ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM: ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಧವನ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಉತ್ತಪ್ಪ

IND vs ZIM: Robin Uthappa Made A Big Statement About Shikhar Dhawan Before The 1st ODI

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಗುರುವಾರ (ಆಗಸ್ಟ್ 18) ನಡೆಯಲಿರುವ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆಯನ್ನು ಎದುರಿಸಲು ಸಜ್ಜಾಗಿದೆ. ಈ ಹಿಂದೆ ಶಿಖರ್ ಧವನ್‌ಗೆ ನಾಯಕತ್ವ ನೀಡಲಾಗಿತ್ತು, ಆದರೆ ಕನ್ನಡಿಗ ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರಿಂದ ಅವರಿಗೆ ನಾಯಕತ್ವ ನೀಡಿ, ಶಿಖರ್ ಧವನ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ.

"ಶಿಖರ್ ಧವನ್ ಭಾರತ ತಂಡದ ಸ್ಥಿರ ಪ್ರದರ್ಶನಕಾರರಲ್ಲಿ ಒಬ್ಬರು, ಆದರೆ ಅದಕ್ಕಿಂತ ಹೆಚ್ಚು ಮುಖ್ಯವಾಗಿ ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ನಿಷ್ಠಾವಂತರಲ್ಲಿ ಒಬ್ಬರು," ಎಂದು ಭಾರತದ ಮತ್ತೊಬ್ಬ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ.

ICC ODI Batting Ranking: ವಿರಾಟ್ ಕೊಹ್ಲಿಗಿಂತ ಮತ್ತಷ್ಟು ಮೇಲಕ್ಕೇರಿದ ಬಾಬರ್ ಅಜಂICC ODI Batting Ranking: ವಿರಾಟ್ ಕೊಹ್ಲಿಗಿಂತ ಮತ್ತಷ್ಟು ಮೇಲಕ್ಕೇರಿದ ಬಾಬರ್ ಅಜಂ

36 ವರ್ಷ ವಯಸ್ಸಿನ ಶಿಖರ್ ಧವನ್ ಸಂತೋಷದ-ಅದೃಷ್ಟದ ಮನೋಭಾವವನ್ನು ಹೊಂದಿದ್ದಾರೆ. ಅವರ ವೈಯಕ್ತಿಕ ಜೀವನದಲ್ಲಿ ಮತ್ತು ಪಿಚ್‌ನಲ್ಲಿ ಹಲವಾರು ಹಿನ್ನಡೆಗಳ ಹೊರತಾಗಿಯೂ, ಮುಂದೆ ಏನಾಗಲಿದೆ ಎಂಬುದರ ಕುರಿತು ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಉತ್ತಪ್ಪ ತಿಳಿಸಿದ್ದಾರೆ.

ಟಿ20 ತಂಡದಲ್ಲಿ ಭಾರತಕ್ಕಾಗಿ ಕಾಣಿಸಿಕೊಳ್ಳುವುದು ಅನುಮಾನ

ಟಿ20 ತಂಡದಲ್ಲಿ ಭಾರತಕ್ಕಾಗಿ ಕಾಣಿಸಿಕೊಳ್ಳುವುದು ಅನುಮಾನ

ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಇನ್ನು ಮುಂದೆ ಟೆಸ್ಟ್ ಅಥವಾ ಟಿ20 ತಂಡಗಳಲ್ಲಿ ಭಾರತಕ್ಕಾಗಿ ಕಾಣಿಸಿಕೊಳ್ಳುವುದು ಅನುಮಾನ. ಅವರು ಭಾರತಕ್ಕಾಗಿ ಈ ಎರಡು ಸ್ವರೂಪಗಳಲ್ಲಿ ಕಳಪೆ ಪ್ರದರ್ಶನ ನೀಡಿದರು, ಆದರೆ ತಂಡದಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆ ಇರುವುದರಿಂದ ಅವರನ್ನು ಲೆಕ್ಕಾಚಾರವಾಗಿ ತಂಡದಿಂದ ಹೊರಗಿಡಲಾಗಿದೆ.

