ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾಗೆ ಜಾನಿ ಬೈರ್‌ಸ್ಟೋವ್ ಎಚ್ಚರಿಕೆಯ ಸಂದೇಶ

Ind vs Eng: England come again with fire in the belly: Bairstow on 4th day play

ಲಂಡನ್, ಆಗಸ್ಟ್ 15: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಈಗ ರೋಚಕ ಘಟ್ಟವನ್ನು ತಲುಪಿದೆ. ಈ ಪಂದ್ಯದಲ್ಲಿ ಮೂರು ದಿನಗಳ ಆಟ ಈಗ ಅಂತ್ಯವಾಗಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಅಲ್ಪ ಮುನ್ನಡೆಯನ್ನು ಪಡೆದುಕೊಂಡಿದೆ. ನಾಲ್ಕನೇ ದಿನದಲ್ಲಿ ಭಾರತ ತನ್ನ ಇನ್ನಿಂಗ್ಸ್ ಆರಂಭಿಸಲಿದೆ. ಅಂತಿಮ ಎರಡು ದಿನಗಳ ಆಟ ಎರಡು ತಂಡಗಳಿಗೂ ಕೂಡ ನಿರ್ಣಾಯಕವಾಗಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸುವ ಉತ್ಸಾಹವನ್ನು ಹೊರಹಾಕಿದ್ದಾರೆ. ಮಾತ್ರವಲ್ಲದೆ ಭಾರತ ತಂಡಕ್ಕೆ ಕಠಿಣ ಸಂದೇಶವೊಂದನ್ನು ಕೂಡ ರವಾನಿಸಿದ್ದಾರೆ.

ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಅದ್ಭುತವಾಗಿ ತಿರುಗಿ ಬೀಳುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ ತಂಡದ ಪರವಾಗಿ ನಾಯಕ ಜೋ ರೂಟ್ ಅಜೇಯ 180 ರನ್ ಸಿಡಿಸುವ ಮೂಲಕ ತಂಡಕ್ಕೆ ಮೇಲುಗೈ ದೊರೆಯಲು ಕಾರಣರಾದರು. ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಜೋ ರೂಟ್ 11ನೇ ಬಾರಿಗೆ 150ಕ್ಕೂ ಹೆಚ್ಚಿನ ರನ್ ಗಳಿಸಿದರು. ಅಲ್ಲದೆ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 9000 ರನ್‌ಗಳ ಮೈಲಿಗಲ್ಲು ದಾಟಿದರು. ಜೋ ರೂಟ್ ಅವರ ಈ ಸಾಧನೆಗೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರು; ಆ ಸ್ಟಾರ್ ಆಟಗಾರರು ಹೊರಕ್ಕೆ?!ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರು; ಆ ಸ್ಟಾರ್ ಆಟಗಾರರು ಹೊರಕ್ಕೆ?!

"9000 ರನ್‌ಗಳ ಸಾಧನೆಯೆಂದರೆ ಅದು ಸಾಮಾನ್ಯವಲ್ಲ. ಅದೊಂದು ವಿಶೇಷವಾದ ಸಾಧನೆಯಾಗಿದೆ. ಕ್ರಿಕೆಟ್‌ನ ತವರು ಅಂಗಳದಲ್ಲಿ ಅಜೇಯ 180 ರನ್‌ಗಳಿಸುವುದು ಕೂಡ ಸಾಮಾನ್ಯ ಸಾಧನೆಯಲ್ಲ" ಎಂದು ಜಾನಿ ಬೈರ್‌ಸ್ಟೋವ್ ಸ್ಕೈ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದರು. "ಜೋ ರೂಟ್ ಅವರೊಂದಿಗೆ ಮೂರನೇ ದಿನದಾಟದಲ್ಲಿ ಉತ್ತಮ ಸಮಯವನ್ನು ಕಳೆದಿರುವ ಜೊತೆಗೆ ರನ್‌ಗಳಿಸಲು ಸಾಧ್ಯವಾಗಿರುವುದು ಜೊತೆಗೆ 100 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿರುವುದು ಕೂಡ ತನಗೆ ಹರ್ಷವನ್ನುಂಟು ಮಾಡಿದೆ ಎಂದಿದ್ದಾರೆ.

