ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಲಾರ್ಡ್ಸ್ ಏನು ನಿನ್ನ ಮನೆಯಲ್ಲ'; ಮೈದಾನದಲ್ಲೇ ಕಿತ್ತಾಟಕ್ಕಿಳಿದ ಕೊಹ್ಲಿ ಮತ್ತು ಆಂಡರ್‌ಸನ್‌!

IND vs ENG: Virat Kohli and James Anderson involve in verbal spat at Lord’s

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವಂತಹ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಎರಡನೇ ಟೆಸ್ಟ್ ಪಂದ್ಯ ದಿನದಿಂದ ದಿನಕ್ಕೆ ಹೆಚ್ಚು ಕುತೂಹಲ ಮತ್ತು ರೋಮಾಂಚನಕಾರಿ ಘಟ್ಟವನ್ನು ತಲುಪುವತ್ತ ಸಾಗುತ್ತಿದೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲನೇ ಟೆಸ್ಟ್ ಪಂದ್ಯದ ರೀತಿ ಈ ಬಾರಿ ಪಂದ್ಯಕ್ಕೆ ಯಾವುದೇ ಮಳೆಯ ಅಡ್ಡಿಯಾಗಿಲ್ಲ. ಹೀಗಾಗಿ ಎರಡೂ ತಂಡಗಳ ಆಟಗಾರರು ಸಹ ಮೊದಲನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದು ನೇರಾನೇರ ಹೋರಾಟ ನಡೆಯುತ್ತಿದೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರುಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರು

ಈಗಾಗಲೇ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ 4 ದಿನಗಳ ಆಟ ಮುಕ್ತಾಯವಾಗಿದ್ದು ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 364 ರನ್ ಗಳಿಸಿತು, ಇಂಗ್ಲೆಂಡ್ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್‌ನಲ್ಲಿ 391 ರನ್ ಗಳಿಸಿತು. ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 27 ರನ್‌ಗಳ ಅಲ್ಪ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಇನ್ನು ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ತನ್ನ ಬ್ಯಾಟಿಂಗ್ ಆರಂಭಿಸಿದ್ದು ನಾಲ್ಕನೆ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 181 ರನ್ ದಾಖಲಿಸಿದೆ.

ದ್ವಿತೀಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‌ ಟ್ರೋಫಿ: ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಪ್ರಕಟದ್ವಿತೀಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‌ ಟ್ರೋಫಿ: ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಪ್ರಕಟ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 154 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದು ಇದೇ ದಿನ ಮೈದಾನದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ಪರಸ್ಪರ ಮಾತಿನ ವಾಗ್ದಾಳಿ ನಡೆಸಿದ್ದಾರೆ. ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ 17ನೇ ಓವರ್ ಎಸೆಯಲು ಬಂದ ಜೇಮ್ಸ್ ಆ್ಯಂಡರ್ಸನ್ ಮತ್ತು ನಾನ್ ಸ್ಟ್ರೈಕ್ ಕೊನೆಯಲ್ಲಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಡುವೆ ಮೈದಾನದಲ್ಲಿಯೇ ಮಾತಿನ ಚಕಮಕಿ ಆರಂಭವಾಗಿದೆ. ಈ ಇಬ್ಬರ ನಡುವೆ ನಡೆದ ಮಾತಿನ ಚಕಮಕಿಯ ಆಡಿಯೋ ಸ್ಟಂಪ್‌ಗಳಿಗೆ ಅಳವಡಿಸಿದ್ದ ಮೈಕ್‌ನ ಮೂಲಕ ಪ್ರೇಕ್ಷಕರಿಗೆ ಕೇಳಿಸಿದೆ, ನಿಂದನೆಯ ಶಬ್ದಗಳನ್ನು ಉಪಯೋಗಿಸಿ ಇಬ್ಬರೂ ವಾಗ್ದಾಳಿ ನಡೆಸಿದ್ದು ಇಬ್ಬರ ನಡುವೆ ಗಂಭೀರವಾದ ಮಾತುಕತೆ ನಡೆದಿರುವುದು ಸ್ಪಷ್ಟವಾಗಿದೆ. ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆಂಡರ್ಸನ್ ನಡುವೆ ಜಗಳವಾಗಲು ಕಾರಣವೇನು ಎಂಬ ಮಾಹಿತಿ ಈ ಕೆಳಕಂಡಂತಿದೆ ನೋಡಿ..

