ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರುತುರಾಜ್‌, ಶುಭ್‌ಮಾನ್‌ ಜೊತೆಯಾಟಕ್ಕೆ ಶರಣೆಂದ ವೆಸ್ಟ್ ಇಂಡೀಸ್ 'ಎ'

India A win fifth unofficial ODI against West Indies A, wrap up series 4-1

ಆ್ಯಂಟಿಗುವಾ, ಜುಲೈ 22: ಐದನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ 'ಎ' ತಂಡದ ಆರಂಭಿಕ ಬ್ಯಾಟ್ಸ್ಮನ್‌ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ಶುಭ್‌ಮಾನ್ ಗಿಲ್ ಚತುರ ಜೊತೆಯಾಟಕ್ಕೆ ವೆಸ್ಟ್ ಇಂಡೀಸ್ 'ಎ' 8 ವಿಕೆಟ್‌ನಿಂದ ಶರಣಾಗಿದೆ. ಈ ಗೆಲುವಿನೊಂದಿಗೆ ವಿಂಡೀಸ್ ಪ್ರವಾಸದಲ್ಲಿರುವ ಭಾರತ 'ಎ', ಐದು ಪಂದ್ಯಗಳ ಏಕದಿನ ಸರಣಿಯನ್ನು 4-1ರಿಂದ ಜಯಿಸಿದೆ.

ಆರ್ಮಿಯಲ್ಲಿ ಸೇವೆ ಸಲ್ಲಿಸುವ ಧೋನಿ ಕೋರಿಕೆಗೆ ಪ್ರತಿಕ್ರಿಯಿಸಿದ ಸೇನೆಆರ್ಮಿಯಲ್ಲಿ ಸೇವೆ ಸಲ್ಲಿಸುವ ಧೋನಿ ಕೋರಿಕೆಗೆ ಪ್ರತಿಕ್ರಿಯಿಸಿದ ಸೇನೆ

ಆ್ಯಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಜುಲೈ 21) ನಡೆದ ಐದನೇ ಮತ್ತು ಕೊನೆಯ ಅನಧಿಕೃತ ಏಕದಿನ ಪಂದ್ಯದಲ್ಲಿ 99 ರನ್ ಪೇರಿಸಿ ಕೀಮೋ ಪೌಲ್‌ಗೆ ವಿಕೆಟ್ ಒಪ್ಪಿಸಿದ ರುತುರಾಜ್, ಕೇವಲ 1 ರನ್‌ನಿಂದ ಶತಕದಿಂದ ವಂಚಿತರಾದರು.

ವಿಶ್ವಕಪ್: ಧವನ್ ಜಾಗಕ್ಕೆ ಪಂತ್‌ ತಂದಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್ವಿಶ್ವಕಪ್: ಧವನ್ ಜಾಗಕ್ಕೆ ಪಂತ್‌ ತಂದಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್

4ನೇ ಏಕದಿನ ಪಂದ್ಯವನ್ನು 5 ರನ್‌ನಿಂದ ಭಾರತ ಸೋಲದಿದ್ದರೆ ಆತಿಥೇಯ ವಿಂಡೀಸ್, ಈ ಅನಧಿಕೃತ ಏಕದಿನ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸುತ್ತಿತ್ತು.

ಆ್ಯಂಬ್ರಿಸ್, ರುದಫೋರ್ಡ್ ಅರ್ಧಶತಕ

ಆ್ಯಂಬ್ರಿಸ್, ರುದಫೋರ್ಡ್ ಅರ್ಧಶತಕ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ 'ಎ' ಪರ, ಆರಂಭಿಕ ಬ್ಯಾಟ್ಸ್ಮನ್ ಸುನಿಲ್ ಆ್ಯಂಬ್ರಿಸ್ ಉತ್ತಮ ಆಟವಾಡಿದರು. ಆ್ಯಂಬ್ರಿಸ್ 61 (52 ಎಸೆತ), ಕ್ಜಾರ್ನ್ ಒಟ್ಲೆ 21, ಶೆರ್ಫೇನ್ ರುದರ್ಫೋರ್ಡ್ 65, ರಹಕೀಮ್ ಕಾರ್ನ್‌ವಾಲ್ 10, ಕೀಮೋ ಪೌಲ್ 13, ಖೇರಿ ಪಿಯರೆ ಅಜೇಯ 35 ರನ್ ಸೇರಿಸಿದರು.

