ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ನಲ್ಲಿ ಬೆಲ್ ಬಾರಿಸಿದ ದೀಪ್ತಿ ಶರ್ಮಾ

India vs England: All-rounder Deepti Sharma rings bell at Lords

ಲಂಡನ್: ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ಪಂದ್ಯದ ವೇಳೆ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ದೀಪ್ತಿ ಶರ್ಮಾ ಬೆಲ್ ಬಾರಿಸಿದ್ದಾರೆ. ಅಂದರೆ ಭಾನುವಾರ (ಆಗಸ್ಟ್ 15) ನಾಲ್ಕನೇ ದಿನದಾಟ ಆರಂಭವಾಗುವ ಸೂಚನೆಗಾಗಿ ದೀಪ್ತಿಗೆ ಹೀಗೆ ಬೆಲ್ ಬಾರಿಸುವ ಅವಕಾಶ ಸಿಕ್ಕಿದೆ. ಈ ಸಂಪ್ರದಾಯ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ.

ಐಪಿಎಲ್ ದ್ವಿತೀಯ ಹಂತದಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ಆಟಗಾರರ ಪಟ್ಟಿಐಪಿಎಲ್ ದ್ವಿತೀಯ ಹಂತದಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ಆಟಗಾರರ ಪಟ್ಟಿ

ಲಾರ್ಡ್ಸ್‌ನಲ್ಲಿ ಟೆಸ್ಟ್‌ ಪಂದ್ಯಗಳು ನಡೆಯುತ್ತಿದ್ದಾಗ ದಿನದಾಟ ಶುರುವಾಗುವ ಮುನ್ನ ಹೀಗೆ ಹಳೆಯ ಸಂಪ್ರದಾಯದಂತೆ ಬೆಲ್ ಬಾರಿಸಲಾಗುತ್ತದೆ. 2007ರಿಂದಲೂ ಈ ಸಂಪ್ರದಾಯ ನಡೆಸಿಕೊಂಡು ಬರಲಾಗುತ್ತಿದೆ. ಹೀಗೆ ಬೆಲ್ ಬಾರಿಸುವ ಅವಕಾಶ ಸಿಗೋದು ಒಂದು ರೀತಿಯ ಗೌರವ. ಆ ಗೌರವ ಭಾನುವಾರ ಭಾರತದ ಆಟಗಾರ್ತಿ ದೀಪ್ತಿ ಶರ್ಮಾಗೆ ಸಿಕ್ಕಿದೆ.

ಬೆಲ್ ಬಾರಿಸಿದ ಎರಡನೇ ಭಾರತೀಯೆ ದೀಪ್ತಿ ಶರ್ಮಾ

ಬೆಲ್ ಬಾರಿಸಿದ ಎರಡನೇ ಭಾರತೀಯೆ ದೀಪ್ತಿ ಶರ್ಮಾ

ದ ಹಂಡ್ರೆಡ್ ಟೂರ್ನಿ ಆಡುವುದಕ್ಕಾಗಿ ಸದ್ಯ ದೀಪ್ತಿ ಶರ್ಮಾ ಇಂಗ್ಲೆಂಡ್‌ನಲ್ಲಿದ್ದಾರೆ. 100 ಎಸೆತಗಳ ಟೂರ್ನಿ ಹಂಡ್ರೆಡ್‌ನಲ್ಲಿ ದೀಪ್ತಿ ಲಂಡನ್ ಸ್ಪಿರಿಟ್ ತಂಡ ಪ್ರತಿನಿಧಿಸುತ್ತಿದ್ದಾರೆ. ಹಂಡ್ರೆಡ್‌ನಲ್ಲಿ ಇಲ್ಲೀವರೆಗೆ ಒಟ್ಟು 7 ಪಂದ್ಯಗಳನ್ನಾಡಿರುವ ದೀಪ್ತಿ 77 ರನ್, 8 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ನಡೆಯುತ್ತಿರುವ ಲಾರ್ಡ್ಸ್ ಟೆಸ್ಟ್‌ನಲ್ಲಿ ಬೆಲ್ ಬಾರಿಸುತ್ತಿರುವ ಎರಡನೇ ಭಾರತೀಯೆ ದೀಪ್ತಿ. ಇದಕ್ಕೂ ಮುನ್ನ ಅಂದರೆ ಮೂರನೇ ದಿನದಾಟದಲ್ಲಿ ಭಾರತದ ಮಾಜಿ ಕ್ರಿಕೆಟರ್ ಫಾರೂಕ್ ಇಂಜಿನಿಯರ್ ಬೆಲ್ ಬಾರಿಸಿದ್ದರು. ಲ್ಯಾನ್ಸೆಶೈರ್ ಪರ ಆಡಿದ್ದ ಫಾರೂಕ್ ಅಲ್ಲಿ ತನ್ನ ವೃತ್ತಿ ಜೀವನಕ್ಕೂ ಮುನ್ನವೇ ಯುನೈಟೆಡ್ ಕಿಂಗ್ಡಮ್‌ಗೆ ತೆರಳಿ ಅಲ್ಲೇ ವಾಸವಾಗಿದ್ದಾರೆ. ಶನಿವಾರ ಮೂರನೇ ದಿನದಾಟದ ವೇಳೆ ಫಾರೂಕ್ ಸುಮಾರು ಐದು ನಿಮಿಷಗಳ ಕಾಲ ಬೆಲ್ ಬಾರಿಸಿದ್ದರು.

