ಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಸಂಭಾವ್ಯ XI ಭಾರತ ತಂಡ

India’s predicted XI for 2nd ODI – Vijay Shankar out, Rishabh Pant in

ನಾಗ್ಪುರ್, ಮಾರ್ಚ್ 4: ಹೈದರಾಬಾದ್‌ನಲ್ಲಿ ಶನಿವಾರ (ಮಾರ್ಚ್ 2) ನಡೆದಿದ್ದ ಭಾರತ vs ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಜಯ ಸಾಧಿಸಿತ್ತು. ನಾಗ್ಪುರದಲ್ಲಿ ನಡೆಯುವ ದ್ವಿತೀಯ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ 2-0ಯ ಮುನ್ನಡೆ ಸಾಧಿಸುವತ್ತ ಭಾರತ ಕಣ್ಣಿಟ್ಟಿದೆ.

ಲೋಕಸಭೆ ಚುನಾವಣೆ ಸಮರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ಕ್ರಿಕೆಟರ್ ಪತ್ನಿ

ಹೈದರಾಬಾದ್ ಪಂದ್ಯದಲ್ಲಿ ಭಾರತ ಸುಲಭ ಗೆಲುವು ದಾಖಲಿಸಿಲ್ಲ. ಉತ್ತಮ ಬ್ಯಾಟ್ಸ್ಮನ್‌ಗಳಿದ್ದರೂ ಭಾರತ ತಂಡ ಗೆಲುವಿನ ನೆಲೆಯಲ್ಲಿ ಹೆಣಗಾಡಿತ್ತು. ಕೊನೆಗೆ ರೋಚಕ ಹಂತಕ್ಕೆ ತಲುಪಿದ್ದ ಪಂದ್ಯವನ್ನು ಎಂಎಸ್ ಧೋನಿ ಮತ್ತು ಕೇದಾರ್ ಜಾಧವ್ ಗೆಲ್ಲಿಸಿಕೊಟ್ಟರು. ಅಂತೂ ಭಾರತ ಆಸ್ಟ್ರೇಲಿಯಾ ನೀಡಿದ್ದ 236/7 ಗುರಿಯನ್ನು 240/4 ಮೂಲಕ ತಲುಪಿತ್ತು.

ದ್ವಿತೀಯ ಏಕದಿನ ಪಂದ್ಯ: ಆಸ್ಟ್ರೇಲಿಯಾಕ್ಕೆ ತಲೆ ನೋವಾದ ಎಂಎಸ್ ಧೋನಿ!

ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 5) 1.30 pmಗೆ ಆರಂಭಗೊಳ್ಳಲಿದೆ. ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಕೆಳಗಿನಂತಿದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಭಾರತಕ್ಕೆ ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಉತ್ತಮ ಫಾರ್ಮ್ ನಲ್ಲಿ ಇರುವುದಕ್ಕೆ ಸಾಕ್ಷಿ ಒದಗಿಸಿಲ್ಲ. ಆದರೆ ಇತ್ತಂಡಗಳ ನಡುವಣ ದ್ವಿತೀಯ ಏಕದಿನ ಪಂದ್ಯದಲ್ಲಿ ರೋಹಿತ್ ಸ್ಥಾನ ಪಡೆಯಲಿದ್ದಾರೆ. ಪಂದ್ಯದಲ್ಲಿ ಚೇತರಿಕೆ ಕಾಣುವ ನಿರೀಕ್ಷೆಯಿದೆ.

ಶಿಖರ್ ಧವನ್

ಶಿಖರ್ ಧವನ್

ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದರು. ತೀರ ಇತ್ತೀಚಿನ ಪಂದ್ಯಗಳಲ್ಲಿ ಧವನ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ದ್ವಿತೀಯ ಪಂದ್ಯದಲ್ಲೂ ಧವನ್ ಆರಂಭಿಕರಾಗಿ ಮೈದಾನಕ್ಕಿಳಿಯಲಿದ್ದು ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಆರಂಭಿಕ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ 44 ರನ್ ಕೊಡುಗೆ ನೀಡಿದ್ದರು. ಈ ಏಕದಿನ ಸರಣಿಯಲ್ಲಿ ಕೊಹ್ಲಿ ಅಥವಾ ರೋಹಿತ್ ಶತಕ ಬಾರಿಸಿದರೆ ದಾಖಲೆ ನಿರ್ಮಾಣವಾಗುವುದರಲ್ಲಿದೆ. ಹೀಗಾಗಿ ಕೊಹ್ಲಿ ನಾಗ್ಪುರ ಪಂದ್ಯದಲ್ಲಿ ಹೆಚ್ಚಿನ ರನ್ ಗಳಿಸುವತ್ತ ಗಮನ ಹರಿಸಬೇಕಿದೆ.

ಅಂಬಾಟಿ ರಾಯುಡು

ಅಂಬಾಟಿ ರಾಯುಡು

ಕೆಲ ಪಂದ್ಯಗಳಲ್ಲಿ ಭಾರತದ ತಂಡದ ಬೆಂಬಲಕ್ಕೆ ನಿಲ್ಲುತ್ತಿದ್ದ ಹೈದರಾಬಾದ್ ಆಟಗಾರ ಅಂಬಾಟಿ ರಾಯುಡು ಕೂಡ ಕಳೆದ ಪಂದ್ಯದಲ್ಲಿ ಭಾರತದ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ವಿಫಲರಾಗಿದ್ದರು. ಆದರೆ ರಾಯುಡು ದ್ವಿತೀಯ ಪಂದ್ಯದಲ್ಲಿ ಚೇತರಿಕೆ ಕಾಣುವ ನಿರೀಕ್ಷೆಯಿದೆ.

