ಭಾರತ 3-1 ಅಂತರದಿಂದ ಸರಣಿ ಗೆಲ್ಲಲಿದೆ: ಅಚ್ಚರಿಯ ಭವಿಷ್ಯ ನುಡಿದ ಮೈಕಲ್ ವಾನ್

ನಾಟಿಂಗ್‌ಹ್ಯಾಮ್, ಆಗಸ್ಟ್ 4: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ(ಆಗಸ್ಟ್ 4) ಆರಂಭವಾಗಲಿದೆ. ಮೊದಲ ಪಂದ್ಯ ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಆಯೋಜನೆಯಾಗಿದೆ. ಎರಡು ತಂಡಗಳು ಕೂಡ ಸಾಕಷ್ಟು ಬಲಿಷ್ಠವಾಗಿರುವ ಕಾರಣ ಈ ಬಾರಿ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಯಾರು ಗೆಲ್ಲಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಸರಣಿಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಪ್ರತಿಕ್ರಿಯಿಸಿದ್ದು ಸರಣಿ ಗೆಲ್ಲುವ ತಂಡವನ್ನು ಊಹಿಸಿದ್ದಾರೆ.

ಅಚ್ಚರಿಯೆಂದರೆ ಟೀಮ್ ಇಂಡಿಯಾ ಅಭಿಮಾನಿಗಳನ್ನು ಕೆಣಕುವಂತಾ ಟ್ವೀಟ್‌ಗಳನ್ನು ಮಾಡುತ್ತಾ ಸದಾ ಸುದ್ದಿಯಲ್ಲಿರುವ ಮೈಕಲ್ ವಾನ್ ಈ ಬಾರಿ ಅಚ್ಚರಿ ಮೂಡಿಸಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಈ ಬಾರಿ ಇಂಗ್ಲೆಂಡ್ ನೆಲದಲ್ಲಿ ಭಾರತ ಸರಣಿ ಗೆಲ್ಲಲಿದೆ ಎಂದಿದ್ದಾರೆ.

 ಭಾರತ vs ಇಂಗ್ಲೆಂಡ್: ಯಾವ ತಂಡ ಸರಣಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಹರ್ಭಜನ್ ಸಿಂಗ್ ಭಾರತ vs ಇಂಗ್ಲೆಂಡ್: ಯಾವ ತಂಡ ಸರಣಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಹರ್ಭಜನ್ ಸಿಂಗ್

ಮೈಕಲ್ ವಾನ್ ಹೀಗೆ ಅಭಿಪ್ರಾಯವನ್ನು ವ್ಯಕ್ತಪಡಿಸಲು ಕಾರಣವೇನು? ಭಾರತ ಯಾವ ಅಂತರದಿಂದ ಸರಣಿಯನ್ನು ಗೆಲ್ಲಲಿದೆ ಎಂದು ವಾನ್ ಊಹಿಸಿದ್ದಾರೆ ಎಂಬುದನ್ನು ವಿವರವಾಗಿ ಮುಂದೆ ಓದಿ..

3-1ರಿಂದ ಭಾರತ ಸರಣಿ ಗೆಲ್ಲಲಿದೆಯಂತೆ!

3-1ರಿಂದ ಭಾರತ ಸರಣಿ ಗೆಲ್ಲಲಿದೆಯಂತೆ!

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ 3-1 ಅಂತರದಿಂದ ಗೆಲುವು ಸಾಧಿಸಲಿದೆ ಎಂದಿದ್ದಾರೆ. ಈ ಮೂಲಕ 2007ರಿಂದ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧಿಸಲು ವಿಫಲವಾಗಿರುವ ಭಾರತ ಈ ಬಾರಿ ಆ ಪ್ರಯತ್ನದಲ್ಲಿ ಸಫಲವಾಗಲಿದೆ ಎಂದಿದ್ದಾರೆ.

