ್ಯ ರಹಾನೆ 42, ಹನುಮ ವಿಹಾರಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಗುರುವಾರ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 89 ಓವರ್‌ಗೆ 6 ವಿಕೆಟ್ ಕಳೆದು 233 ರನ್ ಗಳಿಸಿತ್ತು. ವೃದ್ಧಿಮಾನ್ ಸಾಹ (9 ರನ್), ಆರ್‌ ಅಶ್ವಿನ್ (17) ಕ್ರೀಸ್‌ನಲ್ಲಿದ್ದರು.

Story first published: Thursday, December 17, 2020, 17:50 [IST]
Other articles published on Dec 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X