ಕಾನ್ಪುರ ಟೆಸ್ಟ್: ಜೇಮಿಸನ್ ಎಸೆತದ ಮರ್ಮ ಅರಿಯುವಲ್ಲಿ ಎಡವಿದೆ: ಶುಬ್ಮನ್ ಗಿಲ್

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಶ್ರೇಯಸ್ ಐಯ್ಯರ್ ಹಾಗೂ ರವೀಂದ್ರ ಜಡೇಜಾ ಅವರ ಶತಕದ ಜೊತೆಯಾಟದಿಂದಾಗಿ ಸುಸ್ಥಿತಿಯಲ್ಲಿದೆ. ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 258/4 ರನ್‌ಗಳಿಸಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದಿರಿಸಿದೆ. ಶ್ರೇಯಸ್ ಐಯ್ಯರ್ 75 ರನ್‌ಗಳಿಸಿದ್ದರೆ ರವೀಂದ್ರ ಜಡೇಜಾ 50 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಇನ್ನು ಈ ಜೋಡಿಯ ಪ್ರದರ್ಶನಕ್ಕೂ ಮುನ್ನ ಟೀಮ್ ಇಂಡಿಯಾ ಪರವಾಗಿ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಆತಿಥೇಯ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿದ್ದರು. ಶುಬ್ಮನ್ ಗಿಲ್ 93 ಎಸೆತಗಳಲ್ಲಿ 52 ರನ್‌ಗಳಿಸಿ ಕಿವೀಸ್ ತಂಡದ ವೇಗಿ ಕೈಲ್ ಜೇಮಿಸನ್ ಎಸೆತಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ. ಭೋಜನ ವಿರಾಮದ ನಂತರ ಭಾರತೀಯ ಆಟಗಾರರ ಮೇಲೆ ಜೇಮಿಸನ್ ಹಾಗೂ ಟಿಮ್ ಸೌಥಿ ಜೋಡಿ ಮೇಲುಗೈ ಸಾಧಿಸಿತ್ತು. 30ನೇ ಓವರ್‌ನಲ್ಲಿ ಜೇಮಿಸನ್ ಶುಬ್ಮನ್ ಗಿಲ್ ಅವರ ರಕ್ಷಣಾ ಕೌಶಲ್ಯವನ್ನು ಭೇದಿಸಿ ಬೌಲ್ಡ್ ಮಾಡಿ ವಿಕೆಟ್ ಗಿಟ್ಟಿಸಿಕೊಂಡರು.

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶ್ರೇಯಸ್‌ ಅಯ್ಯರ್: ಐಸಿಸಿಯಿಂದ ಅಭಿನಂದನೆ

ಇನ್ನು ನ್ಯೂಜಿಲೆಂಡ್ ತಂಡದ ವೇಗದ ಬೌಲರ್‌ನ ಈ ಚಾಣಾಕ್ಷ ಎಸೆತವನ್ನು ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಪ್ರಶಂಸಿಸಿದ್ದಾರೆ. ಜೇಮಿಸನ್ ಅವರ ಈ ಎಸೆತವನ್ನು ತಾನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾದೆ. ಅಷ್ಟು ಶೀಘ್ರವಾಗಿ ರಿವರ್ಸ್‌ಸ್ವಿಂಗ್ ಎಸೆತವನ್ನು ತಾನು ನಿರೀಕ್ಷಿಸಿರಲಿಲ್ಲ ಎಂದು ಶುಬ್ಮನ್ ಗಿಲ್ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಮೊದಲ ದಿನದಾಟ ಮುಕ್ತಾಯದ ಬಳಿಕ ಮಾತನಾಡಿದ ಶುಬ್ಮನ್ ಗಿಲ್ "ಜೇಮಿಸನ್ ಇಂದು ಮೊದಲ ಸ್ಪೆಲ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಉತ್ತಮವಾದ ಸ್ಥಳಕ್ಕೆ ಚೆಂಡನ್ನು ಎಸೆದಿದ್ದಾರೆ. ಅದರಲ್ಲೂ ಭೋಜನ ವಿರಾಮದ ನಂತರ ಅವರು ಬೌಲ್ ಮಾಡಿದ ಸ್ಪೆಲ್ ಉನ್ನತ ದರ್ಜೆಯದ್ದಾಗಿತ್ತು" ಎಂದಿದ್ದಾರೆ ಶುಬ್ಮನ್ ಗಿಲ್. ಇನ್ನು ಇದೇ ಸಂದರ್ಭದಲ್ಲಿ ಗಿಲ್ ತಮ್ಮ ವಿಕೆಟ್ ಕಳೆದುಕೊಂಡ ಬಗ್ಗೆಯೂ ಮಾತನಾಡಿದರು.

