ಭಾರತ vs ನ್ಯೂಜಿಲೆಂಡ್: ಟೀಮ್ ಇಂಡಿಯಾ ಬೆಂಬಿಡದ 'ಫೈನ್' ಬೇತಾಳ!

IND vs NZ 1st ODI : Team India fined for slow over rate | Fine | Over rate | Oneindia Kannada

ಹ್ಯಾಮಿಲ್ಟನ್, ಫೆಬ್ರವರಿ 5: ನ್ಯೂಜಿಲೆಂಡ್‌ ಪ್ರವಾಸ ಸರಣಿಯಲ್ಲಿ ಟೀಮ್ ಇಂಡಿಯಾ ದಂಡದ ಮೇಲೆ ದಂಡ ತೆರುತ್ತಿದೆ. ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಎರಡು ಪಂದ್ಯಗಳಿಗೆ ವಿರಾಟ್ ಕೊಹ್ಲಿ ಪಡೆ ದಂಡ ತೆತ್ತಿತ್ತು. ಹ್ಯಾಮಿಲ್ಟನ್‌ನಲ್ಲಿ ನಡೆದ ಇತ್ತಂಡಗಳ ಮೊದಲ ಏಕದಿನ ಪಂದ್ಯಕ್ಕೂ ಭಾರತ ಭಾರೀ ದಂಡ ತೆರಬೇಕಾಗಿ ಬಂದಿದೆ.

ಭಾರತ vs ಕಿವೀಸ್: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿಭಾರತ vs ಕಿವೀಸ್: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಬುಧವಾರ (ಫೆಬ್ರವರಿ 5) ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ ಸ್ಲೋ ಓವರ್‌ ರೇಟ್‌ಗಾಗಿ ಭಾರತಕ್ಕೆ ಬಿಸಿಸಿಐ ಪಂದ್ಯದ ಸಂಭಾವನೆಯ ಶೇ.80ರಷ್ಟು ದಂಡ ವಿಧಿಸಿದೆ. ಪಂದ್ಯದಲ್ಲಿ 4 ವಿಕೆಟ್‌ಗಳ ಸೋಲನುಭವಿಸಿರುವ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಹಿನ್ನಡೆಯಲ್ಲಿದೆ.

ಭಾರತ vs ನ್ಯೂಜಿಲೆಂಡ್: ಏಕದಿನ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿ ಮಿಂಚಿದ ಶ್ರೇಯಸ್ ಅಯ್ಯರ್ಭಾರತ vs ನ್ಯೂಜಿಲೆಂಡ್: ಏಕದಿನ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿ ಮಿಂಚಿದ ಶ್ರೇಯಸ್ ಅಯ್ಯರ್

ಮ್ಯಾಚ್‌ ರೆಫರೀ ಕ್ರಿಸ್ ಬೋರ್ಡ್ ಅವರು ಕೊಹ್ಲಿ ಪಡೆಗೆ ದಂಡ ವಿಧಿಸಿದ್ದಾರೆ. ನ್ಯೂಜಿಲೆಂಡ್‌ ಇನ್ನಿಂಗ್ಸ್‌ನಲ್ಲಿ ಭಾರತ ನಿಗದಿತ ಸಮಯಕ್ಕಿಂತ ನಾಲ್ಕು ಓವರ್‌ಗಳನ್ನು ನಿಧಾನವಾಗಿ ಎಸೆದಿದ್ದಕ್ಕಾಗಿ ದಂಡ ತೆರಬೇಕಾಗಿ ಬಂದಿದೆ. ಸ್ಲೋ ಓವರ್‌ಗಾಗಿಯೇ ಭಾರತಕ್ಕೆ, ಟಿ20ಐ ಸರಣಿಯ 4ನೇ ಪಂದ್ಯದಲ್ಲಿ 40 ಶೇ., 5ನೇ ಪಂದ್ಯದಲ್ಲಿ 20 ಶೇ. ದಂಡ ವಿಧಿಸಲಾಗಿತ್ತು.

ವಿವಿಎಸ್‌ ಲಕ್ಷ್ಮಣ್, ಎವರ್ಟನ್ ವೀಕ್ಸ್‌ ದಾಖಲೆ ಸರಿಗಟ್ಟಿದ ಸರ್ಫರಾಜ್‌ ಖಾನ್‌!ವಿವಿಎಸ್‌ ಲಕ್ಷ್ಮಣ್, ಎವರ್ಟನ್ ವೀಕ್ಸ್‌ ದಾಖಲೆ ಸರಿಗಟ್ಟಿದ ಸರ್ಫರಾಜ್‌ ಖಾನ್‌!

ಟಿ20ಐ ಪಂದ್ಯಗಳಲ್ಲಿ, ಎದುರಾಳಿ ಬ್ಯಾಟಿಂಗ್‌ ಮಾಡುತ್ತಿದ್ದರೆ ಆ ಇನ್ನಿಂಗ್ಸನ್ನು 1ರಿಂದ 1.30 ಗಂಟೆಯೊಳಗಾಗಿ ಮುಗಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಫೀಲ್ಡರ್ ತಂಡದ ಮೇಲೆ ಮೇಲಿರುತ್ತದೆ. ಆ ಕಾಲಾವಧಿ ಮೀರಿ ಎಸೆದ ಓವರ್‌ ಒಂದಕ್ಕೆ ಶೇ.20ರಂತೆ ದಂಡ ತೆರಬೇಕಾಗುತ್ತದೆ. ಏಕದಿನದಲ್ಲಾದರೆ ಗಂಟೆಗೆ 15 ಓವರ್‌ ಮುಗಿಸಬೇಕಿರುತ್ತದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, February 5, 2020, 19:14 [IST]
Other articles published on Feb 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X