ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Hardik Pandya: ಹಾರ್ದಿಕ್ ಪಾಂಡ್ಯರನ್ನು ಖಾಯಂ ಟಿ20 ನಾಯಕನನ್ನಾಗಿ ಮಾಡುವ ಬಗ್ಗೆ ಮಾಜಿ ಕ್ರಿಕೆಟಿಗ ಎಚ್ಚರಿಕೆ

IND vs SL: Irfan Pathan Warns About Making Hardik Pandya Permanent T20 Captain

ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚಿನ ಟಿ20 ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕತ್ವವವನ್ನು ನಿಭಾಯಿಸುತ್ತಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ಟಿ20 ತಂಡಕ್ಕೆ ಶಾಶ್ವತ ಆಧಾರದ ಮೇಲೆ ನಾಯಕತ್ವವನ್ನು ನೀಡಬೇಕು ಎಂಬ ಮಾತುಕತೆಗಳು ನಡೆಯುತ್ತಿವೆ.

ಬೆನ್ನುನೋವಿನಿಂದಾಗಿ ಅನೇಕ ತಿಂಗಳುಗಳ ಕಾಲ ವಿಶ್ರಾಂತಿ ಪಡೆದ ನಂತರ, ಐಪಿಎಲ್ 2022ರಲ್ಲಿ ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ಗೆ ಅದ್ಭುತವಾದ ಮರಳಿದರು. ಗುಜರಾತ್ ಟೈಟನ್ಸ್ ತಂಡವನ್ನು ತಮ್ಮ ಚೊಚ್ಚಲ ಅಭಿಯಾನದಲ್ಲಿ ಐಪಿಎಲ್ 2022 ಪ್ರಶಸ್ತಿಗೆ ಮುನ್ನಡೆಸಿದರು.

BCCIನಿಂದ ದೊಡ್ಡ ನಿರ್ಧಾರ; ಈ ಎರಡು ಸ್ವರೂಪಗಳಿಗೆ ನಾಯಕನಾಗಿ ರೋಹಿತ್ ಶರ್ಮಾ ಮುಂದುವರಿಕೆBCCIನಿಂದ ದೊಡ್ಡ ನಿರ್ಧಾರ; ಈ ಎರಡು ಸ್ವರೂಪಗಳಿಗೆ ನಾಯಕನಾಗಿ ರೋಹಿತ್ ಶರ್ಮಾ ಮುಂದುವರಿಕೆ

ಐಪಿಎಲ್ ಪಂದ್ಯಾವಳಿಯಲ್ಲಿ ನಾಯಕತ್ವದ ಜೊತೆಗೆ ತಮ್ಮ ಆಲ್‌ರೌಂಡರ್ ಪರಾಕ್ರಮವನ್ನು ತೋರಿಸಿದರು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟಿ20 ಸರಣಿಯಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ 1-0 ಅಂತರದ ಗೆಲುವಿಗೆ ಮುನ್ನಡೆಸಿದರು.

IND vs SL: Irfan Pathan Warns About Making Hardik Pandya Permanent T20 Captain

ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಗೆಲ್ಲಲು ನಾಯಕನಾಗಿ ರೋಹಿತ್ ಶರ್ಮಾ ವೈಫಲ್ಯ ಮತ್ತು 2022ರಲ್ಲಿ ಸ್ಟಾರ್-ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಯಶಸ್ಸಿನಿಂದಾಗಿ ಟಿ20 ತಂಡದ ನಾಯಕತ್ವವನ್ನು ಶಾಶ್ವತ ಆಧಾರದ ಮೇಲೆ ನೀಡುವ ಯೋಚನೆಗಳನ್ನು ಹುಟ್ಟುಹಾಕಿದೆ.

ಟಿ20 ತಂಡದಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರು ವಿಶ್ರಾಂತಿ ಪಡೆದಿರುವುದರಿಂದ ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಯು ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯಗೆ ಆಲ್‌ರೌಂಡರ್ ಮತ್ತು ಫಿನಿಶರ್ ಆಗಿ ಅವರ ಪಾತ್ರ ಪರೀಕ್ಷೆಯಾಗಿದೆ.

ಇದೇ ವೇಳೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ನೀಡುವಾಗ ಒಂದು ವಿಷಯವನ್ನು ನೆನಪಿನಲ್ಲಿಡಿ. ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್‌ನ ಮೇಲೆ ನಿಕಟ ನಿಗಾ ಇರಿಸಿ ಎಂದು ರಾಷ್ಟ್ರೀಯ ಆಯ್ಕೆಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

IND vs SL: Irfan Pathan Warns About Making Hardik Pandya Permanent T20 Captain

"ಹಾರ್ದಿಕ್ ಪಾಂಡ್ಯ ಈ ಹಿಂದೆ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕಾಗಿ ಮತ್ತು ಭಾರತ ತಂಡಕ್ಕಾಗಿ ನಾಯಕತ್ವವನ್ನು ನಿರ್ವಹಿಸಿದ್ದಾರೆ. ಸಂವಹನವು ತುಂಬಾ ಉತ್ತಮವಾಗಿದೆ ಎಂದು ನಾನು ಭಾವಿಸಿದ್ದೇನೆ. ಪಾಂಡ್ಯ ತುಂಬಾ ಚುರುಕು ಬುದ್ಧಿಯುಳ್ಳವರಂತೆ ಕಾಣುತ್ತಿದ್ದರು," ಎಂದು ಮಾಜಿ ವೇಗಿ ಇರ್ಫಾನ್ ಪಠಾಣ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಸಂವಾದದಲ್ಲಿ ಹೇಳಿದರು.

"ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ಮಾತನಾಡುವುದಾದರೆ, ಅವರ ಆಟ ಮತ್ತು ನಿರ್ಧಾರದ ವಿಧಾನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. ಆದರೆ ಅದರೊಂದಿಗೆ ನೀವು ಅವರನ್ನು ದೀರ್ಘಾವಧಿಯ ನಾಯಕನನ್ನಾಗಿ ಮಾಡಿದರೆ, ತಂಡವು ಪಾಂಡ್ಯ ಅವರ ಫಿಟ್‌ನೆಸ್ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕಾಗುತ್ತದೆ. ನೀವು ಹಾರ್ದಿಕ್ ಬಗ್ಗೆ ಅಥವಾ ತಂಡದ ನಿರ್ವಹಣೆಯ ಬಗ್ಗೆ ಮಾತನಾಡುವುದಾದರೆ ಮುಂದೆ ಬಹಳ ನಿರ್ಣಾಯಕವಾಗಿರುತ್ತದೆ," ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟರು.

ಹಾರ್ದಿಕ್ ಪಾಂಡ್ಯ ಈಗಾಗಲೇ ಬೆನ್ನಿನ ಗಾಯದಿಂದ ಚೇತರಿಸಿಕೊಂಡು ಆಡುತ್ತಿದ್ದಾರೆ. ನಾಯಕತ್ವ ಜವಾಬ್ದಾರಿ ನೀಡುವುದರಿಂದ ಮತ್ತೆ ಅವರು ಬೆನ್ನಿನ ಸಮಸ್ಯೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚು ಒತ್ತಡ ಹೇರುವಾಗ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆಗಾರರು ಬಹಳ ಜಾಗರೂಕರಾಗಿರಬೇಕು ಎಂದು ಇರ್ಫಾನ್ ಪಠಾಣ್ ತಿಳಿಸಿದರು.

Story first published: Monday, January 2, 2023, 13:21 [IST]
Other articles published on Jan 2, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X