ಬೌಲಿಂಗ್ ವೇಳೆ ಪಿಚ್ ಮೇಲೆ ಓಡಾಡಿದ ಜೇಮ್ಸ್ ಆ್ಯಂಡರ್ಸನ್!

ಬೌಲಿಂಗ್ ವೇಳೆ ಪಿಚ್ ಮೇಲೆ ಓಡಾಡಿದ ಜೇಮ್ಸ್ ಆ್ಯಂಡರ್ಸನ್!

ಟೀಮ್ ಇಂಡಿಯಾದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ 17ನೇ ಓವರ್‌ ಎಸೆಯಲು ಬಂದ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ ಮಾಡುವ ವೇಳೆ ಪಿಚ್ ಮೇಲೆ ಹೆಚ್ಚಾಗಿ ಓಡಾಡಿದ್ದಾರೆ. ನಿಯಮದ ಪ್ರಕಾರ ಬೌಲರ್ ಪಿಚ್ ಮೇಲೆ ಓಡಾಡುವ ಹಾಗಿಲ್ಲ, ಹೀಗಾಗಿ ಜೇಮ್ಸ್ ಆ್ಯಂಡರ್ಸನ್ ಪದೇಪದೇ ಪಿಚ್ ಮೇಲೆ ಓಡಾಡಿರುವುದನ್ನು ಕಂಡ ವಿರಾಟ್ ಕೊಹ್ಲಿ ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಮೈದಾನದಲ್ಲಿಯೇ ಕಿಡಿಕಾರಿದ್ದಾರೆ. ಈ ಕಾರಣದಿಂದಲೇ ಜೇಮ್ಸ್ ಆ್ಯಂಡರ್ಸನ್ ಮತ್ತು ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ.

ಇದೇನು ನಿಮ್ಮ ಮನೆಯ ಹಿತ್ತಲಲ್ಲ ಎಂದು ಕೆಂಡಕಾರಿದ ವಿರಾಟ್ ಕೊಹ್ಲಿ

ಇದೇನು ನಿಮ್ಮ ಮನೆಯ ಹಿತ್ತಲಲ್ಲ ಎಂದು ಕೆಂಡಕಾರಿದ ವಿರಾಟ್ ಕೊಹ್ಲಿ

ಹೀಗೆ ಪದೇ ಪದೇ ಪಿಚ್ ಮೇಲೆ ಓಡಾಡುತ್ತಿದ್ದ ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಮೈದಾನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ 'ಲಾರ್ಡ್ಸ್ ಮೈದಾನವೇನು ನಿನ್ನ ಮನೆಯ ಹಿತ್ತಲಲ್ಲ..' ಎಂದು ಕಾಲೆಳೆದಿದ್ದಾರೆ. ಈ ರೀತಿ ಹೇಳುವುದರ ಮೂಲಕ ಮೈದಾನದಲ್ಲಿ ಹೇಗೆ ಬೇಕೋ ಹಾಗೆ ವರ್ತಿಸಬಾರದೆಂದು ಆ್ಯಂಡರ್ಸನ್ ಅವರಿಗೆ ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಬುದ್ಧಿ ಹೇಳಲು ಯತ್ನಿಸಿದ್ದಾರೆ.

ಪರಸ್ಪರ ನಿಂದಿಸಿಕೊಂಡ ಆಟಗಾರರು!

ಪರಸ್ಪರ ನಿಂದಿಸಿಕೊಂಡ ಆಟಗಾರರು!

