Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ ಪಂದ್ಯಗಳು ಕಳೆಗುಂದಲಿವೆ: ಟೇಲರ್ ಎಚ್ಚರಿಕೆ!

India-Aus Boxing Day Test wont look great without crowds: Mark Taylor

ಮೆಲ್ಬರ್ನ್, ಜೂನ್ 29: ಆಸ್ಟ್ರೇಲಿಯಾ vs ಭಾರತ ತಂಡಗಳಂತ ಆಕರ್ಷಕ ಪಂದ್ಯಗಳು ವೀಕ್ಷಕರಿಲ್ಲದೆ ಕಳೆಗುಂದಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಾರ್ಕ್ ಟೇಲರ್ ಹೇಳಿದ್ದಾರೆ. ಹಿಂದೆ ಆಸ್ಟ್ರೇಲಿಯಾ-ಭಾರತ ಪಂದ್ಯಗಳ ವೇಳೆ ಮೈದಾನದಲ್ಲಿ ಪ್ರೇಕ್ಷಕರು ತುಂಬಿರುತ್ತಿದ್ದರು. ಆದರೆ ಈ ಬಾರಿ ಖಾಲಿ ಮೈದಾನದಲ್ಲಿ ಪಂದ್ಯ ನಡೆಸಬೇಕಾಗಿರುವುದಕ್ಕೆ ಮಾರ್ಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ರಾಜ್ಯ ವಿಕ್ಟೋರಿಯಾದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ-ಭಾರತ ಪಂದ್ಯಗಳನ್ನು ಬೇರೆಗೆ ಸ್ಥಳಾಂತರಿಸಬೇಕಾಗಿ ಬರಬಹುದು ಎಂದೂ ಮಾರ್ಕ್ ಟೇಲರ್ ಹೇಳಿದ್ದಾರೆ. ಪರ್ತ್ ಮತ್ತು ಅಡಿಲೇಡ್ ಓವಲ್‌ ಪ್ರದೇಶಗಳಲ್ಲಿ ಕೊರೊನಾ ಕೊಂಚ ನಿಯಂತ್ರಣದಲ್ಲಿದೆ ಎಂದವರು ಮಾಹಿತಿ ನೀಡಿದ್ದಾರೆ.

ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಗಳು ಅಕ್ಟೋಬರ್ 11ರಿಂದ ಆರಂಭಗೊಂಡು 2021ರ ಜನವರಿ 17ರಂದು ಕೊನೆಗೊಳ್ಳಲಿದೆ. ಪ್ರವಾಸವು 3 ಟಿ20ಐ ಪಂದ್ಯಗಳು, 4 ಟೆಸ್ಟ್ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ. ಇದರಲ್ಲಿ 4 ಪಂದ್ಯಗಳ ಬಾಕ್ಸಿಂಗ್‌ ಡೇ ಟೆಸ್ಟ್ ಪ್ರಮುಖ ಆಕರ್ಷಣೆಯಾಗಿರಲಿದೆ. ಕಳೆದ ಬಾರಿ ಭಾರತ ಈ ಟೆಸ್ಟ್ ಸರಣಿಯನ್ನು ಚೊಚ್ಚಲ ಬಾರಿಗೆ ಗೆದ್ದು ಇತಿಹಾಸ ನಿರ್ಮಿಸಿತ್ತು.

ವಿಕ್ಟೋರಿಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಮಾರ್ಕ್, 'ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ನ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳಬಹುದು. ಯಾಕೆಂದರೆ ಕ್ರಿಸ್ಮಸ್ ವೇಳೆಗೆ ಎಂಸಿಜಿಯಲ್ಲಿ ಕೇವಲ 10,000 or 20,000 ಮಂದಿಗಷ್ಟೇ ಪಂದ್ಯ ಆಯೋಜಿಸಲು ಸಾಧ್ಯವಾಗಲಿದೆ. ಇದು ಭಾರತ-ಆಸ್ಟ್ರೇಲಿಯಾ ತಂಡಗಳಂತ ಪಂದ್ಯಗಳಿಗೆ ನೋಡೋಕೆ ಚೆನ್ನಾಗಿ ಕಾಣಲಾರದು,' ಎಂದಿದ್ದಾರೆ.

Story first published: Monday, June 29, 2020, 11:45 [IST]
Other articles published on Jun 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+