ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

1985ರ ಭಾರತ ತಂಡ ವಿರಾಟ್ ತಂಡಕ್ಕೆ ಟಕ್ಕರ್ ಕೊಡುವಷ್ಟು ಪ್ರಭಲವಾಗಿತ್ತು: ರವಿ ಶಾಸ್ತ್ರಿ

Indias Team Of 1985 Could Trouble Virat Kohlis Side

ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ 1985ರ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಸಕ್ತ ತಂಡದೊಂದಿಗೆ ಹೋಲಿಕೆ ಮಾಡಿದ್ದಾರೆ. ಅಂದಿನ ತಂಡದ ಎಷ್ಟೊಂದು ಬಲಿಷ್ಠವಾಗಿತ್ತು ಎಂಬುದನ್ನು ರವಿಶಾಸ್ತ್ರಿ ಮೆಲುಕು ಹಾಕಿದ್ದಾರೆ. ಹಾಲಿ ಟೀಮ್ ಇಂಡಿಯಾದ ಕೋಚ್ ಆಗಿರುವ ಬಗ್ಗೆಯೂ ರವಿ ಶಾಸ್ತ್ರಿ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

1985ರಲ್ಲಿ ವಿಶ್ವ ಕ್ರಿಕೆಟ್ ಚಾಂಪಿಯನ್‌ಷಿಪ್ ನಡೆದಿತ್ತು. ಇದರಲ್ಲಿ ಭಾರತ ತಂಡ ಬಲಿಷ್ಠ ತಂಡಗಳನ್ನು ಮಣಿಸಿ ಚಾಂಪಿಯನ್ ಎನಿಸಿತ್ತು. ಸುನಿಲ್ ಗವಾಸ್ಕರ್, ಕಪಿಲ್ ದೇವ್, ಮೊಹಿಂದರ್ ಅಮರನಾಥ್, ರವಿ ಶಾಸ್ತ್ರಿ ಸೇರಿದಂತೆ ಬಲಿಷ್ಠ ಆಟಗಾರರನ್ನು ಹೊಂದಿತ್ತು ಅಂದಿನ ಭಾರತ ತಂಡ. ಆ ಬಲಿಷ್ಠ ತಂಡಕ್ಕೆ ಪ್ರಸಕ್ತ ಟೀಮ್ ಇಂಡಿಯಾವನ್ನು ರವಿ ಶಾಸ್ತ್ರಿ ಹೋಲಿಕೆ ಮಾಡಿದ್ದಾರೆ.

ಕೆ.ಎಲ್ to ಡಿ.ಕೆ : ಐಪಿಎಲ್‌ನಲ್ಲಿ ತವರು ತಂಡವನ್ನು ಮುನ್ನಡೆಸದ ಐದು ಸ್ಟಾರ್ ಆಟಗಾರರುಕೆ.ಎಲ್ to ಡಿ.ಕೆ : ಐಪಿಎಲ್‌ನಲ್ಲಿ ತವರು ತಂಡವನ್ನು ಮುನ್ನಡೆಸದ ಐದು ಸ್ಟಾರ್ ಆಟಗಾರರು

ಈಗಿನ ವಿರಾಟ್ ಕೊಹ್ಲಿ ತಂಡಕ್ಕೆ 1985ರ ಭಾರತ ತಂಡ ಕಠಿಣ ಪೈಪೋಟಿ ನೀಡಲಿದೆ ಎಂದು ರವಿ ಶಾಸ್ತ್ರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಜೊತೆಗೆ ಅಂದಿನ ವಿಶ್ವ ಕ್ರಿಕೆಟ್ ಚಾಂಪಿಯನ್‌ಷಿಪ್ ತಂಡದ ಭಾಗವಾಗಿದ್ದ ಬಳಿಕ ಈಗಿನ ತಂಡದ ಕೋಚ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ.

1983ರ ವಿಶ್ವಕಪ್ ಗೆದ್ದ ತಂಡಕ್ಕಿಂತಲೂ 1985ರ ತಂಡ ಅತ್ಯಂತ ಬಲಿಷ್ಠವಾಗಿತ್ತು ಮತ್ತು ತಾಂತ್ರಿಕವಾಗಿ ಉತ್ತಮವಾಗಿತ್ತು ಎಂಬ ವಿಚಾರವನ್ನು ರವಿ ಶಾಸ್ತ್ರಿ ಹೇಳಿದ್ದಾರೆ. 1985ರ ತಂಡ ಯುವ ಹಾಗೂ ಅನುಭವಿ ಆಟಗಾರರ ಸಮತೋಲಿತ ತಂಡವಾಗಿತ್ತು ಎಂದು ಅವರು ಹೇಳಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ನಿಸ್ವಾರ್ಥ ಆಟಗಳುಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ನಿಸ್ವಾರ್ಥ ಆಟಗಳು

ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಹೇಳಿದ ರವಿ ಶಾಸ್ತ್ರಿ ಅಂದಿನ ತಂಡ ಇಂದಿನ ಭಾರತೀಯ ಕ್ರಿಕೆಟ್ ತಂಡಕ್ಕೆ ಕಠಿಣ ಸವಾಲನ್ನು ನೀಡುವ ತಾಕತ್ತು ಹೊಂದಿತ್ತು ಎಂದು ಹೇಳಿಕೊಂಡಿದ್ದಾರೆ.

Story first published: Wednesday, May 6, 2020, 21:31 [IST]
Other articles published on May 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X