"ನಾನು ಮುಂದಿನ ದಿನಗಳಲ್ಲಿ ಈ ಪ್ರದರ್ಶನವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವ ವಿಶ್ವಾಸವಿದೆ. ನಾನು ಅದನ್ನು ಉತ್ತಮಪಡಿಸಲು ಸಾಧ್ಯವಿದೆ. ಈ ಸರಣಿಯಲ್ಲಿ ಮತ್ತಷ್ಟು ಇನ್ನಿಂಗ್ಸ್‌ಗಳಲ್ಲಿ ಆಡಲಿರಯುವ ಕಾರಣದಿಂದಾಗಿ ನಾನು ಮತ್ತಷ್ಟು ಉತ್ತಮ ಪ್ರದರ್ಶನವನ್ನು ನೀಡುತ್ತೇನೆ. ಈ ಮೂಲಕ ದೊಡ್ಡ ಮೊತ್ತವನ್ನು ಗಳಿಸುವ ಭರವಸೆಯನ್ನು ಹೊಂದಿದ್ದೇನೆ" ಎಂದು ಜಾನಿ ಬೈರ್‌ಸ್ಟೋವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಜೇಮ್ಸ್ ಆಂಡರ್ಸನ್ ಎದುರಿಸಿದ ಸವಾಲಿನ ಬಗ್ಗೆ ಬೈರ್‌ಸ್ಟೋವ್‌ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು "ಜೇಮ್ಸ್ ಆಂಡರ್ಸನ್ ಬೌಲಿಂಗ್ ದಾಳಿಗೆ ಇಳಿಯುವ ಸಂದರ್ಭದಲ್ಲಿ ಅವರು ಸಾಕಷ್ಟು ಸಂಕಷ್ಟಗಳಿಗೆ ಕಾರಣವಾಗಲಿದ್ದಾರೆ ಎಂದು ತಿಳಿದಿದೆ. ನಾವು ಮತ್ತೆ ಕಣಕ್ಕಿಳಿಯಲಿದ್ದೇವೆ. ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಬೆಂಕಿಯಿಟ್ಟುಕೊಂಡವರಂತೆಯೇ ಆಡಲಿದ್ದೇವೆ ಎಂದು ಜಾನಿ ಬೈರ್‌ಸ್ಟೋವ್ ಟೀಮ್ ಇಂಡಿಯಾಗೆ ಕಠಿಣ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 391 ರನ್‌ಗಳನ್ನು ಗಳಿಸುವ ಮೂಲಕ 27 ರನ್‌ಗಳ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಏಕಾಂಕಿಯಾಗಿ ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡುವ ಮೂಲಕ ಕಠಿಣ ಸವಾಲಾಗಿ ಪರಿಣಮಿಸಿದರು. ಜೋ ರೂಟ್ 180 ರನ್‌ ಬಾರಿಸಿದರೆ ಜಾನಿ ಬೈರ್‌ಸ್ಟೋವ್ 57 ರನ್‌ಗಳ ಕೊಡುಗೆ ನೀಡಿದರು. ಆರಂಭಿಕ ಆಟಗಾರ ರೋರಿ ಬರ್ನ್ಸ್ 49 ರನ್‌ಗಳನ್ನು ಸಿಡಿಸಿ ಔಟಾಗಿದ್ದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಕ್ ಸಿಡಿಸಿದ ಶತಕದ ನೆರವಿನಿಂದ 364 ರನ್‌ಗಳನ್ನು ಗಳಿಸಿತ್ತು.

Story first published: Sunday, August 15, 2021, 13:14 [IST]
Other articles published on Aug 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X