IND vs ENG: ಇದು ಬ್ಯಾಟಿಂಗ್ ಕಾಳಗದ ಪಂದ್ಯ; ಈ ತಂಡಕ್ಕಿದೆ ಅಡ್ವಾಂಟೇಜ್; ಎಬಿ ಡಿವಿಲಿಯರ್ಸ್

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಕುತೂಹಲಕಾರಿ ವಿಷಯವೇನೆಂದರೆ, ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಮೈದಾನದಲ್ಲಿ ಟಾಸ್ ಗೆದ್ದ ತಂಡಗಳು ಇದುವರೆಗೆ ಪುರುಷರ ಟಿ20 ಪಂದ್ಯವನ್ನು ಗೆದ್ದಿಲ್ಲ. ಇದು ಇಲ್ಲಿನ ವಿಶೇಷ ದಾಖಲೆಯಾಗಿದೆ. ಇದುವರೆಗೆ 11 ಪುರುಷರ ಟಿ20 ಪಂದ್ಯಗಳು ನಡೆದಿದ್ದು, ಟಾಸ್ ಸೋತ ತಂಡವೇ ಪಂದ್ಯವನ್ನು ಗೆದ್ದು ಬಾಸ್ ಆಗಿದೆ.

IND vs ENG: ಟಿ20 ವಿಶ್ವಕಪ್ ಸೆಮಿಸ್‌ನಲ್ಲಿ ರೋಹಿತ್, ಕೊಹ್ಲಿಗಿದೆ ದೊಡ್ಡ ದಾಖಲೆ ನಿರ್ಮಿಸುವ ಅವಕಾಶIND vs ENG: ಟಿ20 ವಿಶ್ವಕಪ್ ಸೆಮಿಸ್‌ನಲ್ಲಿ ರೋಹಿತ್, ಕೊಹ್ಲಿಗಿದೆ ದೊಡ್ಡ ದಾಖಲೆ ನಿರ್ಮಿಸುವ ಅವಕಾಶ

ಭಾರತವು ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅತ್ತ ಇಂಗ್ಲೆಂಡ್ ಮಾರ್ಕ್ ವುಡ್ ಮತ್ತು ಡೇವಿಡ್ ಮಲಾನ್ ಅವರ ಗಾಯಗಳಿಂದಾಗಿ ಇಂಗ್ಲೆಂಡ್‌ನ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ಆ ಇಬ್ಬರು ಇಂಗ್ಲೆಂಡ್ ಆಟಗಾರರ ಸ್ಥಾನಕ್ಕೆ ಫಿಲಿಪ್ ಸಾಲ್ಟ್ ಮತ್ತು ಕ್ರಿಸ್ ಜೋರ್ಡಾನ್ ಬಂದಿದ್ದಾರೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಪಾಕಿಸ್ತಾನದೊಂದಿಗೆ ಫೈನಲ್ ಪಂದ್ಯದಲ್ಲಿ ಸೆಣಸಲಿದೆ.

ಇದೇ ವೇಳೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರು ಗುರುವಾರ (ನವೆಂಬರ್ 10) ನಡೆಯುತ್ತಿರುವ ಟಿ20 ವಿಶ್ವಕಪ್ 2022ರ ಎರಡನೇ ಸೆಮಿಫೈನಲ್‌ಗೆ ಮುಂಚಿತವಾಗಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಪಂದ್ಯದ ಕುರಿತು ಪ್ರತಿಕ್ರಿಯಿಸಿದರು.

ಅಡಿಲೇಡ್ ಓವಲ್ ಪಿಚ್‌ನ ನಿಧಾನಗತಿಯ ಸ್ವರೂಪ ಮತ್ತು ಮೈದಾನದಲ್ಲಿ ವಿರಾಟ್ ಕೊಹ್ಲಿಯ ರನ್ ದಾಖಲೆಯನ್ನು ಪ್ರಸ್ತಾಪಿಸಿದ ಎಬಿ ಡಿವಿಲಿಯರ್ಸ್, ಸೆಮಿಫೈನಲ್ ಹಣಾಹಣಿಯಲ್ಲಿ ಭಾರತವು ಗೆಲ್ಲುವ ಅಡ್ವಾಂಟೇಜ್ ಹೊಂದಿದೆ ಎಂದು ಹೇಳಿದರು.