ಭಾರತದ ಆರಂಭಿಕ ಇನ್ನಿಂಗ್ಸ್‌ ಸ್ಕೋರ್

ಭಾರತದ ಆರಂಭಿಕ ಇನ್ನಿಂಗ್ಸ್‌ ಸ್ಕೋರ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ 129, ಚೇತೇಶ್ವರ್ ಪೂಜಾರ 9, ವಿರಾಟ್ ಕೊಹ್ಲಿ 42, ಅಜಿಂಕ್ಯ ರಹಾನೆ 1, ರಿಷಭ್ ಪಂತ್ 37, ರವೀಂದ್ರ ಜಡೇಜಾ 40, ಮೊಹಮ್ಮದ್ ಶಮಿ ೦, ಇಶಾಂತ್ ಶರ್ಮಾ 8 ರನ್‌ ಬಾರಿಸಿದರು. ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿತು. ರಾಹುಲ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಾರಿಸಿದ 6ನೇ ಶತಕವಿದು. ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ ಪ್ರಮುಖ 5 ವಿಕೆಟ್‌ ಉರುಳಿಸಿ ಗಮನ ಸೆಳೆದರು. 29 ಓವರ್‌ ಎಸೆದಿದ್ದ ಆ್ಯಂಡರ್ಸನ್ 62 ರನ್ ನೀಡಿ 5 ವಿಕೆಟ್ ಮುರಿದಿದ್ದರು. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್‌ ಬೂಮ್ರಾ ವಿಕೆಟ್ ಗಳನ್ನು ಆ್ಯಂಡರ್ಸನ್ ಕೆಡವಿದರು. ಇನ್ನು ಆಲಿ ರಾಬಿನ್ಸನ್ 73 ರನ್‌ಗೆ 2, ಮಾರ್ಕ್ ವುಡ್ 91 ರನ್‌ಗೆ 2, ಮೊಯೀನ್ ಅಲಿ 53 ರನ್‌ ಗೆ 1 ವಿಕೆಟ್ ಪಡೆದರು (ಚಿತ್ರದಲ್ಲಿ ಫಾರೂಕ್ ಇಂಜಿನಿಯರ್).

ಲಾರ್ಡ್ಸ್ ಬಾಲ್ಕನಿಯಲ್ಲಿ ನಾಗಿನ್ ಡ್ಯಾನ್ಸ್ ಮಾಡಿ ನಕ್ಕು ನಲಿಸಿದ ಕೊಹ್ಲಿ | Oneindia Kannada
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ ಸ್ಕೋರ್‌

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ ಸ್ಕೋರ್‌

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 49, ಡೊಮಿನಿಕ್ ಸಿಬ್ಲಿ 11, ಹಸೀಬ್ ಹಮೀದ್ 0, ಜೋ ರೂಟ್ 180, ಜಾನಿ ಬೈರ್‌ಸ್ಟೊವ್ 57, ಜೋಸ್ ಬಟ್ಲರ್ 23, ಮೊಯೀನ್ ಅಲಿ 27, ಸ್ಯಾಮ್ ಕರನ್ , ಒಲ್ಲಿ ರಾಬಿನ್ಸನ್ 6, ಮಾರ್ಕ್ ವುಡ್ 5 ರನ್ ಬಾರಿಸಿದರು. ಇಂಗ್ಲೆಂಡ್ 128 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 391 ರನ್ ಗಳಿಸಿ 27 ರನ್ ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಇಶಾಂತ್ ಶರ್ಮಾ 3, ಮೊಹಮ್ಮದ್ ಶಮಿ 2, ಮೊಹಮ್ಮದ್ ಸಿರಾಜ್ 4 ವಿಕೆಟ್‌ನಿಂದ ಗಮನ ಸೆಳೆದರು. ಅಂದ್ಹಾಗೆ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 300+ ರನ್‌ ಗಳಿಸಿದವತ್ತು ಪಂದ್ಯ ಸೋತಿದ್ದೇ ಇಲ್ಲ. ಹೀಗಾಗಿ ದ್ವಿತೀಯ ಟೆಸ್ಟ್‌ನಲ್ಲಿ ಭಾರತ ಗೆಲ್ಲುವ ನಿರೀಕ್ಷೆಯಿದೆ. ಈಗ ಭಾರತ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.

Story first published: Sunday, August 15, 2021, 21:09 [IST]
Other articles published on Aug 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X