ಶಿಖರ್ ಧವನ್ ಅವರ ವರ್ತನೆ ಮತ್ತು ಅವರು ಯಾವಾಗಲೂ ಸಂತೋಷವಾಗಿರಲು ಬಯಸುತ್ತಾರೆ ಎಂಬುದರ ಕುರಿತು ಮಾತನಾಡುತ್ತಾ, ಧವನ್ ಅವರ ಸ್ನೇಹಿತರೂ ಆಗಿರುವ ರಾಬಿನ್ ಉತ್ತಪ್ಪ ಅವರು ಶಿಖರ್ ಧವನ್‌ರನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

ಶಿಖರ್ ಧವನ್‌ರನ್ನು ಟಿ20 ನಾಯಕರನ್ನಾಗಿ ಮಾಡಲಾಗಿತ್ತು

ಶಿಖರ್ ಧವನ್‌ರನ್ನು ಟಿ20 ನಾಯಕರನ್ನಾಗಿ ಮಾಡಲಾಗಿತ್ತು

"ಕಳೆದ ವರ್ಷ ಶ್ರೀಲಂಕಾದಲ್ಲಿ ಶಿಖರ್ ಧವನ್‌ರನ್ನು ಟಿ20 ನಾಯಕರನ್ನಾಗಿ ಮಾಡಲಾಗಿತ್ತು. ಅವರು ಈ ವರ್ಷ ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿಗೆ ನಾಯಕನಾಗಿ ಮರಳಿದರು, ಆದರೆ ಈಗ ರಾಹುಲ್ ಮತ್ತೆ ಫಿಟ್ ಆಗಿರುವುದರಿಂದ, ನಾಯಕತ್ವವನ್ನು ಧವನ್‌ರಿಂದ ಹಿಂಪಡೆಯಲಾಗಿದೆ. ಆದರೂ ಆರಂಭಿಕ ಬ್ಯಾಟ್ಸ್‌ಮನ್ ನಕಾರಾತ್ಮಕತೆಯಿಂದ ತುಂಬಾ ದೂರ ಉಳಿದಿದ್ದಾರೆ," ಎಂದು ಶ್ಲಾಘಿಸಿದರು.

ಬುಧವಾರದಂದು ಭಾರತೀಯ ಪತ್ರಕರ್ತರೊಂದಿಗೆ ಮಾತನಾಡುತ್ತಾ ಉತ್ತರಿಸಿದ ರಾಬಿನ್ ಉತ್ತಪ್ಪ, "ನೀವು ಶಿಖರ್ ಅವರ ಕುರಿತು ತಿಳಿದರೆ, ಅವರು ಸಂತೋಷದ-ಅದೃಷ್ಟ ವ್ಯಕ್ತಿಗಳಲ್ಲಿ ಒಬ್ಬರು ಎಂದು ನೀವು ಅರ್ಥಮಾಡಿಕೊಳ್ಳುತ್ತಿರಿ ಎಂದು ನಾನು ಭಾವಿಸುತ್ತೇನೆ. ಅವನು ಎಲ್ಲವನ್ನೂ ಒಂದು ಚಿಟಿಕೆ ಉಪ್ಪಿನೊಂದಿಗೆ ತೆಗೆದುಕೊಳ್ಳುತ್ತಾನೆ, ಅವನೊಂದಿಗೆ ನಡೆಯುವ ಎಲ್ಲ ವಿಷಯವನ್ನು ಸಂತೋಷವಾಗಿ ಸ್ವೀಕರಿಸುತ್ತಾನೆ," ಎಂದರು.

ರಾಷ್ಟ್ರೀಯ ತಂಡದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದೆ

ರಾಷ್ಟ್ರೀಯ ತಂಡದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದೆ

ಶಿಖರ್ ಧವನ್ ತನ್ನನ್ನು ತಾನು ತುಂಬಾ ಗಂಭೀರವಾಗಿ ಪರಿಗಣಿಸದ ವ್ಯಕ್ತಿ, ಅದಕ್ಕಾಗಿಯೇ ನಾವು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಗೆ ನೋಡುತ್ತೇವೆ. ಅವನು ತುಂಬಾ ಖುಷಿಯಾಗಿರಲು ಇಷ್ಟಪಡುವ ವ್ಯಕ್ತಿ. ಅವನು 15 ಅಥವಾ 16 ವರ್ಷದಿಂದ ಹಾಗೆ ಇದ್ದಾನೆ ಎಂದು ಕನ್ನಡಿಗ ರಾಬಿನ್ ಉತ್ತಪ್ಪ ತಿಳಿಸಿದರು.

