ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ T20: ರಿಷಭ್ ಪಂತ್‌ಗೆ ಬ್ಯಾಟಿಂಗ್ ಕ್ರಮಾಂಕ ಸೂಚಿಸಿದ ದಿನೇಶ್ ಕಾರ್ತಿಕ್

IND vs NZ 2nd T20: Dinesh Karthik Suggests Batting Order For Rishabh Pant

ಭಾರತ ತಂಡದ ಹಿರಿಯ ವಿಕೆಟ್‌-ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ತಂಡದ ಭಾಗವಾಗಿಲ್ಲ.

2022ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ದಿನೇಶ್ ಕಾರ್ತಿಕ್ ಮಿಂಚುವಲ್ಲಿ ವಿಫಲರಾದರು ಮತ್ತು ಸದ್ಯದ ಪರಿಸ್ಥಿತಿ ನೋಡಿದ್ರೆ ಕ್ರಿಕೆಟ್‌ನ ಚುಟುಕು ಫಾರ್ಮೆಟ್‌ನಲ್ಲಿ ಮತ್ತೆ ಡಿಕೆ ಆಡುವುದನ್ನ ಕಾಣುವುದು ಕಷ್ಟಸಾಧ್ಯ.

IND vs NZ: ಆತನ ಮೇಲೆ ದೊಡ್ಡ ನಿರೀಕ್ಷೆ ಇದೆ; ಶುಭಮನ್ ಗಿಲ್ ಶ್ಲಾಘಿಸಿದ ದಿನೇಶ್ ಕಾರ್ತಿಕ್IND vs NZ: ಆತನ ಮೇಲೆ ದೊಡ್ಡ ನಿರೀಕ್ಷೆ ಇದೆ; ಶುಭಮನ್ ಗಿಲ್ ಶ್ಲಾಘಿಸಿದ ದಿನೇಶ್ ಕಾರ್ತಿಕ್

ರಿಷಭ್ ಪಂತ್ ಜೊತೆಗೆ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಕೂಡ ಅವರ ಸ್ಥಾನವನ್ನು ಪಡೆಯುವ ಸ್ಪರ್ಧೆಯಲ್ಲಿದ್ದಾರೆ. ರಿಷಭ್ ಪಂತ್ ಟಿ20 ಪಂದ್ಯಗಳಿಗಾಗಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ. ಆದಾಗ್ಯೂ, ರಿಷಭ್ ಪಂತ್‌ಗೆ ಯಾವ ಬ್ಯಾಟಿಂಗ್ ಕ್ರಮಾಂಕ ಸೂಕ್ತವಾಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

IND vs NZ 2nd T20: Dinesh Karthik Suggests Batting Order For Rishabh Pant

ದಿನೇಶ್ ಕಾರ್ತಿಕ್ ಪ್ರಕಾರ, ರಿಷಭ್ ಪಂತ್ ಅವರು ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬಲ್ಲವರಾಗಿರುವುದರಿಂದ ಆರಂಭಿಕ ಸ್ಲಾಟ್ ಉತ್ತಮವಾಗಿದೆ. ರಿಷಭ್ ಪಂತ್ ಅವರು ಪವರ್‌ಪ್ಲೇಯಲ್ಲಿ ದೊಡ್ಡ ಸ್ಕೋರ್ ಮಾಡಬಹುದು ಮತ್ತು ಅದು ಭಾರತಕ್ಕೆ ಉತ್ತಮ ಆರಂಭವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟರು.

"ಆಕ್ರಮಣಕಾರಿ ಶಾಟ್‌ಗಳನ್ನು ಆಡುವ ರಿಷಭ್ ಪಂತ್ ಅವರ ಸಾಮರ್ಥ್ಯ ಎಲ್ಲರಿಗೂ ತಿಳಿದಿದೆ. ಅವರು ಮೈದಾನದಲ್ಲಿರುವ ತನಕ ಪವರ್‌ಪ್ಲೇನಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ದಾಳಿ ಮಾಡಬಹುದು. ಆದ್ದರಿಂದ ನಾವು ಅವರಿಗೆ ಇನ್ನಿಂಗ್ಸ್ ತೆರೆಯುವಂತೆ ಸಲಹೆ ನೀಡುತ್ತೇನೆ. ಕುತೂಹಲಕಾರಿ ಅಂಶವೆಂದರೆ, ಅವರ ಅಂಕಿಅಂಶಗಳು ಸಹ ಅವರ ಸ್ಟ್ರೈಕ್ ರೇಟ್ ಅನ್ನು ಪ್ರತಿಬಿಂಬಿಸುತ್ತವೆ ಮತ್ತು ಎದುರಾಳಿ ಬೌಲರ್‌ಗಳನ್ನು ಒತ್ತಡದಲ್ಲಿಡಲು ಇಷ್ಟಪಡುತ್ತಾರೆ," ಎಂದು ದಿನೇಶ್ ಕಾರ್ತಿಕ್ ಕ್ರಿಕ್‌ಬಜ್‌ಗೆ ತಿಳಿಸಿದರು.

ಚೇತನ್ ಶರ್ಮಾ ವಜಾ; ಭಾರತ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆಗಾರರ ​​ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐಚೇತನ್ ಶರ್ಮಾ ವಜಾ; ಭಾರತ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆಗಾರರ ​​ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

ರಿಷಭ್ ಪಂತ್ ಪವರ್-ಹಿಟ್ಟಿಂಗ್ ಬ್ಯಾಟಿಂಗ್ ಇಷ್ಟಪಡುವ ಆಟಗಾರನಾಗಿರುವುದರಿಂದ ಆರಂಭಿಕ ಕ್ರಮಾಂಕಕ್ಕೆ ಹೊಂದಿಕೊಂಡರೆ ಅವರು ಅಪಾಯಕಾರಿ ಆಟಗಾರನಾಗುತ್ತಾರೆ. ಅವರನ್ನು ತಂಡದ ಮ್ಯಾನೇಜ್‌ಮೆಂಟ್ ಬೆಂಬಲಿಸುವ ಅಗತ್ಯವಿದೆ ಎಂದು ಭಾರತ ತಂಡದ ಹಿರಿಯ ವಿಕೆಟ್-ಕೀಪರ್ ದಿನೇಶ್ ಕಾರ್ತಿಕ್ ಹೇಳಿದರು.

IND vs NZ 2nd T20: Dinesh Karthik Suggests Batting Order For Rishabh Pant

"ರಿಷಭ್ ಪಂತ್ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದನ್ನು ನೋಡಲು ತುಂಬಾ ಆಸಕ್ತಿದಾಯಕವಾಗಿದೆ. ತಂಡದ ಮ್ಯಾನೇಜ್‌ಮೆಂಟ್ ರಿಷಭ್ ಪಂತ್ ಅವರನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಭಾರತ ತಂಡಕ್ಕೆ ದೊಡ್ಡ ಪ್ರಶ್ನೆಯಾಗಿದೆ. ನಾನು ಅವರನ್ನು ಅಗ್ರ ಕ್ರಮಾಂಕದದಲ್ಲಿ ಆಡುವುದನ್ನು ಎದುರು ನೋಡುತ್ತೇವೆ," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.

Story first published: Sunday, November 20, 2022, 13:03 [IST]
Other articles published on Nov 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X