ಎಂಎಸ್ ಧೋನಿ

ಎಂಎಸ್ ಧೋನಿ

ಟೀಕೆಗೆ ಒಳಗಾದರೂ ಧೋನಿ ತಂಡದ ಬಲವಾಗಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಪಂದ್ಯದಲ್ಲಿ ಧೋನಿಯವರದೇ ಎರಡನೇ ವೈಯಕ್ತಿಯ ಅಧಿಕ ರನ್ (59). ಅಲ್ಲದೆ ಪಂದ್ಯದ ಗೆಲುವಿನ ವರೆಗೂ ಧೋನಿ ವಿಕೆಟ್ ಕಾವಲು ಕಾದಿದ್ದರು. ಹೀಗಾಗಿ ಧೋನಿ ತಂಡದಲ್ಲಿದ್ದು ಗೆಲುವಿನ ಆಸೆಗೆ ಆಸರೆಯಾಗಲಿದ್ದಾರೆ.

ಕೇದಾರ್ ಜಾಧವ್

ಕೇದಾರ್ ಜಾಧವ್

ಕೇದಾರ್ ಜಾಧವ್ ಮೊದಲ ಏಕದಿನ ಪಂದ್ಯದಲ್ಲಿ 87 ಎಸೆತಗಳಲ್ಲಿ 81 ರನ್ ಗಳಿಸಿದ್ದರು. ಪಂದ್ಯದಲ್ಲಿ ಜಾಧವ್ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದಿದ್ದೂ ಗಮನ ಸೆಳೆದಿತ್ತು. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಜಾಧವ್ ಮತ್ತೆ ಕಣಕ್ಕಿಳಿಯಲಿದ್ದಾರೆ.

ರಿಷಬ್ ಪಂತ್

ರಿಷಬ್ ಪಂತ್

ಕಳೆದ ಪಂದ್ಯದಲ್ಲಿ ತಂಡದಲ್ಲಿ ವಿಜಯ್ ಶಂಕರ್ ಸ್ಥಾನ ಪಡೆದಿದ್ದರು. ಮಾರ್ಚ್ 5ರ ಪಂದ್ಯದಲ್ಲಿ ಶಂಕರ್ ಬದಲಿಗೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ರಿಷಬ್ ಪಂತ್‌ಗೆ ಸ್ಥಾನ ದೊರಕುವ ನಿರೀಕ್ಷೆ ಹೆಚ್ಚಿದೆ. ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯುವ ಆಟಗಾರ ಪಂತ್‌ಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ನಾಯಕ ಕೊಹ್ಲಿ ಹೇಳಿರುವುದರಿಂದ ದ್ವಿತೀಯ ಪಂದ್ಯದಲ್ಲಿ ಪಂತ್ ಕಾಣಿಸಿಕೊಳ್ಳಲಿದ್ದಾರೆ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮ ಬೌಲಿಂಗ್ ಮಾಡಿದರು. ಆಫ್-ಸ್ಪಿನ್ನರ್ ತನ್ನ 10-ಓವರ್ ನಲ್ಲಿ ಎದುರಾಳಿಗೆ ಕೇವಲ 33 ರನ್‌ಗಳನ್ನು ಮಾತ್ರ ನೀಡಿದ್ದರು. ಆಲ್ ರೌಂಡರ್ ಆಗಿರುವುದರಿಂದ ವಿಶ್ವಕಪ್ ನೆಲೆಯಲ್ಲಿ ಜಡೇಜಾಗೂ ನಾಗ್ಪುರ ಪಂದ್ಯ ಮಹತ್ವದ್ದು.

ಕುಲದೀಪ್ ಯಾದವ್

ಕುಲದೀಪ್ ಯಾದವ್

ಕುಲದೀಪ್ ಯಾದವ್ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಅದ್ಭುತ ಪ್ರದರ್ಶನ ನೀಡಿದರು. ಚೈನಮನ್ ಬೌಲರ್ ಯಾದವ್, ಉಸ್ಮಾನ್ ಖವಾಜ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ವಿಕೆಟ್ ಗಳನ್ನು ಕೆಡವಿ 2/46 ಸಾಧನೆ ತೋರಿದ್ದರು. ಕಳೆದ ಎರಡು ವರ್ಷಗಳಲ್ಲಿ ಕುಲದೀಪ್ ಟೀಮ್ ಇಂಡಿಯಾದಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

ಹೈದರಾಬಾದ್ ಪಂದ್ಯದ ಗೆಲುವಿನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳ ಸಾಧನೆಯನ್ನು ಕಡೆಗಣಿಸುವಂತಿಲ್ಲ. ಅದರಲ್ಲೂ ವೇಗಿ ಮೊಹಮ್ಮದ್ ಉತ್ತಮ ಪ್ರದರ್ಶನ ನೀಡಿದ್ದರು. ಒಟ್ಟು 10 ಓವರ್‌ಗಳನ್ನು ಎಸೆದಿದ್ದ ಶಮಿ 44 ರನ್ನಿಗೆ 2 ವಿಕೆಟ್ ಮುರಿದಿದ್ದರು.

ಜಸ್‌ಪ್ರೀತ್ ಬೂಮ್ರಾ

ಜಸ್‌ಪ್ರೀತ್ ಬೂಮ್ರಾ

ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಬೂಮ್ರಾ 10 ಓವರ್‌ಗೆ 60 ರನ್‌ ನೀಡಿ 2 ವಿಕೆಟ್ ಪಡೆದಿದ್ದರು. ನಾಳಿನ (ಮಾರ್ಚ್ 5) ಪಂದ್ಯದಲ್ಲಿ ಬೂಮ್ರಾ ಇನ್ನೂ ಸುಧಾರಣೆ ಕಾಣಬಲ್ಲರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, March 4, 2019, 17:31 [IST]
Other articles published on Mar 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more