ಭಾರತ vs ಇಂಗ್ಲೆಂಡ್: ಲಾರ್ಡ್ಸ್ ಅಂಗಳದಲ್ಲಿ ಸೋತರೂ ಟೀಮ್ ಇಂಡಿಯಾ ಎಂದರೆ ಭಯವಿಲ್ಲ ಎಂದ ಸಿಲ್ವರ್‌ವುಡ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಪಟೌಡಿ ಟೆಸ್ಟ್ ಸರಣಿಯ 2 ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು. ನಂತರ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಜಯ ಸಾಧಿಸುವುದರ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಿತು. ಹೀಗೆ ಲಾರ್ಡ್ಸ್ ಅಂಗಳದಲ್ಲಿ 7 ವರ್ಷಗಳ ಬಳಿಕ ಗೆದ್ದು ಮೈಲಿಗಲ್ಲು ನೆಟ್ಟ ಇಂಡಿಯಾದ ಗೆಲುವಿನ ಕುರಿತು ಮಾತನಾಡಿರುವ ಇಂಗ್ಲೆಂಡ್ ತಂಡದ ಪ್ರಮುಖ ಕೋಚ್ ಕ್ರಿಸ್ ಸಿಲ್ವರ್‌ವುಡ್ ಭಾರತದ ಈ ಪುಟ್ಟ ಗೆಲುವಿಗೆಲ್ಲಾ ನಾವು ಹೆದರುವವರಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!

ಲಾರ್ಡ್ಸ್ ಅಂಗಳದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ 364 ರನ್‌ಗಳಿಗೆ ಆಲ್ ಔಟ್ ಆಯಿತು. ಅತ್ತ ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಜೋ ರೂಟ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 391 ರನ್ ಗಳಿಸುವುದರ ಮೂಲಕ ಮೊದಲನೇ ಇನ್ನಿಂಗ್ಸ್‌ನಲ್ಲಿ 27 ರನ್‌ಗಳ ಲೀಡ್ ಪಡೆದುಕೊಂಡಿತ್ತು. ಹೀಗೆ ಮೊದಲನೇ ಇನಿಂಗ್ಸ್ ಮುಗಿದ ನಂತರ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಇಂಗ್ಲೆಂಡ್ ಟೀಮ್ ಇಂಡಿಯಾದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭವಾದ ಮೇಲೂ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳ ವಿಕೆಟ್‍ಗಳನ್ನು ವೇಗವಾಗಿ ಪಡೆಯುವುದರ ಮೂಲಕ ಪಂದ್ಯದ ಮೇಲೆ ಮತ್ತಷ್ಟು ಹಿಡಿತ ಸಾಧಿಸಿತ್ತು. ಐದನೇ ದಿನದಾಟ ಆರಂಭವಾಗಿ ರಿಷಭ್ ಪಂತ್ ವಿಕೆಟ್ ಒಪ್ಪಿಸಿದ ನಂತರ ಇಂಗ್ಲೆಂಡ್ ಈ ಪಂದ್ಯವನ್ನು ಸುಲಭವಾಗಿ ಜಯಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಟೀಮ್ ಇಂಡಿಯಾದ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಡಿಕ್ಲೇರ್ ಮಾಡಿದ ನಂತರ ಇಂಗ್ಲೆಂಡ್ ತಂಡಕ್ಕೆ 272 ರನ್‌ಗಳ ಗುರಿಯನ್ನು ನೀಡಿತು.

WTC ದ್ವಿತೀಯ ಆವೃತ್ತಿ: 14 ಅಂಕ ಪಡೆದ ಭಾರತಕ್ಕೆ ಎರಡನೇ ಸ್ಥಾನ, ಕೇವಲ 12 ಅಂಕ ಪಡೆದ ತಂಡಕ್ಕೆ ಪ್ರಥಮ ಸ್ಥಾನ!WTC ದ್ವಿತೀಯ ಆವೃತ್ತಿ: 14 ಅಂಕ ಪಡೆದ ಭಾರತಕ್ಕೆ ಎರಡನೇ ಸ್ಥಾನ, ಕೇವಲ 12 ಅಂಕ ಪಡೆದ ತಂಡಕ್ಕೆ ಪ್ರಥಮ ಸ್ಥಾನ!

ಟೀಮ್ ಇಂಡಿಯಾ ನೀಡಿದ್ದ 272 ರನ್‌ಗಳ ಗುರಿಯನ್ನು ಬೆನ್ನಟ್ಟಲು ಹೋಗಿ 120 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಐತಿಹಾಸಿಕ ಹಿನ್ನೆಲೆಯುಳ್ಳ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ 151 ರನ್‌ಗಳಿಂದ ಹೀನಾಯವಾಗಿ ಸೋಲನುಭವಿಸಿತು. ಗೆಲ್ಲುವ ಪಂದ್ಯವನ್ನು ಕೊನೆಯ ಒಂದು ದಿನದಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಸೋತ ಇಂಗ್ಲೆಂಡ್ ತವರಿನಲ್ಲಿಯೇ ಮುಖಭಂಗವನ್ನು ಅನುಭವಿಸಿತು. ಇಷ್ಟಾದರೂ ಟೀಮ್ ಇಂಡಿಯಾ ಗೆಲುವಿನ ಕುರಿತು ನಾವು ಹೆದರಿಲ್ಲ, ಇದೊಂದು ಪುಟ್ಟ ಸೋಲಷ್ಟೇ ಎಂದು ಇಂಗ್ಲೆಂಡ್ ತಂಡದ ಪ್ರಮುಖ ಕೋಚ್ ಕ್ರಿಸ್ ಸಿಲ್ವರ್‌ವುಡ್ ಈ ಕೆಳಕಂಡಂತೆ ಮಾತನಾಡಿದ್ದಾರೆ..

