ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಚಾ ಘೋಷ್ ಹೋರಾಟ ವ್ಯರ್ಥ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಸೋತ ಭಾರತ

Ind W vs Aus W, 4th T20I: Australia win by 7 run against India

ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿಯೂ ಭಾರತ ರೋಚಕ ಹೋರಾಟದ ನಂತರ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾ ನೀಡಿದ 189 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ನಿಗದಿತ 20 ಓವರ್‌ಗಳಲ್ಲಿ 181 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಹೀಗಾಗಿ 7 ರನ್‌ಗಳ ಅಂತರದಿಂದ ಹರ್ಮನ್‌ಪ್ರೀತ್ ಕೌರ್ ಬಳಕ ಸೋಲು ಅನುಭವಿಸಿದೆ. ಈ ಸೋಲಿನಿಂದಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು ಪ್ರವಾಸಿ ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದೆ.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಇಲ್ಯಾಸ್ ಪೆರಿ ಆಸರೆಯಾದರು. ಕೇವಲ 42 ಎಸೆತಗಳಲ್ಲಿ 72 ರನ್‌ಗಳನ್ನು ಬಾರಿಸಿದ ಪೆರಿ ಆಸ್ಟ್ರೇಲಿಯಾದ ದೊಡ್ಡ ಮೊತ್ತಕ್ಕೆ ಕಾರಣವಾದರು. ಗಾರ್ಡ್ನರ್ 42, ನಾಕಿ ಹೀಲಿ 30 ಹಾಗೂ ಹ್ಯಾರಿಸ್ 27 ರನ್‌ಗಳ ಕೊಡುಗೆ ನೀಡಿ ಮಿಂಚಿದ್ದಾರೆ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 188 ರನ್‌ಗಳನ್ನು ಗಳಿಸಿತು.

ರೊನಾಲ್ಡೊ ಜೊತೆ ಬಿಕ್ಕಟ್ಟು, ಪೋರ್ಚುಗಲ್‌ ಕೋಚ್ ಫರ್ನಾಂಡೊ ಸ್ಯಾಂಟೋಸ್ ರಾಜೀನಾಮೆರೊನಾಲ್ಡೊ ಜೊತೆ ಬಿಕ್ಕಟ್ಟು, ಪೋರ್ಚುಗಲ್‌ ಕೋಚ್ ಫರ್ನಾಂಡೊ ಸ್ಯಾಂಟೋಸ್ ರಾಜೀನಾಮೆ

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಲು ಭಾರತದ ಆರಂಭಿಕ ಆಟಗಾರರು ವಿಫಲವಾದರು. ಸ್ಮೃತಿ ಮಂಧಾನ 16 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಶಫಾಲಿ ವರ್ಮಾ 209 ರನ್‌ಗೆ ಔಟಾದರು. ಇನ್ನು ಬಳಿಕ ಬಂದ ಜಮಿಮಾ ಕೇವಲ 8 ರನ್‌ಗೆ ಔಟಾಗಿ ನಿರಾಸೆ ಅನುಭವಿಸಿದರು. ಈ ಸಂದರ್ಭದಲ್ಲಿ 49 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿತ್ತು.

