ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜ.1ರಂದು BCCIನಿಂದ ಭಾರತದ ಟಿ20 ವಿಶ್ವಕಪ್ ಪ್ರದರ್ಶನ ಪರಿಶೀಲನಾ ಸಭೆ

Indias T20 World Cup Performance Review Meeting by BCCI on January 1

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಭಾನುವಾರ, ಜನವರಿ 1ರಂದು ಭಾರತ ತಂಡದ 2022ರ ಟಿ20 ವಿಶ್ವಕಪ್ ಪ್ರದರ್ಶನದ ಪರಿಶೀಲನಾ ಸಭೆ ನಡೆಸಲಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೂಡಾ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯ ಮೊದಲು ನಡೆಯಲಿರುವ ಪರಿಶೀಲನಾ ಸಭೆಯ ಭಾಗವಾಗಲಿದ್ದಾರೆ.

ಇದು ಕೊಹ್ಲಿಯ 2022ರ ಅತ್ಯುತ್ತಮ ಇನ್ನಿಂಗ್ಸ್; ಟಿ20ಗೆ ಸೂರ್ಯ, ಟೆಸ್ಟ್‌ಗೆ ಪಂತ್; ಹೀಗಿದೆ ಕಾರ್ತಿಕ್ ಲೆಕ್ಕಾಚಾರಇದು ಕೊಹ್ಲಿಯ 2022ರ ಅತ್ಯುತ್ತಮ ಇನ್ನಿಂಗ್ಸ್; ಟಿ20ಗೆ ಸೂರ್ಯ, ಟೆಸ್ಟ್‌ಗೆ ಪಂತ್; ಹೀಗಿದೆ ಕಾರ್ತಿಕ್ ಲೆಕ್ಕಾಚಾರ

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಅಭಿಯಾನವನ್ನು ಹೊಂದಿರಲಿಲ್ಲ. ಸೂಪರ್ 12 ಹಂತದಲ್ಲಿ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದ ನಂತರ, ಭಾರತ ಕ್ರಿಕೆಟ್ ತಂಡ ಅಡಿಲೇಡ್ ಓವಲ್‌ನಲ್ಲಿ ಜೋಸ್ ಬಟ್ಲರ್‌ ನಾಯಕತ್ವದ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲನ್ನು ಅನುಭವಿಸಿತು.

Indias T20 World Cup Performance Review Meeting by BCCI on January 1

ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಅತ್ಯಧಿಕ ಜೊತೆಯಾಟವನ್ನು ಆಡಿ ಗೆಲ್ಲಿಸಿದರು.

ಟಿ20 ವಿಶ್ವಕಪ್ ಬಳಿಕ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಲಾಗಿತ್ತು. ಶುಕ್ರವಾರ, ಡಿಸೆಂಬರ್ 30ರಂದು ಕ್ರಿಕೆಟ್ ಸಲಹಾ ಸಮಿತಿಯು ಮುಂಬೈನಲ್ಲಿ ಸಭೆ ನಡೆಸಿ ಆಯ್ಕೆ ಸಮಿತಿ ಹುದ್ದೆಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಶಾರ್ಟ್‌ಲಿಸ್ಟ್ ಮಾಡಿದೆ.

ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಪಾಂಡ್ಯ ಬ್ರದರ್ಸ್ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಪಾಂಡ್ಯ ಬ್ರದರ್ಸ್

ಅಶೋಕ್ ಮಲ್ಹೋತ್ರಾ, ಸುಲಕ್ಷಣ ನಾಯಕ್ ಮತ್ತು ಜತಿನ್ ಪರಾಂಜ್ಪೆ ಅವರು ಡಿಸೆಂಬರ್ ತಿಂಗಳ ಆರಂಭದಲ್ಲಿ ರಚಿಸಲಾದ ಕ್ರಿಕೆಟ್ ಸಲಹಾ ಸಮಿತಿಯ ಭಾಗವಾಗಿದ್ದಾರೆ.

Indias T20 World Cup Performance Review Meeting by BCCI on January 1

ವರದಿಗಳ ಪ್ರಕಾರ, ಹರ್ವಿಂದರ್ ಸಿಂಗ್ ಮತ್ತು ಚೇತನ್ ಶರ್ಮಾ ಆಯ್ಕೆ ಸಮಿತಿ ಸ್ಥಾನಕ್ಕೆ ಮರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಇತರರಲ್ಲಿ ಮಾಜಿ ಬಲಗೈ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಮತ್ತು ವಿಕೆಟ್ ಕೀಪರ್ ನಯನ್ ಮೊಂಗಿಯಾ ಸೇರಿದ್ದಾರೆ.

ಭಾರತ ತಂಡ ಇತ್ತೀಚೆಗೆ ಬಾಂಗ್ಲಾದೇಶ ಪ್ರವಾಸದಿಂದ ಹಿಂದಿರುಗಿದೆ. ಭಾರತ ಅಲ್ಲಿ ಟೆಸ್ಟ್ ಸರಣಿಯನ್ನು 2-0 ಗೆದ್ದಿತು. ಆದರೆ ಏಕದಿನ ಸರಣಿಯನ್ನು 1-2 ರಲ್ಲಿ ಸೋಲನುಭವಿಸಿತು. ಅದಕ್ಕೂ ಮುನ್ನ ಭಾರತ ನ್ಯೂಜಿಲೆಂಡ್ ನೆಲದಲ್ಲಿ ದ್ವಿಪಕ್ಷೀಯ ಸರಣಿಗಳನ್ನೂ ಆಡಿತ್ತು.

ಜನವರಿ 3ರಂದು ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಆಯ್ಕೆಮಾಡಲಾಗಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಅರ್ಶ್‌ದೀಪ್ ಸಿಂಗ್.

Story first published: Saturday, December 31, 2022, 22:07 [IST]
Other articles published on Dec 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X