ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಈ ಆಟಗಾರ ಗಿಲ್‌ಕ್ರಿಸ್ಟ್ ಅರ್ಧಕ್ಕೂ ಸಮವಿಲ್ಲ ಎಂದು ಕಿಡಿಕಾರಿದ ಸಲ್ಮಾನ್ ಬಟ್

IND vs ENG: Rishabh Pant is not even half of Adam Gilchrist says former cricketer

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಚರ್ಚಿಸಲ್ಪಡುತ್ತಿರುವ ವಿಷಯವೆಂದರೆ ಅದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿ. ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಸದ್ಯಕ್ಕೆ ಎರಡೂ ತಂಡಗಳು ಸಹ ಸಮಬಲವನ್ನು ಸಾಧಿಸಿದ್ದು ಕುತೂಹಲದ ಘಟ್ಟವನ್ನು ತಲುಪಿ ಸಾಕಷ್ಟು ಚರ್ಚೆಗೀಡಾಗಿದೆ.

'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್

ಇದೇ ಸಮಯದಲ್ಲಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಕೆಲ ಆಟಗಾರರ ಕುರಿತು ಮಾಜಿ ಕ್ರಿಕೆಟಿಗರು ಮತ್ತು ಕ್ರೀಡಾ ಪಂಡಿತರು ಚರ್ಚೆಗಳನ್ನು ನಡೆಸುತ್ತಿದ್ದು ಆಟಗಾರರ ಕಳಪೆ ಪ್ರದರ್ಶನದ ಕುರಿತು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿಯೂ ಈ ಹಿಂದಿನ ಟೆಸ್ಟ್ ಸರಣಿಗಳಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದ ಭಾರತೀಯ ಕ್ರಿಕೆಟಿಗರು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಕೆಟ್ಟ ಫಾರ್ಮ್‌ನಲ್ಲಿದ್ದು ಸಾಲು ಸಾಲು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಸಚಿನ್ ಮತ್ತು ಪಾಂಟಿಂಗ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್ಸಚಿನ್ ಮತ್ತು ಪಾಂಟಿಂಗ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್

ಪ್ರಮುಖವಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಹಾಗೂ ರಿಷಭ್ ಪಂತ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು ಕೇವಲ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಮಾತ್ರವಲ್ಲದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಈ ಆಟಗಾರರ ಕಳಪೆ ಪ್ರದರ್ಶನದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

ಇದೀಗ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 6 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ರಿಷಭ್ ಪಂತ್ ಗಳಿಸಿರುವುದು ಕೇವಲ 96 ರನ್. ಹೀಗಾಗಿ ರಿಷಭ್ ಪಂತ್ ವಿರುದ್ಧ ಟೀಕೆಗಳು ತುಸು ಹೆಚ್ಚಾಗಿಯೇ ಕೇಳಿಬರುತ್ತಿವೆ. ಈ ಹಿಂದಿನ ಸರಣಿಗಳಲ್ಲಿ ರಿಷಭ್ ಪಂತ್ ಉತ್ತಮ ಪ್ರದರ್ಶನವನ್ನು ನೀಡಿದ್ದಾಗ ಆತನನ್ನು ಆಸ್ಟ್ರೇಲಿಯಾದ ಖ್ಯಾತ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್ ಜೊತೆ ಹೋಲಿಕೆ ಮಾಡಲಾಗಿತ್ತು. ಇದೀಗ ಈ ವಿಷಯದ ಕುರಿತಾಗಿ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಈ ಕೆಳಕಂಡಂತೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಗಿಲ್‌ಕ್ರಿಸ್ಟ್ ಜೊತೆ ರಿಷಭ್ ಪಂತ್ ಹೋಲಿಕೆ ಮಾಡುವುದನ್ನು ಮೊದಲು ನಿಲ್ಲಿಸಿ

