ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Eng 5th Test: ಟೀಂ ಇಂಡಿಯಾಗೆ ಹೀನಾಯ ಸೋಲು, ಸರಣಿ ಸಮಬಲ ಸಾಧಿಸಿದ ಇಂಗ್ಲೆಂಡ್‌

England Win

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದ್ದು, ಇಂಗ್ಲೆಂಡ್ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತ ನೀಡಿದ್ದ 378ರನ್‌ಗಳನ್ನು ಯಶಸ್ವಿಯಾಗಿ ಬೆನ್ನತ್ತಿದ ಆಂಗ್ಲರು ಅಂತಿಮ ಪಂದ್ಯ ಗೆದ್ದು 2-2ರಿಂದ ಸರಣಿ ಸಮಬಲ ಸಾಧಿಸಿದ್ದಾರೆ.

ನಾಲ್ಕನೇ ವಿಕೆಟ್‌ಗೆ 250ರನ್‌ಗಳ ಜೊತೆಯಾಟವಾಡಿದ ಜೋ ರೂಟ್ ಹಾಗೂ ಜಾನಿ ಬೈಸ್ಟ್ರೋವ್ ಮುರಿಯದ ಜೊತೆಯಾಟವಾಡಿ ತಂಡಕ್ಕೆ ಅಮೋಘ ಗೆಲುವನ್ನು ತಂದುಕೊಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ಟಾರ್ಗೆಟ್‌ ಅನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಬೆನ್ನತ್ತಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿ ತಂಡವನ್ನು ಸರಣಿ ಸೋಲಿನಿಂದ ಮುಕ್ತಗೊಳಿಸಿದ್ದಾರೆ.

377 ರನ್ ಲೀಡ್ ಪಡೆದಿದ್ದ ಭಾರತ

377 ರನ್ ಲೀಡ್ ಪಡೆದಿದ್ದ ಭಾರತ

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 132ರನ್‌ಗಳ ಉತ್ತಮ ಲೀಡ್ ಪಡೆದ ಪರಿಣಾಮ ಎದುರಾಳಿ ತಂಡಕ್ಕೆ 350ಕ್ಕೂ ಹೆಚ್ಚು ರನ್‌ಗಳ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಪೂಜಾರ 66, ರಿಷಭ್ ಪಂತ್ 57 ಹಾಗೂ ರವೀಂದ್ರ ಜಡೇಜಾ 23ರನ್ ಗಳಿಸಿದ್ದು ಬಿಟ್ಟರೆ ಬೇರೆ ಎಲ್ಲಾ ಬ್ಯಾಟರ್‌ಗಳು ನೆಲಕಚ್ಚಿದರು. ಪರಿಣಾಮ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 245ರನ್‌ಗಳಿಗೆ ಸರ್ವಪತನಗೊಂಡಿದೆ.

ಪರಿಣಾಮ ಮೊದಲ ಇನ್ನಿಂಗ್ಸ್‌ ಲೀಡ್ ಸೇರಿದಂತೆ ಒಟ್ಟಾರೆ 377ರನ್‌ಗಳ ಟೀಂ ಇಂಡಿಯಾ ಸ್ಕೋರ್ ನಿಜಕ್ಕೂ ಸವಾಲಾಗಿ ಪರಿಣಮಿಸಿತ್ತು. ಏಕೆಂದರೆ ಇಂಗ್ಲೆಂಡ್ ಇಷ್ಟು ದೊಡ್ಡ ಮೊತ್ತವನ್ನ ಬೆನ್ನತ್ತಿರಲಿಲ್ಲ.

ಜೋ ರೂಟ್ ಶತಕ: ಕೊಹ್ಲಿ, ಸ್ಮಿತ್, ವಿಲಿಯಮ್ಸನ್‌ ಅನ್ನು ಹಿಂದಿಕ್ಕಿದ ಇಂಗ್ಲೆಂಡ್ ಬ್ಯಾಟರ್

ಜೋ ರೂಟ್, ಜಾನಿ ಬೈಸ್ಟ್ರೋವ್ ಶತಕದ ಅಬ್ಬರ

ಜೋ ರೂಟ್, ಜಾನಿ ಬೈಸ್ಟ್ರೋವ್ ಶತಕದ ಅಬ್ಬರ

ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ದಾಖಲಿಸಿದ್ದ ಜಾನಿ ಬೈಸ್ಟ್ರೋವ್ ಮತ್ತು ವಿಶ್ವದ ನಂಬರ್ ಒನ್ ಬ್ಯಾಟರ್ ಜೋ ರೂಟ್‌ ಭಾರತ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ರು. ಜೋ ರೂಟ್‌ ಟೆಸ್ಟ್ ಕ್ರಿಕೆಟ್‌ನಲ್ಲಿ 28 ನೇ ಶತಕ ದಾಖಲಿಸಿದ್ರೆ, ಜಾನಿ ಬೈಸ್ಟ್ರೋವ್ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕವನ್ನ ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ.

ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ಗೆಲುವಿಗೆ 119ರನ್‌ಗಳಷ್ಟೇ ಬಾಕಿ ಉಳಿದಿತ್ತು ಮತ್ತು ಏಳು ವಿಕೆಟ್‌ಗಳು ಕೈನಲ್ಲಿದ್ದವು. ಅಜೇಯ 72 ರನ್‌ಗಳೊಂದಿಗೆ ಅಂತಿಮ ದಿನದಾಟವಾಡಿದ ಬೈಸ್ಟ್ರೋವ್ 145 ಎಸೆತಗಳಲ್ಲಿ ಅಜೇಯ 114 ರನ್‌ ಕಲೆಹಾಕಿದ್ರೆ, ಜೋ ರೂಟ್ 173 ಎಸೆತಗಳಲ್ಲಿ ಅಜೇಯ 142ರನ್ ಸಿಡಿಸಿದರು. ಪರಿಣಾಮ ಇಂಗ್ಲೆಂಡ್ ಕೊನೆಯ ದಿನದ ಮೊದಲ ಸೆಷನ್‌ನಲ್ಲೇ ಗುರಿ ಮುಟ್ಟಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು.

Ind vs Eng: ಮತ್ತೊಂದು ಶತಕ ಸಿಡಿಸಿದ ಬೈರ್‌ಸ್ಟೋವ್: ಭಾರತದ ಕನಸು ಭಗ್ನ

ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್‌ಗೆ ದಾಖಲೆಯ ಗೆಲುವು

ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್‌ಗೆ ದಾಖಲೆಯ ಗೆಲುವು

ಪುರುಷರ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್ ದಾಖಲೆ ಗೆಲುವು ಸಾಧಿಸಿದೆ. ಇದುವರೆಗೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಅಂದ್ರೆ 359ರನ್‌ಗಳ ಚೇಸ್ ಮಾಡಿತ್ತು. 2019ರಲ್ಲಿ ಲೀಡ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 359ರನ್‌ಗಳ ಗುರಿ ಬೆನ್ನತ್ತಿ ಜಯ ಸಾಧಿಸಿತು. ಇಷ್ಟು ದೊಡ್ಡ ಮೊತ್ತವನ್ನ ಇಂಗ್ಲೆಂಡ್ ಬೆನ್ನಟ್ಟಿದ್ದ ಉದಾಹರಣೆಯೇ ಇರಲಿಲ್ಲ. ಆದ್ರೀಗ ಇಂಗ್ಲೆಂಡ್ 378ರನ್ ಅನ್ನು ಅತ್ಯಂತ ಸುಲಭವಾಗಿ ಬೆನ್ನತ್ತಿ ದಾಖಲೆಯ ಗೆಲುವು ಪಡೆದಿದೆ. ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದ ಭಾರತಕ್ಕೆ ಸೋಲಿನ ರುಚಿ ತೋರಿಸಿದ್ದು, ಸರಣಿಯಲ್ಲಿ ಸಮಬಲ ಸಾಧಿಸಿದೆ.

ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ರನ್‌ಗಳನ್ನು ಚೇಸ್ ಮಾಡಿದ ತಂಡವಾಗಿ ಇಂಗ್ಲೆಂಡ್ ಹೊರಹೊಮ್ಮಿದ್ದು, ನ್ಯೂಜಿಲೆಂಡ್ ವಿರುದ್ಧ 3-0ಯಿಂದ ಸರಣಿ ಗೆದ್ದ ಬಳಿಕ ಭಾರತ ವಿರುದ್ಧವೂ ತನ್ನ ಗೆಲುವಿನ ಓಟ ಮುಂದುವರಿಸಿದೆ.

Story first published: Wednesday, July 6, 2022, 10:22 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X