Ind vs ZIM: ಶುಭಮನ್ ಗಿಲ್‌ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದ ಮಾಜಿ ಸೆಲೆಕ್ಟರ್

ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ಸಜ್ಜಾಗಿದ್ದು, ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಭಾರತವು ಮುನ್ನಡೆಯಲಿದೆ. ಅಂತಿಮ ಹಂತದಲ್ಲಿ ನಾಯಕತ್ವದ ಬದಲಿಸಿದ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್, ಶಿಖರ್ ಧವನ್ ಬದಲಿಗೆ ಕೆ.ಎಲ್ ರಾಹುಲ್‌ಗೆ ಪಟ್ಟಕಟ್ಟಿದೆ.

ಕೆ.ಎಲ್ ರಾಹುಲ್ ಕಂಬ್ಯಾಕ್ ಆಗಿರುವುದರಿಂದ ಸಹಜವಾಗಿಯೇ ಉಪನಾಯಕ ರಾಹುಲ್, ರೋಹಿತ್ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ವಿಂಡೀಸ್‌ನಲ್ಲಿ ಯಶಸ್ವಿಯಾಗಿ ಭಾರತಕ್ಕೆ 3-0 ಅಂತರದಲ್ಲಿ ಗೆಲುವು ತಂದುಕೊಟ್ಟಿದ್ದ ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ಓಪನಿಂಗ್ ಜೋಡಿಯಾಗಿ ಕಾಣಿಸಿಕೊಳ್ಳಲಿದೆ.

ಶುಭಮನ್ ಗಿಲ್‌ಗೆ 3 ಕ್ರಮಾಂಕ

ಶುಭಮನ್ ಗಿಲ್‌ಗೆ 3 ಕ್ರಮಾಂಕ

ಮುಂಬರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಕೆ.ಎಲ್ ರಾಹುಲ್ ಓಪನರ್ ಆಗಿ ಕಣಕ್ಕಿಳಿಯುವುದು ಅನಿವಾರ್ಯವಾಗಿದೆ. ಪರಿಣಾಮ ಟಿ20 ಫಾರ್ಮೆಟ್‌ನಲ್ಲಿ ಅನನುಭವಿ ಶುಭಮನ್ ಗಿಲ್‌ಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ.

ಯುಎಇನಲ್ಲಿ ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದ್ದು, ಟೀಂ ಇಂಡಿಯಾ ಅದಕ್ಕೂ ಮೊದಲು ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಈ ಟೂರ್ನಿಗೆ ಪ್ರಮುಖ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್ ಅಲಭ್ಯರಾಗಿದ್ದಾರೆ.

NZ vs WI: ನ್ಯೂಜಿಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯ ಗೆದ್ದ ವೆಸ್ಟ್ ಇಂಡೀಸ್, ಕಿವೀಸ್‌ಗೆ ಸರಣಿ ಜಯ

ಕೆ.ಎಲ್ ರಾಹುಲ್ ಓಪನಿಂಗ್ ಆರಂಭಿಸಿ ಕಂಬ್ಯಾಕ್ ಮಾಡಬೇಕು: ದೇವಾಂಗ್ ಗಾಂಧಿ

ಕೆ.ಎಲ್ ರಾಹುಲ್ ಓಪನಿಂಗ್ ಆರಂಭಿಸಿ ಕಂಬ್ಯಾಕ್ ಮಾಡಬೇಕು: ದೇವಾಂಗ್ ಗಾಂಧಿ

"ಭಾರತೀಯ ತಂಡದ ಮ್ಯಾನೇಜ್‌ಮೆಂಟ್‌ನಿಂದ ಶುಭ್‌ಮನ್ ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ. ಆತ ಕೆರಿಬಿಯನ್ ಏಕದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಸಹ, ಬೇರೆ ಬೇರೆ ಕ್ರಮಾಂಕದಲ್ಲಿ ಆಡಲು ಸಿದ್ಧಪಡಿಸಬಹುದು. ಹಾಗಾಗಿ ಈ ನಿರ್ದಿಷ್ಟ ಸರಣಿಯಲ್ಲಿ ಶುಭಮನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಬೇಕು'' ಎಂದು ಮಾಜಿ ಟೀಂ ಇಂಡಿಯಾ ಆಯ್ಕೆಗಾರ ದೇವಾಂಗ್‌ ಗಾಂಧಿ ಹೇಳಿರುವುದಾಗಿ ನ್ಯೂಸ್‌ 18 ವರದಿ ಮಾಡಿದೆ.

ಪ್ರಪಂಚದಾದ್ಯಂತ ಕಾಡಿನಲ್ಲಿ 4,000 ಹುಲಿಗಳಿರಬಹುದು, ಆದ್ರೆ ಕೇವಲ ಒಬ್ಬ ರಾಹುಲ್ ದ್ರಾವಿಡ್: ರಾಸ್ ಟೇಲರ್

ಕೆ.ಎಲ್ ರಾಹುಲ್ ಏಷ್ಯಾಕಪ್ ವೇಳೆಗೆ ರೆಡಿಯಿರಬೇಕು!