ಇನ್ನು ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆಂಡರ್ಸನ್ ನಡುವಿನ ಕಿತ್ತಾಟ ಇಷ್ಟಕ್ಕೇ ಮುಗಿಯಲಿಲ್ಲ. ವಿರಾಟ್ ಕೊಹ್ಲಿ ಇದೇನು ನಿನ್ನ ಮನೆಯ ಹಿತ್ತಲಲ್ಲ ಎಂದು ಹೇಳಿದ ಬೆನ್ನಲ್ಲೇ ಮತ್ತೆ ವಿರಾಟ್ ಕೊಹ್ಲಿ ಬಳಿ ಬಂದ ಜೇಮ್ಸ್ ಆ್ಯಂಡರ್ಸನ್ ಮತ್ತೇನೋ ಮಾತನಾಡಿ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ. ವಿರಾಟ್ ಕೊಹ್ಲಿ ಇದು ನಿನ್ನ ಮನೆಯ ಹಿತ್ತಲಲ್ಲ ಎಂದು ಹೇಳುವ ಸಂದರ್ಭದಲ್ಲಿ ಆ್ಯಂಡರ್ಸನ್ ವಿರುದ್ಧ ನಿಂದನೆಯನ್ನು ಮಾಡಿದ್ದಾರೆ, ಮತ್ತು ವಿರಾಟ್ ಕೊಹ್ಲಿ ಜೇಮ್ಸ್ ಆ್ಯಂಡರ್ಸನ್ ಕುರಿತು ಈ ರೀತಿ ನಿಂದನೆ ಮಾಡಿರುವುದು ವಿಕೆಟ್‍ಗೆ ಅಳವಡಿಸಲಾಗಿದ್ದ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ. ಆದರೆ ಮತ್ತೆ ಆ್ಯಂಡರ್ಸನ್ ವಿರಾಟ್ ಕೊಹ್ಲಿ ಬಳಿ ಬಂದು ನಡೆಸಿದ ಮಾತಿನ ವಾಗ್ಧಾಳಿಯಾವುದೂ ಮೈಕ್‌ನಲ್ಲಿ ರೆಕಾರ್ಡ್ ಆಗಿಲ್ಲ. ಹೀಗೆ ಮೈದಾನದಲ್ಲಿ ಕಿತ್ತಾಡಿಕೊಳ್ಳುವುದರ ಮೂಲಕ ನಾಲ್ಕನೇ ದಿನ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದ್ದಾರೆ. ಹೀಗೆ ವರ್ತಿಸಿದ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಪಂದ್ಯದ ನಂತರ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಮತ್ತು ಎಷ್ಟು ದಂಡ ವಿಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Virat Kohli ಔಟ್ ಆದ ನಂತರ ಹೀಗಾ ಮಾಡೋದು | Oneindia Kannada
ಮುಂದುವರಿದ ವಿರಾಟ್ ಕೊಹ್ಲಿ ಫ್ಲಾಪ್ ಶೋ

ಮುಂದುವರಿದ ವಿರಾಟ್ ಕೊಹ್ಲಿ ಫ್ಲಾಪ್ ಶೋ

ಕಳೆದ ಹಲವು ತಿಂಗಳುಗಳಿಂದ ಟೆಸ್ಟ್ ಕ್ರಿಕೆಟ್‍ನಲ್ಲಿ ಮಂಕಾಗಿ ಕೆಟ್ಟ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ತಮ್ಮ ಕಳಪೆ ಆಟವನ್ನು ಮತ್ತೆ ಮುಂದುವರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಾಟಿಂಗ್ ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಆ್ಯಂಡರ್ಸನ್ ಎಸೆತದಲ್ಲಿ ವಿಕೆಟ್ ಒಪ್ಪಿಸುವ ಮೂಲಕ ವಿರಾಟ್ ಕೊಹ್ಲಿ ಯಾವುದೇ ರನ್ ಗಳಿಸದೆ ಗೋಲ್ಡನ್ ಡಕ್ ಔಟ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಇಟ್ಟಿದ್ದರು. ಹಾಗೂ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಕೂಡ ವಿರಾಟ್ ಕೊಹ್ಲಿ ತಮ್ಮ ಕಳಪೆ ಆಟವನ್ನು ಮುಂದುವರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 42 ರನ್ ಕಲೆಹಾಕಿ ಜವಾಬ್ದಾರಿಯುತ ಆಟವನ್ನಾಡಿದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 20 ರನ್‌ಗೆ ತಮ್ಮ ಆಟವನ್ನು ಅಂತ್ಯಗೊಳಿಸಿದ್ದಾರೆ. ಹೀಗೆ ಈ ಪಂದ್ಯದಲ್ಲಿಯೂ ಸಹ ದೊಡ್ಡ ಮೊತ್ತವನ್ನು ಕಲೆಹಾಕಿ ಯಶಸ್ವಿ ಬ್ಯಾಟಿಂಗ್ ಹಾದಿಗೆ ಮರಳಲಾಗದೆ ವಿರಾಟ್ ಕೊಹ್ಲಿ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

Story first published: Monday, August 16, 2021, 10:45 [IST]
Other articles published on Aug 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X