ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ಒಂದು ಸ್ಥಾನಕ್ಕೆ ಮುಂದುವರಿದ ಭಾರೀ ಚರ್ಚೆ: ಮತ್ತೆ ಅಡಕತ್ತರಿಯಲ್ಲಿ ಸಿಲುಕಿಕೊಂಡ ಕನ್ನಡಿಗ!

IND vs AUS: MSK Prasad backs Shubman Gill for opening slot said KL can bat No. 5

ಭಾರತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಿದ್ಧವಾಗುತ್ತಿದ್ದಿದೆ. ಆದರೆ ಭಾರತದ ಒಂದು ಕ್ರಮಾಂಕದ ಬಗೆಗಿನ ಗೊಂದಲ ಇನ್ನೂ ಬಗೆಹರಿದಿಲ್ಲ. ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಂದ ಕಾಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಆರಂಭಿಕ ಆಟಗಾರನನ್ನಾಗಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ರೋಹಿತ್ ಶರ್ಮಾ ಜೊತೆಗೆ ಆರಂಭಿಕನಾಗಿ ಯಾರು ಕಣಕ್ಕಿಳಿಯಬೇಕು ಎಂಬ ಬಗ್ಗೆ ಇಬ್ಬರು ಆಟಗಾರರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಟೀಮ್ ಇಂಡಿಯಾದ ಉಪನಾಯಕ ಕೆಎಲ್ ರಾಹುಲ್ ರೋಹಿತ್ ಶರ್ಮಾ ಜೊತೆಗೆ ಈವರೆಗೆ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದು ಈ ಜೋಡಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿಯೂ ಯಶಸ್ವಿಯಾಗಿತ್ತು. ಆದರೆ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಶುಬ್ಮನ್ ಗಿಲ್ ಟೆಸ್ಟ್‌ನಲ್ಲಿಯೂ ಆರಂಭಿಕನಾಗಿ ಕಣಕ್ಕಿಳಿಯಲು ಸಾಕಷ್ಟು ಒತ್ತಡಗಳು ಬರುತ್ತಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ ಕೂಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್‌ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾInd Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್‌ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ

ಗಿಲ್ ಬೆಂಬಲಕ್ಕೆ ಎಂಎಸ್‌ಕೆ ಪ್ರಸಾದ್

ಗಿಲ್ ಬೆಂಬಲಕ್ಕೆ ಎಂಎಸ್‌ಕೆ ಪ್ರಸಾದ್

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಆಯ್ಕೆ ಮಂಡಳಿಯ ಮಾಜಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಆರಂಭಿಕ ಸ್ಥಾನಕ್ಕೆ ಯುವ ಆಟಗಾರ ಶುಬ್ಮನ್ ಗಿಲ್ ಬೆಂಬಲಕ್ಕೆ ನಿಂತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಶುಬ್ಮನ್ ಗಿಲ್ ಭಾರತ ತಂಡದ ಆರಂಭಿಕನಾಗಿ ಕಣಕ್ಕಿಳಿಯಲಿ ಎಂದಿದ್ದಾರೆ ಎಂಎಸ್‌ಕೆ ಪ್ರಸಾದ್.

ಬಾಂಗ್ಲಾ ಸರಣಿಯಲ್ಲಿ ಆರಂಭಿಕನಾಗಿ ಮಿಂಚಿದ್ದ ಗಿಲ್

ಬಾಂಗ್ಲಾ ಸರಣಿಯಲ್ಲಿ ಆರಂಭಿಕನಾಗಿ ಮಿಂಚಿದ್ದ ಗಿಲ್

ಕಳೆದ ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ ಟೆಸ್ಟ್ ಸರಣಿಯನ್ನು ಆಡಿದ್ದಾರೆ ಟೀಮ್ ಇಂಡಿಯಾ ಪರವಾಗಿ ಶುಬ್ಮನ್ ಗಿಲ್ ಕೆಎಲ್ ರಾಹುಲ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದು ಯಶಸ್ಸು ಸಾಧಿಸಿದ್ದರು. ಖಾಯಂ ನಾಯಕ ರೋಹಿತ್ ಶರ್ಮಾ ಅಲಭ್ಯತೆಯ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಜೊತೆಗೆ ಶುಬ್ಮನ್ ಗಿಲ್ ಆರಂಬಿಕನಾಗಿ ಕಣಕ್ಕಿಳಿದಿದ್ದರು. ಈ ಸರಣಿಯ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ ಭರ್ಜರಿ ಶತಕ ಸಿಡಿಸುವ ಮೂಲಕ ಟೆಸ್ಟ್ ಮಾದರಿಯಲ್ಲಿ ಶತಕದ ಖಾತೆ ತೆರೆದಿದ್ದರು. ಈ ಸರಣಿಯಲ್ಲಿ ಗಿಲ್ ಶತಕದ ಸಹಿತ 157 ರನ್‌ಗಳನ್ನು ಗಳಿಸಿದ್ದರೆ ರಾಹುಲ್ ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು ಗಳಿಸಿದ್ದು 57 ರನ್ ಮಾತ್ರ.