ಕೆ.ಎಲ್ ರಾಹುಲ್ ಏಷ್ಯಾಕಪ್ ವೇಳೆಗೆ ರೆಡಿಯಿರಬೇಕು!

ಮುಂಬರುವ ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಕೆ.ಎಲ್ ರಾಹುಲ್ ಬೇಗನೆ ಫಾರ್ಮ್‌ಗೆ ಮರಳಬೇಕು. ಹೀಗಾಗಿ ಆತನಿಗೆ ಹೆಚ್ಚಿನ ಸಮಯವಿಲ್ಲದ ಕಾರಣ ಅಗ್ರಕ್ರಮಾಂಕದಲ್ಲಿ ಕಣಕ್ಕಿಳಿದು ರನ್ ಕಲೆಹಾಕಬೇಕಿದೆ ಎಂದು ದೇವಾಂಗ್ ಗಾಂಧಿ ಹೇಳಿದ್ದಾರೆ. ಶುಭಮನ್ ಗಿಲ್ ವಿಂಡೀಸ್ ವಿರುದ್ಧ ಉತ್ತಮವಾಗಿ ಆಡಿದ್ದರು ಮಧ್ಯಮ ಕ್ರಮಾಂಕದಲ್ಲಿ ಆಡುವುದು ಅನಿವಾರ್ಯ ಎಂದಿದ್ದಾರೆ.

'' ಅಂತಹ ಉತ್ತಮ ಸರಣಿಯನ್ನು ಪಡೆದ ನಂತರ ಓಪನಿಂಗ್ ಆಡದೇ(ಶುಭಮನ್) ಇರುವುದು ಕಷ್ಟ ಎಂದು ನಾನು ಒಪ್ಪುತ್ತೇನೆ. ಆದರೆ ಪ್ರಸ್ತುತ, ಏಷ್ಯಾಕಪ್ ಟಿ20 ಆರಂಭಿಕ ಸ್ಲಾಟ್‌ಗೆ ರಾಹುಲ್ ಅವರನ್ನು ಸಿದ್ಧಪಡಿಸುವುದು ಗುರಿಯಾಗಿದೆ. ಅವರು ಸಾಕಷ್ಟು ಬ್ಯಾಟಿಂಗ್ ಸಮಯವನ್ನು ಪಡೆಯಬೇಕಾಗಿದೆ ಮತ್ತು ಅದು ಆದ್ಯತೆಯಾಗಿದೆ. ಏಕದಿನ ವಿಶ್ವಕಪ್‌ಗೆ ಶುಭ್‌ಮನ್‌ರನ್ನು ಆರಂಭಿಕ ಆಟಗಾರನಾಗಿ ತಯಾರಿ ಮಾಡುತ್ತಿರುವುದರಿಂದ ಇದು ಅಲ್ಪಾವಧಿಯ ವ್ಯವಸ್ಥೆ ಎಂದು ನಾನು ಭಾವಿಸುತ್ತೇನೆ, "ಎಂದು ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ ಎಂದು ವರದಿಯಾಗಿದೆ.

ಮೂರು ಪಂದ್ಯಗಳ ಸರಣಿಗೆ ಭಾರತ ಮತ್ತು ಜಿಂಬಾಬ್ವೆ ಸ್ಕ್ವಾಡ್‌

ಮೂರು ಪಂದ್ಯಗಳ ಸರಣಿಗೆ ಭಾರತ ಮತ್ತು ಜಿಂಬಾಬ್ವೆ ಸ್ಕ್ವಾಡ್‌

ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆಗಸ್ಟ್‌ 18ರಂದು ಹರಾರೆಯಲ್ಲಿ ಪ್ರಾರಂಭಗೊಳ್ಳಲಿದೆ. ಕೆ.ಎಲ್ ರಾಹುಲ್ ನಾಯಕತ್ವದ ಟೀಂ ಇಂಡಿಯಾ ಸ್ಕ್ವಾಡ್ ಹಾಗೂ ಜಿಂಬಾಬ್ವೆ ಸ್ಕ್ವಾಡ್‌ ಈ ಕೆಳಗಿದೆ.

ಭಾರತ:
ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಾಹರ್.

ಜಿಂಬಾಬ್ವೆ
ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಂಗಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನೋಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮನಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾರ್ವಾ, ರಿಚರ್ಡ್‌ಟೋರ್ ನ್ಗಾರ್ವಾ, ಸಿಚಿಡ್‌ಟೊರ್ ನ್ಗರ್ವಾ, ವಿ. , ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, August 15, 2022, 9:03 [IST]
Other articles published on Aug 15, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X