ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಡಿಐ ಸೂಪರ್ ಲೀಗ್‌ ಟೇಬಲ್‌ನಲ್ಲಿ ಪಾಕ್‌ಗಿಂತ ಕೆಳ ಕುಸಿದ ಭಾರತ!

India lose a point due to slow over-rate in ODI Super League point table

ಕ್ಯಾನ್ಬೆರಾ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಪುರುಷರ ಏಕದಿನ ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ ಟೇಬಲ್‌ನಲ್ಲಿ ಆ್ಯರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಅಗ್ರ ಸ್ಥಾನಕ್ಕೇರಿದೆ. ಭಾರತ ತಂಡ 6ನೇ ಸ್ಥಾನಕ್ಕೆ ಕುಸಿದಿದೆ. ಬುಧವಾರವಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯ ಬಳಿಕ ಸೂಪರ್ ಲೀಗ್ ಪಾಯಿಂಟ್ಸ್ ಟೇಬಲ್‌ನಲ್ಲಿ ಏರಿಳಿತಗಳಾಗಿವೆ.

ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಸೋಲು ಕಂಡಿದೆ. ಅಂತಿಮ ಪಂದ್ಯದಲ್ಲಿ ಭಾರತ ತಂಡ 13 ರನ್‌ಗಳಿಂದ ಗೆದ್ದಿತ್ತು. ಅಂತಿಮ ಪಂದ್ಯ ಗೆದ್ದಿದ್ದಕ್ಕಾಗಿ ತಂಡದ ಖಾತೆಗೆ 10 ಪಾಯಿಂಟ್ಸ್‌ ಲಭಿಸಿದ್ದವು. ಆದರೆ ಸ್ಲೋ ಓವರ್‌ ರೇಟ್‌ನಿಂದಾಗಿ 1 ಅಂಕವನ್ನು ಕಳೆಯಲಾಗಿದೆ. ಈಗ ತಂಡದ ಖಾತೆಯಲ್ಲಿ 9 ಅಂಕಗಳಿವೆ.

ವರ್ಲ್ಡ್ ಕಪ್ ಸೂಪರ್ ಲೀಗ್ ಪಾಯಿಂಟ್ಸ್‌ ಟೇಬಲ್‌ನಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಆಸ್ಟ್ರೇಲಿಯಾ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 2 ಸೋತು 40 ಅಂಕ ಕಲೆ ಹಾಕಿದೆ. ದ್ವಿತೀಯ ಸ್ಥಾನದಲ್ಲಿರುವ ಇಂಗ್ಲೆಂಡ್ 6ರಲ್ಲಿ 3 ಪಂದ್ಯಗಳನ್ನು ಗೆದ್ದು 30 ಅಂಕ ಪಡೆದಿದೆ. ತೃತೀಯ ಸ್ಥಾನಿ ಪಾಕಿಸ್ತಾನ 3ರಲ್ಲಿ 2 ಗೆಲುವಿನೊಂದಿಗೆ 20 ಅಂಕ ಗಳಿಸಿದೆ.

ಆಸಿಸ್ ವಿರುದ್ಧದ ಸರಣಿಯಲ್ಲಿ ಆಡದಿದ್ದರೂ ODIನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾಆಸಿಸ್ ವಿರುದ್ಧದ ಸರಣಿಯಲ್ಲಿ ಆಡದಿದ್ದರೂ ODIನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ

4ನೇ ಸ್ಥಾನದಲ್ಲಿರುವ ಜಿಂಬಾಬ್ವೆ 3ರಲ್ಲಿ 1 ಪಂದ್ಯ ಗೆದ್ದು 10 ಪಾಯಿಂಟ್ಸ್‌ಗಳಿಸಿದೆ. 5ನೇ ಸ್ಥಾನದಲ್ಲಿ ಐರ್ಲೆಂಡ್‌ ಇದ್ದು 1 ಪಂದ್ಯ ಗೆದ್ದಿದೆ. ಭಾರತ ತಂಡ 3ರಲ್ಲಿ ಒಂದು ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಸ್ಲೋ ಓವರ್‌ ರೇಟ್‌ಗಾಗಿ ಪಂದ್ಯ ಸಂಭಾವನೆಯ 20 ಶೇ. ದಂಡ ನೀಡಿತ್ತು.

Story first published: Thursday, December 3, 2020, 10:02 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X