ಈ ಸಂದರ್ಭದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ದೇವಿಕಾ ವೈದ್ಯ ಅದ್ಭುಯ ಜೊತೆಯಾಟವೊಂದನ್ನು ನೀಡಿದರು. 72 ರನ್‌ಗಳ ಜೊತೆಯಾಟವನ್ನು ನೀಡಿದ ಬಳಿಕ ಈ ಜೋಡಿ ಬೇರ್ಪಟ್ಟಿತು. ನಾಯಕಿ ಹರ್ಮನ್ 30 ಎಸೆತಗಳಲ್ಲಿ 46 ರನ್ ಸಿಡಿಸಿ ಔಟಾದರು. ನಂತರ ಕಣಕ್ಕಿಳಿದ ರಿಚಾ ಘೋಷ್ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ಭಾರತ ಗೆಲುವಿನ ಸಾಧ್ಯತೆ ಹೆಚ್ಚಿಸಿದರು. ರಿಷಾ ಘೋಷ್ 19 ಎಸೆತಗಳಲ್ಲಿ 40 ರನ್ ಬಾರಿಸಿ ಅಂತಿಮ ಹಂತದವರೆಗೆ ಹೋರಾಟ ನಡೆಸಿದರಾದರೂ ಭಾರತ ತಂಡಕ್ಕೆ ಗೆಲುವು ಸಾಧ್ಯವಾಗಲಿಲ್ಲ. ನಿಗದಿತ 20 ಓವರ್‌ಗಳಲ್ಲಿ 181 ರನ್‌ಗಳನ್ನಷ್ಟೇ ಗಳಿಸಲು ಭಾರತ ತಂಡಕ್ಕೆ ಸಾಧ್ಯವಾಯಿತು. ಈ ಮೂಲಕ 7 ರನ್‌ಗಳ ಅಂತರದ ಸೋಲು ಅನುಭವಿಸಿದೆ.

ಈ ಸೊಲಿನೊಂದಿಗೆ ಭಾರತ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಒಂದು ಪಂದ್ಯ ಬಾಕಿಯಿರುವಂತೆಯೇ 1-3 ಅಂತರದಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಬಿಟ್ಟುಕೊಟ್ಟಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳ ಅಂತರದ ಅಮೋಘ ಗೆಲುವು ಸಾಧಿಸಿದರೆ ಎರಡನೇ ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಸೂಪರ್ ಓವರ್‌ನಲ್ಲಿ ಭಾರತೀಯ ಮಹಿಳಾ ತಂಡ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 21 ರನ್‌ಗಳ ಅಂತರದ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು.

ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದಿದ್ದರೂ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಯ್ಕೆಯಾದ ಆಟಗಾರರು ಇವರು!ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದಿದ್ದರೂ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಯ್ಕೆಯಾದ ಆಟಗಾರರು ಇವರು!

ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೇವಿಕಾ ವೈದ್ಯ, ರಿಚಾ ಘೋಷ್ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ಅಂಜಲಿ ಸರ್ವಾಣಿ, ರೇಣುಕಾ ಠಾಕೂರ್ ಸಿಂಗ್
ಬೆಂಚ್: ಸಬ್ಬಿನೇನಿ ಮೇಘನಾ, ಮೇಘನಾ ಸಿಂಗ್, ಯಾಸ್ತಿಕಾ ಭಾಟಿಯಾ, ರಾಜೇಶ್ವರಿ ಗಾಯಕ್ವಾಡ್

ಆಸ್ಟ್ರೇಲಿಯಾ ಆಡುವ ಬಳಗ: ಅಲಿಸ್ಸಾ ಹೀಲಿ (ನಾಯಕಿ & ವಿಕೆಟ್ ಕೀಪರ್), ಬೆತ್ ಮೂನಿ, ತಹ್ಲಿಯಾ ಮೆಕ್‌ಗ್ರಾತ್, ಎಲ್ಲಿಸ್ ಪೆರ್ರಿ, ಆಶ್ಲೀ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಅನ್ನಾಬೆಲ್ ಸದರ್‌ಲ್ಯಾಂಡ್, ಹೀದರ್ ಗ್ರಹಾಂ, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್
ಬೆಂಚ್: ಅಮಂಡಾ ವೆಲ್ಲಿಂಗ್ಟನ್, ಫೋಬೆ ಲಿಚ್ಫೀಲ್ಡ್, ಕಿಮ್ ಗಾರ್ತ್, ನಿಕೋಲಾ ಕ್ಯಾರಿ

Story first published: Saturday, December 17, 2022, 22:33 [IST]
Other articles published on Dec 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X