ಕೈಲ್ ಜೇಮಿಸನ್ ಶೀಘ್ರವಾಗಿ ರಿವರ್ಸ್ ಸ್ವಿಂಗ್ ಬೌಲಿಂಗ್ ಮಾಡಿದ್ದರು. ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಎಡಿವಿರುವುದಾಗಿ ಗಿಲ್ ಹೇಳಿದ್ದಾರೆ. 30 ಓವರ್‌ಗಳಷ್ಟು ಹಳೆಯ ಚೆಂಡಿನಲ್ಲಿಯೇ ಜೇಮಿಸನ್ ರಿವರ್ಸ್‌ಸ್ವಿಂಗ್ ಮಾಡಿದ್ದರು. "ಕೆಲ ಸಂದರ್ಭಗಳಲ್ಲಿ ಯಾವಾಗ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತದೆ ಎಂದು ತಿಳಿಯುವುದು ಕಷ್ಟವಾಗುತ್ತದೆ. ವಿಶೇಷವಾಗಿ ಭೋಜನ ವಿರಾಮದ ಬಳಿಕ ಆಟದ ಆರಂಭದಲ್ಲಿ ಚೆಂಡು ರಿವರ್ಸ್‌ಸ್ವಿಂಗ್ ಪಡೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ ಶುಬ್ಮನ್ ಗಿಲ್.

IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?

"ಇದುವೇ ಟೆಸ್ಟ್ ಕ್ರಿಕೆಟ್‌ನ ವಿಶೇಷತೆ. ನೀವು ಪರಿಸ್ಥಿತಿಗಳನ್ನು ಶೀಘ್ರವಾಗಿ ಅರ್ಥ ಮಾಡಿಕೊಳ್ಳಬೇಕು. ನಾನು ಸಾಮಾನ್ಯವಾಗಿ ಶೀಘ್ರವಾಗಿ ಪಿಚ್ ಅರ್ಥೈಸಿಕೊಳ್ಳುತ್ತೇನೆ. ಆದರೆ ನನಗೆ ಆ ಎಸೆತವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಚೆಂಡು ರುವರ್ಸ್ ಸ್ವಿಂಗ್ ಪಡೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ ಶುಬ್ಮನ್ ಗಿಲ್.

ಇನ್ನು ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಸ್ಪಿನ್ ಬೌಲಿಂಗ್ ದಾಳಿಯನ್ನು ಎದುರಿಸಲು ನೆಟ್‌ನಲ್ಲಿ ಅಭ್ಯಾಸ ಮಾಡಿದ ಬಗ್ಗೆಯೂ ಗಿಲ್ ಹೇಳಿಕೊಂಡಿದ್ದಾರೆ. ನೆಟ್‌ನಲ್ಲಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಎಸೆತಗಳಿಗೆ ಅಭ್ಯಾಸ ಮಾಡಿರುವುದು ಇಲ್ಲಿ ಸಾಕಷ್ಟು ಸಹಾಯಕವಬಾಯಿತು. ಇಬ್ಬರು ಶ್ರೇಷ್ಠ ಸ್ಪಿನ್ನರ್‌ಗಳೊಂದಿಗೆ ಅಭ್ಯಾಸ ನಡೆಸಿರುವುದು ಇಂತಾ ಪಿಚ್‌ಗಳಲ್ಲಿ ಸಹಜವಾಗಿಯೇ ನೆರವಾಗುತ್ತದೆ ಎಂದಿದ್ದಾರೆ ಶುಬ್ಮನ್ ಗಿಲ್.

ಕಳಪೆ ಆಟ ಆಡಿದ ರಹಾನೆಗೆ ಲಕ್ಷ್ಮಣ್ ಪಾಠ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Thursday, November 25, 2021, 21:36 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X