ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS: ಟಿ20 ಸರಣಿಯ ದಿನಾಂಕ, ಸಮಯ, ಸ್ಥಳ, ತಂಡಗಳು ಮತ್ತು ಲೈವ್‌ಸ್ಟ್ರೀಮ್ ವಿವರ

 India vs Australia T20 Series: Date, Time, Venue, Full Teams and Livestream Details

ಮುಂಬರುವ ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯುವ ಪ್ರಮುಖ ಟಿ20 ವಿಶ್ವಕಪ್ 2022 ಟೂರ್ನಿಗಿಂತ ಮುಂಚಿತವಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ದ್ವಿಪಕ್ಷೀಯ ಟಿ20 ಸರಣಿ ಆಡಲಿವೆ.

ಪರಸ್ಪರ ತಂಡಗಳು ಎದುರಾದಾಗ ಟಿ20 ವಿಶ್ವಕಪ್‌ಗೆ ಅಂತಿಮ ಅಭ್ಯಾಸದ ಗುರಿಯನ್ನು ಹೊಂದಿದ್ದು, ಅದು ಕೆಲವು ನಿಕಟ ಸ್ಪರ್ಧೆ ಮತ್ತು ಟಿ20 ವಿಶ್ವಕಪ್ ಪಂದ್ಯಗಳಿಗೆ ಭರವಸೆ ನೀಡುತ್ತದೆ. ವಿಶ್ವದ ದಿಗ್ಗಜ ತಂಡಗಳಿಗೆ 2ನೇ ಬಾರಿ ಟಿ20 ಪ್ರಶಸ್ತಿ ಎತ್ತಿಹಿಡಿಯುವ ಗುರಿಯಾಗಿದೆ.

ಟಿ20 ವಿಶ್ವಕಪ್‌: ಈ ಸ್ಟಾರ್ ಆಟಗಾರನ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟ; ಮಹೇಲಾ ಜಯವರ್ಧನೆಟಿ20 ವಿಶ್ವಕಪ್‌: ಈ ಸ್ಟಾರ್ ಆಟಗಾರನ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟ; ಮಹೇಲಾ ಜಯವರ್ಧನೆ

ಆಸ್ಟ್ರೇಲಿಯ ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ. ಮತ್ತೊಂದೆಡೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಈವೆಂಟ್‌ನಲ್ಲಿ ಭಾಗವಹಿಸಲು ಬಯಸುವ ಆಡುವ ಹನ್ನೊಂದರ ಬಳಗ ಪಡೆಯಲು ಬಯಸುತ್ತದೆ. ಈ ಸರಣಿಯು ಭಾರತಕ್ಕೆ ಕೊನೆಯ ಕ್ಷಣದ ಯೋಜನೆಗಳನ್ನು ಮಾಡಲು ಉತ್ತಮ ಅವಕಾಶವನ್ನು ನೀಡುತ್ತದೆ.

ಭಾರತ vs ಆಸ್ಟ್ರೇಲಿಯ ನಡುವಿನ 3 ಟಿ20 ಪಂದ್ಯಗಳು ಯಾವಾಗ ನಡೆಯಲಿವೆ?

ಭಾರತ vs ಆಸ್ಟ್ರೇಲಿಯ ನಡುವಿನ 3 ಟಿ20 ಪಂದ್ಯಗಳು ಯಾವಾಗ ನಡೆಯಲಿವೆ?

3 ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 20ರಂದು (ಗುರುವಾರ) ಪ್ರಾರಂಭವಾಗುತ್ತದೆ. 2ನೇ ಟಿ20 ಪಂದ್ಯ ಸೆಪ್ಟೆಂಬರ್ 23ರಂದು (ಶುಕ್ರವಾರ) ನಡೆಯಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದೆ.

ಭಾರತ vs ಆಸ್ಟ್ರೇಲಿಯ ಟಿ20 ಪಂದ್ಯಗಳನ್ನು ಯಾವ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಆಯೋಜಿಸುತ್ತವೆ?
ಮೊದಲ ಟಿ20 ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ.

2ನೇ ಟಿ20 ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ.

3ನೇ ಟಿ20 ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

IND vs AUS ಟಿ20 ಪಂದ್ಯಗಳ ಸಮಯ ಹೇಗಿದೆ?

IND vs AUS ಟಿ20 ಪಂದ್ಯಗಳ ಸಮಯ ಹೇಗಿದೆ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎಲ್ಲಾ 3 ಟಿ20 ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪ್ರಾರಂಭವಾಗುತ್ತವೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಯಾವ ಚಾನಲ್‌ಗಳು IND vs AUS ಟಿ20 ಸರಣಿಯನ್ನು ಪ್ರಸಾರ ಮಾಡುತ್ತವೆ?
IND vs AUS ಟಿ20 ಸರಣಿಯು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.

IND vs AUS ಟಿ20 ಪಂದ್ಯಗಳ ಲೈವ್‌ಸ್ಟ್ರೀಮ್ ಅನ್ನು ನಾವು ಎಲ್ಲಿ ವೀಕ್ಷಿಸಬಹುದು?
IND vs AUS ಟಿ20 ಸರಣಿಯನ್ನು Hotstar ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.

ಟಿ20 ಸರಣಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಪೂರ್ಣ ತಂಡಗಳು

ಟಿ20 ಸರಣಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಪೂರ್ಣ ತಂಡಗಳು

ಆಸ್ಟ್ರೇಲಿಯಾ ತಂಡ: ಸೀನ್ ಅಬಾಟ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್ , ಆಡಮ್ ಝಂಪಾ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್. ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.

Story first published: Saturday, September 17, 2022, 16:02 [IST]
Other articles published on Sep 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X