ಭಾರತದ ಗೆಲುವಿಗೆ ಕಾರಣ ಹೇಳಿದ ವಾನ್

ಭಾರತದ ಗೆಲುವಿಗೆ ಕಾರಣ ಹೇಳಿದ ವಾನ್

ಇನ್ನು ಈ ಸರಣಿಯಲ್ಲಿ ಭಾರತ ತಂಡ ಮೇಲುಗೈ ಸಾಧಿಸಲು ಕಾರಣವಾಗಬಹುದಾದ ಸಂಗತಿಯನ್ನು ಮೈಕಲ್ ವಾನ್ ಹೇಳಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಕೆಲ ಪ್ರಮುಖ ಆಟಗಾರರು ಈ ಸರಣಿಗೆ ಅಲಭ್ಯವಾಗುತ್ತಿರುವುದು ಭಾರತ ತಂಡದ ವಿರುದ್ಧ ಹಿನ್ನೆಡೆಗೆ ಕಾರಣವಾಗಬಹುದು ಎಂದಿದ್ದಾರೆ. ಇದು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಫೇವರೀಟ್ ತಂಡವನ್ನಾಗಿಸಲಿದೆ ಎಂದಿದ್ದಾರೆ. 46ರ ಹರೆಯದ ಮಾಜಿ ಆಟಗಾರ ಹೇಳಿದ ಈ ಭವಿಷ್ಯ ಅಚ್ಚರಿ ಮೂಡಿಸಿದೆ.

ಕಾಯಲು ಸಾಧ್ಯವಿಲ್ಲ ಎಂದ ವಾನ್

ಕಾಯಲು ಸಾಧ್ಯವಿಲ್ಲ ಎಂದ ವಾನ್

ಟ್ವೀಟ್ ಮಾಡುವ ಮೂಲಕ ಇಂಗ್ಲೆಂಡ್ ಹಾಗೂ ಭಾರತದ ನಡುವಿನ ಟೆಸ್‌ ಸರಣಿಯ ಬಗ್ಗೆ ತಮ್ಮ ಕಾತುರತೆಯನ್ನು ವ್ಯಕ್ತಪಡಿಸಿದ್ದಾರೆ ಮೈಕಲ್ ವಾನ್. "ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ಹೆಚ್ಚು ಕಾಯಲು ನನ್ನಿಂದ ಸಾಧ್ಯವಿಲ್ಲ. ಅತ್ಯುತ್ತಮ ಮಾದರಿಯ ಸರಣಿ ಇದಾಗಿರಲಿದೆ. ಭಾರತ ಈ ಸರಣಿಯ ಫೆವರಿಟ್ ತ<�ಡವಾಗಿರಲಿದೆ. ಇಂಗ್ಲೆಂಡ್ ತಂಡದಲ್ಲಿ ಕೆಲ ಪ್ರಮುಖ ಆಟಗಾರರು ಅಲಭ್ಯವಾಗಿದ್ದಾರೆ. ಭಾರತ 3-1 ಅಂತರದಿಂದ ಸರಣಿ ಗೆಲ್ಲಲಿದೆ" ಎಂದು ಟ್ವೀಟ್‌ನಲ್ಲಿ ಮೈಕಲ್ ವಾನ್ ಹೇಳಿದ್ದಾರೆ.

ಮಗಳು ಹಾಗೂ ತಾಯಿಯ ಬಗ್ಗೆ ಮನ ಬಿಚ್ಚಿ ಮಾತಾಡಿದ ವಿರಾಟ್ | Oneindia Kannada
ಟೀಮ್ ಇಂಡಿಯಾ ವಿರುದ್ಧವೇ ಹೇಳಿಕೆ ನೀಡುತ್ತಿದ್ದ ವಾನ್

ಟೀಮ್ ಇಂಡಿಯಾ ವಿರುದ್ಧವೇ ಹೇಳಿಕೆ ನೀಡುತ್ತಿದ್ದ ವಾನ್

ಇನ್ನು ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬಳಿಕ ಮೈಕಲ್ ವಾನ್ ಸತತವಾಗಿ ಟೀಮ್ ಇಂಡಿಯಾ ವಿರುದ್ಧವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಹೀನಾಯವಾಗಿ ಸೋಲಲಿದೆ ಎಂದಿದ್ದ ಮೈಕಲ್ ವಾನ್ ಬಳಿಕ ಇಂಗ್ಲೆಂಡ್ ತಂಡದ ಭಾರತದ ನೆಲದಲ್ಲಿ ಆಡಿದ ಸರಣಿಯ ಬಗ್ಗೆಯೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತೊಡಿಸಿದ್ದರು. ಇವುಗಳಲ್ಲದೆ ಭಾರತ ತಂಡದ ಬಗ್ಗೆ ಮಾಡಿದ ಇನ್ನೂ ಕೆಲ ಟ್ವೀಟ್‌ಗಳು ಭಾರತದ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಲು ಮಾಡಿದಂತೆಯೇ ಇತ್ತು. ಆದರೆ ಇಂಗ್ಲೆಂಡ್ ತಮಡದ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಬಗ್ಗೆ ಮಾಡಿರುವ ಟ್ವೀಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 4, 2021, 12:51 [IST]
Other articles published on Aug 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X