ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ಯಶಸ್ಸಿಗೆ ಅವರೇ ಕಾರಣ: ಕನ್ನಡಿಗನನ್ನು ಸ್ಮರಿಸಿದ ಯುವ ಆಟಗಾರ ರವಿ ಬಿಶ್ನೋಯ್

Ind vs WI: Ravi Bishnoi recalled Anil Kumble help said he would always guide me

ಯುವ ಆಟಗಾರ ರವಿ ಬಿಶ್ನೋಯ್ ಕಳೆದ ಒಂದು ವಾರದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಮೊದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂದಿನ ಐಪಿಎಲ್ ಆವೃತ್ತಿಗೆ ಮೊದಲ ಮೂರು ಆಯ್ಕೆಯಲ್ಲಿ ರವಿ ಬಿಶ್ನೋಯ್ ಅವರನ್ನು ಸೇರ್ಪಡೆಗೊಳಿಸಿತ್ತು. ರವಿ ಬಿಷ್ಣೋಯ್ 4 ಕೋಟಿ ರೂಪಾಯಿಗೆ ಲಕ್ನೋ ತಂಡದ ಪಾಲಾಗಿದ್ದಾರೆ. ಇದೀಗ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದ ಕರೆ ಸ್ವೀಕರಿಸಿದ್ದಾರೆ, ವೆಸ್‌ಟ ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ರವಿ ಬಿಶ್ನೋಯ್ ಆಯ್ಕೆಯಾಗುವ ಕನಸನ್ನು ನನಸಾಗಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರವಿ ಬಿಶ್ನೋಯ್ ಇದೊಂದು ಕನಸು ನನಸಾದ ಸಂದರ್ಭ ಎಂದಿದ್ದಾರೆ.

ಇನ್ನು ಈ ಹಿಂದಿನ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ಆಡಿದ್ದ ರವಿ ಬಿಷ್ಣೋಯ್ ತನ್ನ ಈ ಯಶಸ್ಸಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಅನಿಲ್ ಕುಂಬ್ಳೆ ಅವರ ಕೊಡಯಗೆಯನ್ನು ಸ್ಮರಿಸಿದ್ದಾರೆ. ತನ್ನ ಯಶಸ್ಸಿನಲ್ಲಿ ದಿಗ್ಗಜ ಆಟಗಾರ ಯಾವ ರೀತಿಯಲ್ಲಿ ನೆರವಾಗಿದ್ದಾರೆ ಎಂಬುದನ್ನು ರವಿ ವಿವರಿಸಿದ್ದಾರೆ. ತಮ್ಮ ಯೋಜನೆಗಳನ್ನು ಹೇಗೆ ಮುಕ್ತವಾಗಿ ಕಾರ್ಯಗತಗೊಳಿಸಬೇಕು ಎಂಬುದಕ್ಕೆ ಅನಿಲ್ ಕುಂಬ್ಳೆ ನೀಡಿದ ಸಲಹೆಯನ್ನು ಬಿಷ್ಣೋಯ್ ನೆನಪಿಸಿಕೊಂಡಿದ್ದಾರೆ ಅಲ್ಲದೆ ಈ ಸಲಹೆಯನ್ನು ತಾನು ಯಾವಾಗಲೂ ಪಾಲಿಸಲು ಬಯಸುತ್ತೇನೆ ಎಂಬ ಮಾತನ್ನು ಕೂಡ ಬಿಷ್ಣೋಯ್ ಹೇಳಿದ್ದಾರೆ.

ಧೋನಿಯೇ ಐಪಿಎಲ್‌ನ ಶ್ರೇಷ್ಠ ನಾಯಕ, ನಾನು ಸಿಎಸ್‌ಕೆ ಪರ ಆಡಬೇಕು ಎಂದ ಆರ್‌ಸಿಬಿಯ ಸ್ಟಾರ್ ಆಟಗಾರ!ಧೋನಿಯೇ ಐಪಿಎಲ್‌ನ ಶ್ರೇಷ್ಠ ನಾಯಕ, ನಾನು ಸಿಎಸ್‌ಕೆ ಪರ ಆಡಬೇಕು ಎಂದ ಆರ್‌ಸಿಬಿಯ ಸ್ಟಾರ್ ಆಟಗಾರ!

