ಕ್ರಿಕೆಟ್: ಶ್ರೀಲಂಕಾ ವಿರುದ್ಧ ಮುಯ್ಯಿ ತೀರಿಸಿಕೊಂಡ ಭಾರತ

Posted By:
ಇಂಡಿಯಾ vs ಲಂಕಾ ಟೀ20 : ಮುಯ್ಯಿ ತೀರಿಸಿಕೊಂಡ ಭಾರತ | Oneindia Kannada
India beat Sri Lanka by 6 wickets

ಕೊಲಂಬೊ, ಮಾರ್ಚ್ 13: ನಿದಹಾಸ್ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದ ಭಾರತ ನಿನ್ನೆಯ ಪಂದ್ಯದಲ್ಲಿ ಮುಯ್ಯಿ ತೀರಿಸಿಕೊಂಡಿದೆ.

ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಿನ್ನೆ ಸಂಜೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸಿದೆ.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾವನ್ನು ಭಾರತದ ಬೌಲರ್‌ಗಳು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರೂ, ಹೀಗಾಗಿ ಶ್ರೀಲಂಕಾ 19 ಓವರ್‌ಗಳಲ್ಲಿ 152 ಗಳಿಸಿತು. ಮೊತ್ತ ಬೆನ್ನತ್ತಿದ ಭಾರತದ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಆಟ ಪ್ರದರ್ಶಿಸಿ 17.3 ಓವರ್‌ಗೆ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದರು.

ಸ್ಕೋರ್ ಕಾರ್ಡ್

ಭಾರತದ ಬೌಲರ್‌ಗಳ ಪಾರಮ್ಯ

ಭಾರತದ ಬೌಲರ್‌ಗಳ ಪಾರಮ್ಯ

ಈ ಗೆಲುವಿನ ಶ್ರೇಯ ಹೆಚ್ಚು ಸಲ್ಲಬೇಕಾದ್ದು ಭಾರತದ ಬೌಲರ್‌ಗಳಿಗೆ, ಶಾರ್ದೂಲ್ ಠಾಕೂರ್ 4 ಓವರ್‌ಗಳಲ್ಲಿ 27 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿದರು. ಮತ್ತೊಂದು ಎಂಡ್‌ನಿಂದ ಬೌಲಿಂಗ್ ಮಾಡಿದ ವಾಷಿಂಗ್ಟನ್ ಸುಂದರ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಎರಡು ವಿಕೆಟ್ ಕಬಳಿಸಿದರು. ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಕ್ಕೆ ಕೈ ಹಾಕದಂತೆ ತಡೆದ ಅವರು ನಾಲ್ಕು ಓವರ್‌ನಲ್ಲಿ ಬಿಟ್ಟುಕೊಟ್ಟದ್ದು 21 ರನ್ ಮಾತ್ರ. ಇನ್ನುಳಿದಂತೆ ಚಾಹಲ್, ಜಯದೇವ್ ಉನದ್ಕತ್, ವಿಜಯ್ ಶಂಕರ್ ಅವರುಗಳು ತಲಾ ಒಂದು ವಿಕೆಟ್ ಗಳಿಸಿದರು. ಶಾರ್ದೂಲ್ ಠಾಕೂರ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಗೆಲುವು ತಂದಿದ್ದ ಕರ್ನಾಟಕದ ಆಟಗಾರ

ಗೆಲುವು ತಂದಿದ್ದ ಕರ್ನಾಟಕದ ಆಟಗಾರ

5 ನೇ ಬ್ಯಾಟ್ಸ್‌ಮನ್‌ ಆಗಿ ಸ್ಕ್ರೀಜಿಗಿಳಿದ ಕರ್ನಾಟಕದ ಮನೀಷ್ ಪಾಂಡೆ ಅತ್ಯುತ್ತಮ ಆಟವಾಡಿ ಭಾರತಕ್ಕೆ ಗೆಲುವಿಗೆ ತಂದಿತ್ತರು. ಆರಂಭದಲ್ಲಿ ಸ್ವಲ್ಪ ನಿಧಾನ ಗತಿಯ ಆಟವಾಡಿದ ಮನೀಷ್ ಆ ನಂತರ ಬಿರುಸಿನ ಆಟಕ್ಕೆ ಒಗ್ಗಿಕೊಂಡರು. ಅವರು 31 ಎಸೆತದಲ್ಲಿ 42 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು. ಕೊನೆಯ ವರೆಗೆ ಔಟಾಗದೆ ಉಳಿದ ಅವರು ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೆಂಡಿಸ್‌ ಅರ್ಧಶತಕ

ಮೆಂಡಿಸ್‌ ಅರ್ಧಶತಕ

ಶ್ರೀಲಂಕಾದ ಇನ್ನಿಂಗ್ಸ್‌ನಲ್ಲಿ ಗಮನ ಸೆಳೆಯುವ ಆಟವಾಡಿದ್ದು, ಆರಂಭಿಕ ಬ್ಯಾಟ್ಸ್‌ಮನ್‌ ಕುಶಾಲ್ ಮೆಂಡಿಸ್. ಅವರು 38 ಎಸೆತಗಳಿಗೆ 3 ಬೌಂಡರಿ ಮತ್ತು 3 ಭಾರಿಸಿದರು. ಅವರನ್ನು ಹೊರತು ಪಡಿಸಿ ತರಂಗಾ 22 ಮತ್ತು ಶಂಖಾ 19 ರನ್ ಗಳಿಸಿದರು. ಇನ್ನಾವ ಬ್ಯಾಟ್ಸ್‌ಮನ್‌ಗಳೂ ಗಮನ ಸೆಳೆಯುವ ಆಟವಾಡಲಿಲ್ಲ.

ಕಾರ್ತಿಕ್ ಉತ್ತಮ ಆಟ

ಕಾರ್ತಿಕ್ ಉತ್ತಮ ಆಟ

ಭಾರತದ ಇನ್ನಿಂಗ್ಸ್‌ನಲ್ಲಿ ಎಲ್ಲಾ ಬ್ಯಾಟ್ಸ್‌ಮನ್‌ಗಳು ಸರಾಸರಿ ರನ್‌ ಗಳಿಸಿದರು. ನಾಯಕ ರೋಹಿತ್ ಶರ್ಮಾ 11 ರನ್ ಗಳಿಸಿದರು. ಧವನ್ 8 ರನ್ ಗಳಿಸಿ ಔಟಾದರು. ಆ ನಂತರ ಕೆ.ಎಲ್ ರಾಹುಲ್ 18 ರನ್ ಗಳಿಸಿದರು. ಸುರೇಶ್ ರೈನಾ 27 ರನ್ ಭಾರಿಸಿದರು. ಮನೀಷ್ ಪಾಂಡೆ 42 ರನ್ ಗಳಿಸಿದರು. ದಿನೇಶ್ ಕಾರ್ತಿಕ್ 39 ರನ್ ಗಳಿಸಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಹಾಗೂ ಮನೀಷ್ ಪಾಂಡೆ ನಡುವಿನ ಜೊತೆಯಾಟ ಉತ್ತಮವಾಗಿ ಮೂಡಿಬಂತು.

Story first published: Tuesday, March 13, 2018, 10:24 [IST]
Other articles published on Mar 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