ರಾಹುಲ್ 5ನೇ ಕ್ರಮಾಂಕದಲ್ಲಿ ಆಡಲಿ ಎಂದ ಎಂಎಸ್‌ಕೆ ಪ್ರಸಾದ್

ರಾಹುಲ್ 5ನೇ ಕ್ರಮಾಂಕದಲ್ಲಿ ಆಡಲಿ ಎಂದ ಎಂಎಸ್‌ಕೆ ಪ್ರಸಾದ್

ಟೀಮ್ ಇಂಡಿಯಾದ ಆಡುವ ಕ್ರಮಾಂಕದ ಬಗ್ಗೆ ಮಾತನಾಡಿದ ಎಂಎಸ್‌ಕೆ ಪ್ರಸಾದ್ ಉಪ ನಾಯಕ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಆಡಲಿ ಎಂದಿದ್ದಾರೆ. "ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಐದನೇ ಕ್ರಮಾಂಕದಲ್ಲಿ ಆಡುವುದನ್ನು ನೋಡಲು ನಾನು ಬಯಸುತ್ತೇನೆ. ನನ್ನ ಪ್ರಕಾರ ಶುಬ್ಮನ್ ಗಿಲ್ ಆರಂಬಿಕ ಸ್ಥಾನ ಬಿಟ್ಟು ಕೆಳ ಕ್ರಮಾಂಕದಲ್ಲಿ ಬರುವುದು ಬೇಡ. ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿದ್ದು ಆತ ಕೆಳ ಕ್ರಮಾಂಕದಲ್ಲಿ ಆಡಬಾರದು ಎಂಬುದನ್ನು ನನ್ನಲ್ಲಿ ಯಾವುದೇ ಕಾರಣಗಳು ಇಲ್ಲ" ಎಂದಿದ್ದಾರೆ ಎಂಎಸ್‌ಕೆ ಪ್ರಸಾದ್.

ರಾಹುಲ್ ಆಡುವ ಕ್ರಮಾಂಕದಲ್ಲಿ ಅಸ್ಥಿರತೆ

ರಾಹುಲ್ ಆಡುವ ಕ್ರಮಾಂಕದಲ್ಲಿ ಅಸ್ಥಿರತೆ

ಟೀಮ್ ಇಂಡಿಯಾದಲ್ಲಿ ಕೆಎಲ್ ರಾಹುಲ್ ಆಡುವ ಕ್ರಮಾಂಕದಲ್ಲಿ ಅಸ್ಥಿರತೆ ಮತ್ತೆ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿದೆ. ಈ ಹಿಂದಿನಿಂದಲೂ ತಂಡದ ಅಗತ್ಯಕ್ಕೆ ತಕ್ಕಂತೆ ಭಿನ್ನ ಕ್ರಮಾಂಕಗಳಲ್ಲಿ ಆಡಿರುವ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ತನ್ನ ಆರಂಭಿಕ ಸ್ಥಾನವನ್ನು ಇನ್ನೊಬ್ಬ ಆಟಗಾರನಿಗೆ ಬಿಟ್ಟುಕೊಡಬೇಕಾದ ಸಾಧ್ಯತೆಗಳು ಕಾಣಿಸುತ್ತಿದೆ. ಮತ್ತೊಂದೆಡೆ ಶುಬ್ಮನ್ ಗಿಲ್ ಅದ್ಭುತ ಫಾರ್ಮ್‌ನಲ್ಲಿದ್ದು ಅಬ್ಬರಿಸುತ್ತಿದ್ದಾರೆ. 2023ರಲ್ಲಿ ಶುಬ್ಮನ್ ಗಿಲ್ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿದ್ದು ಇದರಲ್ಲಿ ಒಂದು ದ್ವಿಶತಕ ಹಾಗೂ ಒಂದು ಟಿ20 ಶತಕ ಕೂಡ ಸೇರಿಕೊಂಡಿದೆ.

Story first published: Sunday, February 5, 2023, 8:58 [IST]
Other articles published on Feb 5, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X