ರವಿ ಬೊಷ್ಣೋಯ್ ಐಪಿಎಲ್‌ನಲ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಒಟ್ಟು ಈವರೆಗೆ 23 ಪಂದ್ಯಗಳನ್ನು ಆಡಿರುವ ರವಿ ಬಿಷ್ಣೋಯ್ 24 ವಿಕೆಟ್ ಸಂಪಾಸಿದ್ದಾರೆ. 6.95ರ ಸರಾಸರಿಯಲ್ಲಿ ಈ ಯುವ ಆಟಗಾರ ಬೌಲಿಂಗ್ ದಾಳಿ ನಡೆಸಿದ್ದಾರೆ.

"ನಾನು ಅನಿಲ್ ಕುಂಬ್ಳೆ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಅವರು ನೀಡಿದ ಸಲಹೆ ಸೂಚನೆಗಳು ನನ್ನನ್ನು ಮತ್ತಷ್ಟು ಉತ್ತಮ ಕ್ರಿಕೆಟಿಗನನ್ನಾಗಿ ರೂಪುಗೊಳಿಸಲು ಸಹಕಾರಿಯಾಗಿದೆ. ನನ್ನ ವೃತ್ತಿ ಜೀವನದಲ್ಲಿ ಅವರು ಯಾವಾಗಲೂ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ. ಅವರ ಸಲಹೆಗಳು ನನಗೆ ಬಹಳಷ್ಟು ಸಹಕಾರಿಯಾಗಿದೆ. ನನ್ನ ಸಾಮರ್ಥ್ಯದೊಂದಿಗೆ ಆಡಲು ಅವರು ಯಾವಾಗಲೂ ಹೇಳುತ್ತಾರೆ. ನನ್ನ ಮೂಲಸ್ವರೂಪದ ಆಟಕ್ಕೆ ನಾನು ಬದ್ಧವಾಗಿರಬೇಕು ಹಾಗೂ ಯೋಜನೆಗಳನ್ನು ಕಾರ್ಯಗತಗೊಳಿಸುವತ್ತ ಚಿತ್ತವಿರಬೇಕು ಎಂಬುದು ಅವರ ಸಲಹೆಯಾಗಿದೆ" ಎಂದಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್ ಏಕದಿನ: ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್; ಕಾರಣವೇನು?ಭಾರತ vs ವೆಸ್ಟ್ ಇಂಡೀಸ್ ಏಕದಿನ: ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್; ಕಾರಣವೇನು?

ಇನ್ನು ಈ ಸಂದರ್ಭದಲ್ಲಿ ಬಿಷ್ಣೋಯ್ ತನಗೆ ದೊರೆಯುವ ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಸಿಕ್ಕ ಅವಕಾಶವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದಾಗಿಯೂ ಬಿಷ್ಣೋಯ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ರವಿ ಬಿಷ್ಣೋಯ್ ಐಪಿಎಲ್ ತಂಡದ ನಾಯಕ ಕೆಎಲ್ ರಾಹುಲ್ ಬಗ್ಗೆಯೂ ಮಾತುಗಳನ್ನು ಆಡಿದ್ದಾರೆ. ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಕಾರಣದಿಂದಾಗಿ ಹೊಂದಾಣಿಗೆ ಮಾಡಿಕೊಳ್ಳಲು ಸುಲಭವಾಗಲಿದೆ. ಯಾಕೆಂದರೆ ನಾಯಕನಾಗಿ ಕೆಎಲ್ ರಾಹುಲ್ ಅವರ ನಾಯಕತ್ವದಲ್ಲಿ ಆಡಿದ ಅನುಭವ ಹೊಂದಿರುವಿದು ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. " ಹರಾಜಿಗೂ ಮುನ್ನವೇ ನೂತನ ಫ್ರಾಂಚೈಸಿಗಳಿಗೆ ಆಯ್ಕೆ ಮಾಡಿಕೊಳ್ಳಲು ನೀಡಿರುವ ಅವಕಾಶದಲ್ಲಿ ನಾನು ತಂಡಕ್ಕೆ ಸೇರ್ಪಡೆಯಾಗಿರುವುದು ನನಗೆ ದೊರೆತ ಅದ್ಭುತವಾದ ಅವಕಾಶವಾಗಿದೆ. ನಾನು ಈ ತಂಡಕ್ಕಾಗಿ ನನ್ನ ಸಾಮರ್ರ್ಥಯದ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಬಯಸುವುದಾಗಿ ಹೇಳಿದ್ದಾರೆ.

Story first published: Thursday, January 27, 2022, 14:06 [IST]
Other articles published on Jan 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X