"ಇದು ಎರಡು ಬಲಿಷ್ಠ ಬ್ಯಾಟಿಂಗ್ ಘಟಕಗಳ ಪಂದ್ಯವಾಗಿದೆ. ಭಾರತಕ್ಕೆ ಹೊಂದಿಕೆಯಾಗುವ ಅಡಿಲೇಡ್‌ನಲ್ಲಿ ಆಡುತ್ತಿದ್ದಾರೆ. ಅಡ್ವಾಂಟೇಜ್ ಇಂಡಿಯಾ. ಇದು ನಿಧಾನಗತಿಯ ಪಿಚ್ ಆಗಿದ್ದು, ವಿರಾಟ್ ಕೊಹ್ಲಿ ಇಲ್ಲಿ ಹೆಚ್ಚಿನ ರನ್ ಗಳಿಸಿದ್ದಾರೆ," ಎಂದು ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.

ಇಂಗ್ಲೆಂಡ್ ತಂಡವನ್ನು ನ್ಯೂಜಿಲೆಂಡ್‌ಗೆ ಹೋಲಿಸಿದ ಎಬಿಡಿ, ಕಿವೀಸ್‌ಗೆ ಹೋಲಿಸಿದರೆ ಇಂಗ್ಲೆಂಡ್ ತಂಡವು ಉತ್ತಮವಾಗಿದೆ ಎಂದು ಹೇಳಿದರು. "ನ್ಯೂಜಿಲೆಂಡ್‌ಗಿಂತ ಇಂಗ್ಲೆಂಡ್ ಸ್ವಲ್ಪ ಉತ್ತಮವಾಗಿದೆ. ಆಂಗ್ಲರ ಬಹಳಷ್ಟು ಸ್ಟಾರ್‌ಗಳನ್ನು ಹೊಂದಿದ್ದಾರೆ ಮತ್ತು ತಂಡವಾಗಿ ಹೇಗೆ ಆಡಬೇಕೆಂದು ತಿಳಿದಿದ್ದಾರೆ. ಅವರ ಸಂಪೂರ್ಣ ಬ್ಯಾಟಿಂಗ್ ಲೈನ್‌ಅಪ್ ನೋಡಿದರೆ ಮ್ಯಾಚ್ ವಿನ್ನರ್‌ಗಳೆಂದು ನಾನು ಭಾವಿಸುತ್ತೇನೆ. ಅವರ ಬೌಲಿಂಗ್ ಲೈನ್‌ಅಪ್ ಭಾರತ ಮೇಲುಗೈ ಸಾಧಿಸಬಹುದಾದ ಕ್ಷೇತ್ರವಾಗಿರಬಹುದು," ಎಂದು ಮಾಜಿ ದಕ್ಷಿಣ ಆಫ್ರಿಕಾದ ಆಟಗಾರ ತಿಳಿಸಿದರು.

ಇಂಗ್ಲೆಂಡ್ ತಂಡದ ಬೌಲಿಂಗ್ ಉತ್ತಮವಾಗಿಲ್ಲ, ಆದರೆ ಹಾನಿಯನ್ನುಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದು, ಪಂದ್ಯಾವಳಿಯಲ್ಲಿ ಅವರು ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆಂದು ನಾನು ಭಾವಿಸುವುದಿಲ್ಲ, ಆದರೆ ಅತ್ಯಂತ ಸಮರ್ಥ ಬೌಲಿಂಗ್ ದಾಳಿಯನ್ನು ಹೊಂದಿದೆ. ಅವರು ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್ ಮತ್ತು ಸ್ಯಾಮ್ ಕರ್ರಾನ್ ಉತ್ತಮ ಬೌಲಿಂಗ್ ಪಡೆ ಹೊಂದಿದೆ.

ಇನ್ನು ಇಂಗ್ಲೆಂಡ್‌ನಲ್ಲಿ ವಿಸ್ಮಯಕಾರಿಯಾದ ವಿಶೇಷ ಏನೂ ಇಲ್ಲ, ಆದರೆ ಆದಿಲ್ ರಶೀದ್ ವಿಕೆಟ್ ಕಬಳಿಸಬಹುದು. ಭಾರತದ ಬ್ಯಾಟಿಂಗ್ ಲೈನ್‌ಅಪ್ ಆಂಗ್ಲರ ಬೌಲಿಂಗ್ ಪಡೆಯನ್ನು ಹಿಡಿತದಲ್ಲಿಟ್ಟುಕೊಳ್ಳುತ್ತದೆ ಎಂದು ನಾನು ನಂಬುತ್ತೇನೆ.

ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೈ-ವೋಲ್ಟೇಜ್ ಎರಡನೇ ಸೆಮಿಫೈನಲ್ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಭಾರತವು ತಮ್ಮ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ತನ್ನ ಗುಂಪಿನ ಹಂತವನ್ನು ಮುಗಿಸಿದೆ. ಅವರ ಐದು ಸೂಪರ್ 12 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, November 10, 2022, 13:57 [IST]
Other articles published on Nov 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X