ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಎರಡು ವಿಷಯಗಳಲ್ಲಿ ಭಾರತ ಶ್ರೇಷ್ಠ ಎಂದು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ ದ. ಆಫ್ರಿಕಾ ಕ್ರಿಕೆಟಿಗ

Ind vs SA: South African cricketer Wayne Parnell praises India said Two Things India Do Very Well

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದ್ದು ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ಹಿನ್ನಡೆ ಅನುಭವಿಸಿದೆ. ಇದೀಗ ಎರಡನೇ ಪಂದ್ಯ ಕಟಕ್‌ನಲ್ಲಿ ಆರಂಭವಾಗಲಿದ್ದು ಈ ಪಂದ್ಯಕ್ಕೆ ಮುನ್ನ ದಕ್ಷಿಣ ಆಫ್ರಿಕಾದ ಆಟಗಾರ ವೇಯ್ನ್ ಪಾರ್ನೆಲ್ ಪ್ರತಿಕ್ರಿಯೆ ನೀಡಿದ್ದು ಭಾರತದ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಭಾರತ ತಂಡದ ವಿರುದ್ಧ ಎರಡನೇ ಟಿ20 ಪಂದ್ಯವನ್ನಾಡಲು ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಕಟಕ್‌ಗ ಬಂದಿಳಿದಿದ್ದು ಅಂತಿಮ ಹಂತದ ಸಿದ್ಧತೆಯನ್ನು ನಡೆಸಿದೆ. ಈ ಸಂದರ್ಭದಲ್ಲಿ ಕಟಕ್‌ನಲ್ಲಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಂದ ದೊರೆತ ಸ್ವಾಗತ ಹಾಗೂ ಆತಿಥ್ಯಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ವೇಯ್ನ್ ಪಾರ್ನೆಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತವನ್ನು ಹೊಗಳಿದ್ದಾರೆ.

AUS vs SL: 18 ಎಸೆತಕ್ಕೆ 59 ರನ್ ಚೇಸ್ ಮಾಡಿದ ಲಂಕಾ; ಮುನ್ನುಗ್ಗಿ ಪಂದ್ಯ ಗೆಲ್ಲಿಸಿದ ನಾಯಕ ಶನಕAUS vs SL: 18 ಎಸೆತಕ್ಕೆ 59 ರನ್ ಚೇಸ್ ಮಾಡಿದ ಲಂಕಾ; ಮುನ್ನುಗ್ಗಿ ಪಂದ್ಯ ಗೆಲ್ಲಿಸಿದ ನಾಯಕ ಶನಕ

ಐದು ವರ್ಷಗಳ ಬಳಿಕ ಟಿ20 ತಂಡಕ್ಕೆ ಮರಳಿದ ಪಾರ್ನೆಲ್

ಐದು ವರ್ಷಗಳ ಬಳಿಕ ಟಿ20 ತಂಡಕ್ಕೆ ಮರಳಿದ ಪಾರ್ನೆಲ್

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ವೇಯ್ನ್ ಪಾರ್ನೆಲ್ ವರೊಬ್ಬರಿ ಐದು ವರ್ಷಗಳ ಬಳಿಕ ಮತ್ತೆ ಟಿ20 ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ವಿಕೆಟ್ ಕಿತ್ತು ಸಂಭ್ರಮಿಸಿದ್ದಾರೆ. 32ರ ಹರೆಯದ ದಕ್ಷಿಣ ಆಫ್ರಿಕಾದ ಈ ವೇಗಿ ಈವರೆಗೆ ಚುಟುಕು ಕ್ರಿಕೆಟ್‌ನಲ್ಲಿ 42 ವಿಕೆಟ್ ಸಂಪಾದಿಸಿದ್ದಾರೆ.

ಕ್ರಿಕೆಟ್ ಮತ್ತು ಆತಿಥ್ಯದಲ್ಲಿ ಅದ್ಭುತ

ಕ್ರಿಕೆಟ್ ಮತ್ತು ಆತಿಥ್ಯದಲ್ಲಿ ಅದ್ಭುತ

ಭಾರತದಲ್ಲಿ ತಮಗೆ ದೊರೆತ ಆತಿಥ್ಯದಿಂದಾಗಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಅಚ್ಚರಿಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದಲ್ಲಿ ಕ್ರಿಕೆಟ್ ಹಾಗೂ ಆತಿಥ್ಯ ಈ ಎರಡು ವಿಚಾರಗಳು ಅದ್ಭುತವಾಗಿದೆ ಎಂದಿದ್ದಾರೆ "ನಮಗೆ ಇಲ್ಲಿ ಉತ್ತಮ ಸ್ವಾಗತ ದೊರೆತಿದೆ. ಇಲ್ಲಿ ನಾವು ಉಳಿದುಕೊಳ್ಳುವ ಸ್ಥಳ ಕೂಡ ಸುಂದರವಾಗಿದೆ. ಎರಡು ವಿಚಾರಗಳಿಗೆ ಭಾರತ ಶ್ರೇಷ್ಠವಾಗಿದೆ. ಒಂದು ಕ್ರಿಕೆಟ್ ಮತ್ತೊಂದು ಆತಿಥ್ಯ ಎಂದಿದ್ದಾರೆ. ಇಲ್ಲಿ ನಿಜವಾಗಿಯೂ ಅದ್ಭುತ ಅನುಭವ" ಎಂದಿದ್ದಾರೆ ವೇಯ್ನ್ ಪಾರ್ನೆಲ್.

ಕಟಕ್‌ನಲ್ಲೂ ದಕ್ಷಿಣ ಆಫ್ರಿಕಾ ತಂಡದ್ದೇ ಮೇಲುಗೈ

ಕಟಕ್‌ನಲ್ಲೂ ದಕ್ಷಿಣ ಆಫ್ರಿಕಾ ತಂಡದ್ದೇ ಮೇಲುಗೈ

ಕಟಕ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದು 2015ರಲ್ಲಿ. ಅಂದಿನ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿತ್ತು. ಈ ಗೆಲುವಿನೊಂದಿಗೆ ಟಿ20 ಸರಣಿಯನ್ನು ಅಂದು ದಕ್ಷಿಣ ಆಫ್ರಿಕಾ ತಂಡ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಭಾರತ ಹಾಗೂ ದಕ್ಷೀನ ಆಫ್ರಿಕಾ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲಿ ಗೆದ್ದ ಆತ್ಮ ವಿಶ್ವಾಸದಲ್ಲಿದ್ದರೆ ಭಾರತ ತಂಡ ಸಮಬಲ ಸಾಧಿಸುವ ಗುರಿಯನ್ನಿಟ್ಟುಕೊಂಡು ಕಟಕ್‌ಗೆ ಆಗಮಿಸಿದೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಇತ್ತಂಡಗಳ ಸ್ಕ್ವಾಡ್ ಹೀಗಿದೆ

ಭಾರತ ತಂಡ: ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅರ್ಶ್ದೀಪ್ ಸಿಂಗ್, ರವಿ ಬಿಷ್ಣೋಯಿ, ರವಿ ಬಿಷ್ಣೋಯಿ ಸಿಂಗ್ ಉಮ್ರಾನ್ ಮಲಿಕ್

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್ಗಿಡಿ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಐಡೆನ್ ಮಾರ್ಕ್ರಾಮ್, ರೀಜಾ ಹೆಂಡ್ರಿಕ್ಸ್

Story first published: Sunday, June 12, 2022, 13:44 [IST]
Other articles published on Jun 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X