ಪಂದ್ಯ ಸೋತಿದ್ದಕ್ಕೆ ನಮಗೇನೂ ಭಯವಿಲ್ಲ ಎಂದ ಸಿಲ್ವರ್‌ವುಡ್!

ಪಂದ್ಯ ಸೋತಿದ್ದಕ್ಕೆ ನಮಗೇನೂ ಭಯವಿಲ್ಲ ಎಂದ ಸಿಲ್ವರ್‌ವುಡ್!

ಲಾರ್ಡ್ಸ್ ಅಂಗಳದಲ್ಲಿ ಟೀಮ್ ಇಂಡಿಯಾ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು ಸೋತಿರುವುದರ ಕುರಿತು ಮಾತನಾಡಿರುವ ಇಂಗ್ಲೆಂಡ್ ತಂಡದ ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ 'ಟೀಮ್ ಇಂಡಿಯಾ ವಿರುದ್ಧ ಸೋತಿರುವುದಕ್ಕೆ ನಮ್ಮ ತಂಡದ ಹುಡುಗರು ಭಯಗೊಂಡಿಲ್ಲ, ಭಾರತೀಯರು ನಮ್ಮನ್ನು ತಳ್ಳಿದರೆ ನಾವೂ ಸಹ ಅವರನ್ನು ತಳ್ಳುತ್ತೇವೆ' ಎಂದು ಹೇಳಿಕೆ ನೀಡಿದ್ದಾರೆ.

ಟೀಮ್ ಇಂಡಿಯಾ ಆಟಗಾರರು ಜೇಮ್ಸ್ ಆ್ಯಂಡರ್ಸನ್‌ನ್ನು ಟಾರ್ಗೆಟ್ ಮಾಡಿದ್ದರು!

ಟೀಮ್ ಇಂಡಿಯಾ ಆಟಗಾರರು ಜೇಮ್ಸ್ ಆ್ಯಂಡರ್ಸನ್‌ನ್ನು ಟಾರ್ಗೆಟ್ ಮಾಡಿದ್ದರು!

ಇನ್ನೂ ಮುಂದುವರೆದು ಮಾತನಾಡಿದ ಇಂಗ್ಲೆಂಡ್ ತಂಡದ ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಆಟಗಾರರ ನಡುವೆ ನಡೆದ ಮಾತಿನ ಚಕಮಕಿಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಮೊದಲನೇ ಇನ್ನಿಂಗ್ಸ್‌ನಲ್ಲಿಯೇ ತಮ್ಮ ತಂಡದ ಆಟಗಾರ ಜೇಮ್ಸ್ ಆ್ಯಂಡರ್ಸನ್‌ನ್ನು ಟಾರ್ಗೆಟ್ ಮಾಡಿದ್ದರು, ನಮ್ಮ ತಂಡದ ಆಟಗಾರರು ಕೂಡ ನೀಡಬೇಕಾದ ಪ್ರತ್ಯುತ್ತರವನ್ನು ನೀಡಿದರು ಎಂದು ಸಿಲ್ವರ್‌ವುಡ್ ಹೇಳಿಕೆ ನೀಡಿದ್ದಾರೆ.

Virat Kohli ಹಾಗು Jos Buttler ನಡುವೆ ಅಸಲಿಗೆ ನಡೆದಿದ್ದೇನು | Oneindia Kannada
ಮುಂದಿನ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿ ಸಿಲ್ವರ್‌ವುಡ್

ಮುಂದಿನ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿ ಸಿಲ್ವರ್‌ವುಡ್

ಲಾರ್ಡ್ಸ್ ಪಂದ್ಯದ ಕುರಿತು ಈ ರೀತಿಯಾಗಿ ಮಾತನಾಡಿರುವ ಇಂಗ್ಲೆಂಡ್ ತಂಡದ ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ಇಂಡಿಯಾ ವಿರುದ್ಧ ಸೋತಿದ್ದು ಕೊಂಚ ಬೇಸರ ತಂದಿದೆ, ನಮ್ಮ ಹುಡುಗರು ಭಾರತೀಯರ ವಿರುದ್ಧ ನೇರಾನೇರ ಪೈಪೋಟಿಯನ್ನೇ ನಡೆಸಿದರು, ಆದರೆ ಕೊನೆಯ ಹಂತದಲ್ಲಿ ಪಂದ್ಯ ನಮ್ಮ ಕೈತಪ್ಪಿತು. ಮುಂದಿನ ಪದ್ಯದಲ್ಲಿ ಈ ತಪ್ಪುಗಳನ್ನು ತಿದ್ದಿಕೊಂಡು ಗೆಲುವಿನ ಖಾತೆ ತೆರೆಯಲಿದ್ದೇವೆ ಎಂದು ಸಿಲ್ವರ್‌ವುಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, August 18, 2021, 13:19 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X