ಭಾರತಕ್ಕೆ 237 ರನ್ ಗುರಿ

ಭಾರತಕ್ಕೆ 237 ರನ್ ಗುರಿ

ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್, ಭಾರತಕ್ಕೆ 237 ರನ್ ಉತ್ತಮ ಗುರಿಯನ್ನೇ ನೀಡಿತ್ತು. 47.4 ಓವರ್‌ ಮುಕ್ತಾಯಕ್ಕೆ ವಿಂಡೀಸ್ ಎ ಸರ್ವ ಪತನ ಕಂಡು 236 ರನ್ ಮಾಡಿತ್ತು. ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ ವೇಳೆ ಭಾರತ 'ಎ'ಯ ದೀಪಕ್ ಚಾಹರ್ 2, ನವದೀಪ್ ಸೈನಿ 2, ದೀಪಕ್ ಚಾಹರ್ 2 ವಿಕೆಟ್ ಪಡೆದು ಎದುರಾಳಿಯ ರನ್ ಕದಿಯುವಿಕೆಗೆ ಕಡಿವಾಣ ಹಾಕಿದರು.

ಗಾಯಕ್ವಾಡ್, ಗಿಲ್ ಜೊತೆಯಾಟ

ಗಾಯಕ್ವಾಡ್, ಗಿಲ್ ಜೊತೆಯಾಟ

237 ರನ್‌ ಉತ್ತಮ ಗುರಿ ಬೆಂಬತ್ತಿದ ಭಾರತಕ್ಕೆ ರುತುರಾಜ್ ಗಾಯಕ್ವಾಡ್ ಮತ್ತು ಶುಭ್‌ಮಾನ್‌ ಗಿಲ್‌ ಅವರ ಭರ್ಜರಿ ಜೊತೆಯಾಟದ ಬೆಂಬಲ ದೊರೆಯಿತು. 11.2ನೇ ಓವರ್‌ಗೆ ಗಿಲ್ 69 ರನ್‌ಗೆ ವಿಕೆಟ್ ಒಪ್ಪಿಸುವಾಗ ಭಾರತದ ಖಾತೆಯಲ್ಲಿ 110 ರನ್ ಇತ್ತು. ಗಾಯಕ್ವಾಡ್ 99, ಶ್ರೇಯಸ್ ಐಯ್ಯರ್ ಅಜೇಯ 61, ನಾಯಕ ಮನೀಶ್ ಪಾಂಡೆ ಅಜೇಯ 7 ರನ್‌ನೊಂದಿಗೆ ಭಾರತ 33 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 237 ರನ್ ಗುರಿ ತಲುಪಿತು.

4-1ರಿಂದ ಸರಣಿ ವಶಕ್ಕೆ

4-1ರಿಂದ ಸರಣಿ ವಶಕ್ಕೆ

ಶುಭ್‌ಮಾನ್ ಗಿಲ್, ರುತುರಾಜ್ ಗಾಯಕ್ವಾಡ್, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ ಮತ್ತು ಅಕ್ಸರ್ ಪಟೇಲ್ ಉತ್ತಮ ಆಟದ ನೆರವಿನಿಂದ ಭಾರತ, ವಿಂಡೀಸ್ ಅನಧಿಕೃತ ಏಕದಿನ ಸರಣಿಯನ್ನು 4-1ರಿಂದ ಜಯಿಸಿದೆ. ಇನ್ನು 3 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಿದ್ದು, ಇದು ಜುಲೈ 27ರಿಂದ ಆರಂಭಗೊಳ್ಳಲಿದೆ.

Story first published: Monday, July 22, 2019, 12:38 [IST]
Other articles published on Jul 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X