ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಏಕದಿನ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಆಡುವ ಬಳಗವನ್ನು ಆಯ್ಕೆ ಮಾಡಿದ ಆಕಾಶ್ ಚೋಪ್ರ

IND vs NZ ODI: Aakash Chopra picks Team India’s Probable XI For The First match against New Zealand

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮುಕ್ತಾಯದ ಬಳಿಕ ಏಕದಿನ ಸರಣಿ ಆರಂಭವಾಗಲಿದೆ. ಶುಕ್ರವಾರ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದ್ದು ಶಿಖರ್ ಧವನ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಕಿವೀಸ್ ಪಡೆಯ ವಿರುದ್ಧ ಸೆಣೆಸಾಡಲು ಸಜ್ಜಾಗಿದೆ. ಕೆಲ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ನಡೆಯುತ್ತಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಈ ಏಕದಿನ ಸರಣಿಗೂ ಮುನ್ನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಈ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಮೊದಲ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾದರೆ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿ ಅಂತರದಿಂದ ಗೆಲುವು ಸಾಧಿಸಿತ್ತು. ಅಂತಿಮ ಪಂದ್ಯ ಕೂಡ ಮಳೆ ಅಡ್ಡಿಯಾದ ಕಾರಣ ಡಕ್ವರ್ತ್ ಲೂಯೀಸ್ ನಿಯಮದ ಆಧಾರದಲ್ಲಿ ಈ ಪಂದ್ಯ ಟೈ ಫಲಿತಾಂಶವನ್ನು ಪಡೆದುಕೊಂಡಿತ್ತು. ಇದೀಗ ಏಕದಿನ ಸರಣಿಯ ಹಿನ್ನೆಲೆಯಲ್ಲಿ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಯಾವೆಲ್ಲಾ ಆಟಗಾರರು ಸ್ಥಾನವನ್ನು ಪಡೆಯಬಹುದು ಎಂದು ಊಹಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?

ರಿಷಭ್ ಪಂತ್‌ಗೆ ಎಲ್ಲಿ ಸ್ಥಾನ ಎಂದ ಚೋಪ್ರ

ರಿಷಭ್ ಪಂತ್‌ಗೆ ಎಲ್ಲಿ ಸ್ಥಾನ ಎಂದ ಚೋಪ್ರ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿ ಆಯ್ಕೆಯಾಗಿರುವ ರಿಷಭ್ ಪಂತ್‌ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸುವುದು ಎಂದು ಪ್ರಶ್ನಿಸಿದ್ದಾರೆ ಆಕಾಶ್ ಚೋಪ್ರ. "ರಿಷಭ್ ಪಂತ್ ಉಪನಾಯಕ. ಆದರೆ ಅವರನ್ನು ಎಲ್ಲಿ ಆಡಿಸುವುದು? ಆತ ಉಪನಾಯಕ ಎಂಬ ಕಾರಣಕ್ಕೆ ಆಡಬೇಕಾ? ಇನ್ನು ಶ್ರೇಯಸ್ ಐಯ್ಯರ್ ಬಗ್ಗೆ, ಅವರು ಟಿ20 ಸರಣಿಯಲ್ಲಿ ಹೇಗೆಯೇ ಆಡಿದ್ದರೂ ಅವರ ಏಕದಿನ ಮಾದರಿಯಲ್ಲಿ ಅಂಕಿಅಂಶಗಳು ಉತ್ತಮವಾಗಿದೆ. ಅವರ ಮೊದಲ ಏಕದಿನ ಶತಕ ಬಂದಿರುವುದು ನ್ಯೂಜಿಲೆಂಡ್‌ನಲ್ಲಿಯೇ. ಅದು ಕೂಡ ಹ್ಯಾಮಿಲ್ಟನ್‌ನಲ್ಲಿ" ಎಂದಿದ್ದಾರೆ ಆಕಾಶ್ ಚೋಪ್ರ.

ಅಗ್ರ ಕ್ರಮಾಂಕದಲ್ಲಿ ಯಾರು?

ಅಗ್ರ ಕ್ರಮಾಂಕದಲ್ಲಿ ಯಾರು?

ಆಕಾಶ್ ಚೋಪ್ರ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಆರು ಆಟಗಾರರ ಬಗ್ಗೆ ಮಾತನಾಡಿದ್ದಾರೆ. "ಆರಂಭಿಕರಾಗಿ ಕಣಕ್ಕಿಳಿಯಬಹುದಾದ ಆರು ಆಟಗಾರರ ಪೈಕಿ ಆರಂಭಿಕರಾಗಿ ಶಿಖರ್ ಧವನ್ ಹಾಗೂ ಶುಬ್ಮನ್ ಗಿಲ್ ಆಗಿರಲಿದ್ದಾರೆ. ಶ್ರೇಯಸ್ ಐಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಅಗ್ರ ನಾಲ್ಕರಲ್ಲಿರುವ ಉಳಿದ ಇಬ್ಬರು ಬ್ಯಾಟರ್‌ಗಳು. ರಿಷಭ್ ಪಂತ್ ಐದನೇ ಕ್ರಮಾಂಕದಲ್ಲಿ ಆಡಿದರೆ ಸಂಜು ಸ್ಯಾಮ್ಸನ್‌ಗೆ 6ನೇ ಸ್ಥಾನ" ಎಂದಿದ್ದಾರೆ ಆಕಾಶ್ ಚೋಪ್ರ.

ಚೋಪ್ರಾ ಆಯ್ಕೆ ಬೌಲಿಂಗ್ ವಿಭಾಗ ಹೇಗಿದೆ?

ಚೋಪ್ರಾ ಆಯ್ಕೆ ಬೌಲಿಂಗ್ ವಿಭಾಗ ಹೇಗಿದೆ?

ಇನ್ನು ಆಕಾಶ್ ಚೋಪ್ರ ಬೌಲಿಂಗ್ ವಿಭಾಗದಲ್ಲಿ ಮೂವರು ಆಲ್‌ರೌಂಡರ್‌ಗಳು ಸೇರಿದಂತೆ ಇಬ್ಬರು ಸ್ಪೆಶಲಿಸಟ್ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. "ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಾಹರ್ ಭಿನ್ನ ರೀತಿಯಲ್ಲಿ ಬೌಲಿಂಗ್ ನಡೆಸಬಲ್ಲವರಾಗಿದ್ದು ಇವರನ್ನು ಬಳಸಿಕೊಳ್ಳಬಹುದು. ಅರ್ಶ್‌ದೀಪ್ ಹಾಗೂ ಯುಜುವೇಂದ್ರ ಚಾಹಲ್ ಅವಕಾಶ ಪಡೆಯಹುದು" ಎಂದಿದ್ದಾರೆ ಆಕಾಶ್ ಚೋಪ್ರ.

ಆಕಾಶ್ ಚೋಪ್ರ ಆಯ್ಕೆ ಮಾಡಿದ ಆಡುವ ಬಳಗ

ಆಕಾಶ್ ಚೋಪ್ರ ಆಯ್ಕೆ ಮಾಡಿದ ಆಡುವ ಬಳಗ

ಶಿಖರ್ ಧವನ್(ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಯುಜುವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್.

Story first published: Thursday, November 24, 2022, 17:10 [IST]
Other articles published on Nov 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X