ಯುವ ಆಟಗಾರರ ಪೈಪೋಟಿ ಹೆಚ್ಚಾಗಿರುವುದರಿಂದ ಶಿಖರ್ ಧವನ್‌ಗೆ ಟಿ20 ರಾಷ್ಟ್ರೀಯ ತಂಡಕ್ಕೆ ಮರಳುವುದು ಕಠಿಣವಾಗಿದೆ ಮತ್ತು ವಯಸ್ಸು ಕೂಡ ಅವರ ಪರವಾಗಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರಾಬಿನ್ ಉತ್ತಪ್ಪ ಹೇಳಿದ್ದು, ಆದಾಗ್ಯೂ 2018ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಫಲ್ಯದ ನಂತರ ಶಿಖರ್ ಧವನ್ ಅವರು ಟೆಸ್ಟ್ ತಂಡದೊಂದಿಗೆ ಕಾಣಿಸಲಿಲ್ಲ ಎಂದು ಉತ್ತಪ್ಪ ಹೇಳಿದರು.

ಏಕದಿನ ಪಂದ್ಯಗಳಲ್ಲಿ 6493 ರನ್ ಗಳಿಸಿರುವ ಶಿಖರ್ ಧವನ್

ಏಕದಿನ ಪಂದ್ಯಗಳಲ್ಲಿ 6493 ರನ್ ಗಳಿಸಿರುವ ಶಿಖರ್ ಧವನ್

"ಶಿಖರ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ ಇರಲು ಅರ್ಹರು. 2018ರಲ್ಲಿ ಇಂಗ್ಲೆಂಡ್ ವಿರುದ್ಧದ ಅವರ ಪ್ರದರ್ಶನಗಳು ನನಗೆ ಸಾಕಷ್ಟು ನೆನಪಿಲ್ಲ ಆದರೆ ಅವರು ಮತ್ತು ಮುರಳಿ ವಿಜಯ್ ಅವರಂತಹವರು ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದರು. ಇಬ್ಬರೂ ಹೆಚ್ಚಿನ ರನ್ ಗಳಿಸಬೇಕಿತ್ತು. ಟಿ20 ಕ್ರಿಕೆಟ್‌ಗೆ ಕಠಿಣವಾಗಿ ಮತ್ತು ವೇಗದಲ್ಲಿ ಯುವಕರು ಬರುತ್ತಿದ್ದಾರೆ. ರೋಹಿತ್, ರಾಹುಲ್ ಮುಂತಾದವರು ಅಗ್ರ ಕ್ರಮಾಂಕದಲ್ಲಿ ಭದ್ರವಾಗಿದ್ದಾರೆ. ಶಿಖರ್‌ಗೆ 36 ವಯಸ್ಸಾಗಿರುವುದರಿಂದ ಆಯ್ಕೆದಾರರು ಭವಿಷ್ಯದ ಮೇಲೆ ಕಣ್ಣಿಟ್ಟಿದ್ದಾರೆ," ಎಂದು ಬಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟರು.

ಏಕದಿನ ಪಂದ್ಯಗಳಲ್ಲಿ 6493 ರನ್ ಗಳಿಸಿರುವ ಶಿಖರ್ ಧವನ್, ಮುಂಬರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಆಗಸ್ಟ್ 18ರಂದು ಪ್ರಾರಂಭವಾಗಲಿದ್ದು, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ. ಅವರು ಉತ್ತಮ ಪ್ರದರ್ಶನ ನೀಡಿದರೆ, ಏಕದಿನ ಕ್ರಿಕೆಟ್‌ನ ಅಗ್ರ 10 ಅತ್ಯುತ್ತಮ ಬ್ಯಾಟರ್ಸ್ ರ್‍ಯಾಂಕಿಂಗ್‌ಗೆ ಪ್ರವೇಶಿಸುವ ಅವಕಾಶವನ್ನು ಹೊಂದಿದ್ದಾರೆ.

Story first published: Wednesday, August 17, 2022, 21:44 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X