ಗಿಲ್‌ಕ್ರಿಸ್ಟ್ ಜೊತೆ ರಿಷಭ್ ಪಂತ್ ಹೋಲಿಕೆ ಮಾಡುವುದನ್ನು ಮೊದಲು ನಿಲ್ಲಿಸಿ

'ಕೇವಲ 2-3 ವರ್ಷಗಳ ಅನುಭವವಿರುವ ಯುವ ಕ್ರಿಕೆಟಿಗ ರಿಷಭ್ ಪಂತ್‌ನ್ನು ವಿಶ್ವವಿಖ್ಯಾತ ಆ್ಯಡಮ್ ಗಿಲ್‌ಕ್ರಿಸ್ಟ್ ಜೊತೆ ಹೋಲಿಕೆ ಮಾಡಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಗಿಲ್‌ಕ್ರಿಸ್ಟ್ ಕ್ರಿಕೆಟ್ ಆಡುವ ಸಮಯದಲ್ಲಿ ದೊಡ್ಡ ದೊಡ್ಡ ಭಯಾನಕ ಬೌಲರ್‌ಗಳ ಬೌಲಿಂಗ್ ದಾಳಿಯನ್ನು ಎದುರಿಸಿ ಅತ್ಯುತ್ತಮ ಆಟವನ್ನು ಆಡಿದ್ದಾರೆ. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಆ ಮಟ್ಟಿಗಿನ ಮಾರಕ ಬೌಲಿಂಗ್ ನಡೆಸುವ ಬೌಲರ್‌ಗಳು ಯಾರೂ ಸಹ ಇಲ್ಲ ಹಾಗೂ ರಿಷಭ್ ಪಂತ್ ಕೂಡ ಕೆಲವೊಂದಷ್ಟು ಉತ್ತಮ ಇನ್ನಿಂಗ್ಸ್ ಆಡಿದ್ದು ಬಿಟ್ಟರೆ ದೊಡ್ಡ ಮಟ್ಟದ ಸಾಧನೆಯನ್ನೇನು ಮಾಡಿಲ್ಲ' ಎಂದು ಹೇಳಿಕೆ ನೀಡಿರುವ ಸಲ್ಮಾನ್ ಬಟ್ ಆ್ಯಡಮ್ ಗಿಲ್‌ಕ್ರಿಸ್ಟ್ ಜೊತೆ ರಿಷಭ್ ಪಂತ್ ಹೋಲಿಕೆ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.

ರಿಷಭ್ ಪಂತ್ ಆಡಮ್ ಗಿಲ್‌ಕ್ರಿಸ್ಟ್ ಅರ್ಧಕ್ಕೂ ಸಮವಿಲ್ಲ

ರಿಷಭ್ ಪಂತ್ ಆಡಮ್ ಗಿಲ್‌ಕ್ರಿಸ್ಟ್ ಅರ್ಧಕ್ಕೂ ಸಮವಿಲ್ಲ

ಇನ್ನೂ ಮುಂದುವರೆದು ರಿಷಭ್ ಪಂತ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಲ್ಮಾನ್ ಬಟ್ 'ಆಡಂ ಗಿಲ್ ಕ್ರಿಸ್ಟ್ ಓರ್ವ ಅತ್ಯದ್ಭುತ ಆಟಗಾರ, ರಿಷಭ್ ಪಂತ್ ಗಿಲ್‌ಕ್ರಿಸ್ಟ್ ಅರ್ಧದಷ್ಟು ಕೂಡ ಇಲ್ಲ. ಗಿಲ್‌ಕ್ರಿಸ್ಟ್ ತುಂಬಾ ವಿಭಿನ್ನವಾದ ಬ್ಯಾಟ್ಸ್‌ಮನ್‌ ಆಗಿದ್ದರು, ಆದರೆ ರಿಷಭ್ ಪಂತ್ ಪಿಚ್‌ಗೆ ಹೊಂದಿಕೊಳ್ಳುವ ಮೊದಲೇ ದೊಡ್ಡ ಹೊಡೆತಗಳನ್ನು ಬಾರಿಸಲು ಹೋಗಿ ವಿಕೆಟ್ ಒಪ್ಪಿಸಿ ವಿಫಲರಾಗುತ್ತಾರೆ. ಹೀಗಾಗಿ ರಿಷಭ್ ಪಂತ್ ಮತ್ತು ಆಡಮ್ ಗಿಲ್‌ಕ್ರಿಸ್ಟ್ ನಡುವೆ ಹೋಲಿಕೆ ಮಾಡುವುದು ತಪ್ಪು' ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಟದ ನಡುವೆ ಮೈದಾನಕ್ಕೆ ನುಗ್ಗುತ್ತಿದ್ದ ಜಾರ್ವೋಗೆ ಇಂಗ್ಲೆಂಡ್ ಪೊಲೀಸ್ ಮಾಡಿದ್ದೇನು? | Oneindia Kannada
ಸರಣಿಯಲ್ಲಿ ರಿಷಭ್ ಪಂತ್ ಕಳಪೆ ಪ್ರದರ್ಶನ

ಸರಣಿಯಲ್ಲಿ ರಿಷಭ್ ಪಂತ್ ಕಳಪೆ ಪ್ರದರ್ಶನ

ಕಳೆದ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ನೀಡಿ ಮಿಂಚಿದ್ದ ರಿಷಭ್ ಪಂತ್ ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಈಗಾಗಲೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಟ್ಟು 6 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ರಿಷಭ್ ಪಂತ್ ಕೇವಲ 96 ರನ್ ಕಲೆಹಾಕಿ ನೀರಸ ಪ್ರದರ್ಶನವನ್ನು ನೀಡಿದ್ದಾರೆ.

Story first published: Friday, September 3, 2021, 15:53 [IST]
Other articles published on Sep 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X